BBK11: ಫಿನಾಲೆಗೂ ಮುನ್ನ ವಿನ್ನರ್ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?
Team Udayavani, Jan 13, 2025, 4:09 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada-11) ರ ಫಿನಾಲೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಫಿನಾಲೆಗೆ ದಿನ ಹತ್ತಿರವಾಗುತ್ತಿದ್ದಂತೆ ವಿನ್ನರ್ ಯಾರು ಎನ್ನುವುದರ ಬಗ್ಗೆ ಪ್ರಶ್ನೆಯ ಜತೆ ಕುತೂಹಲ ಹೆಚ್ಚಾಗಿದೆ.
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ. ಚೈತ್ರಾ ಆಚೆ ಹೋದ ಬಳಿಕ ಬಿಗ್ ಬಾಸ್ ಸೆಮಿ ಫೈನಲ್ ಆಟ ಶುರುವಾಗಿದೆ. ಈ ವಾರ ವಾರದ ಮಧ್ಯದಲ್ಲೇ ಒಬ್ಬರು ಸ್ಪರ್ಧಿ ಮನೆಯಿಂದ ಆಚೆ ಬರಲಿದ್ದಾರೆ. ಟಾಸ್ಕ್‌ನಲ್ಲಿ ಗೆಲ್ಲುವವರು ಮಿಡ್ ವೀಕ್ ಎಲಿಮಿನೇಷನ್ ನಿಂದ ಪಾರಾಗಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಟ್ರೋಫಿ ಮೇಲೆ ಹಲವು ಸ್ಪರ್ಧಿಗಳು ಕಣ್ಣಿಟ್ಟಿದ್ದಾರೆ. ಆದರೆ ಟ್ರೋಫಿ ಒಬ್ಬರಿಗೆ ಮಾತ್ರ ಸಿಗಲಿದೆ. ಹನುಮಂತು ʼಟಿಕೆಟ್ ಟು ಫಿನಾಲೆʼ ಟಾಸ್ಕ್ ಗೆದ್ದು ಫಿನಾಲೆಗೆ ಹೋಗಿದ್ದಾರೆ. ಅವರೊಂದಿಗೆ ಇನ್ನು ಯಾರೆಲ್ಲ ಫಿನಾಲೆ ವೇದಿಕೆ ಹತ್ತಲಿದ್ದಾರೆ ಎನ್ನುವುದರ ಬಗ್ಗೆ ಕುತೂಹಲವಿದೆ.
ರಜತ್, ತ್ರಿವಿಕ್ರಮ್ ಅವರು ಫಿನಾಲೆಗೆ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಇನ್ನುಳಿದವರ ನಡುವೆ ತೀವ್ರ ಪೈಪೋಟಿ ಸಾಗಲಿದೆ.
ವಿಕಿಪಿಡಿಯಾ ಎಡವಟ್ಟು ವಿನ್ನರ್ ಹೆಸರು ಘೋಷಣೆ: ಫಿನಾಲೆ ಇನ್ನು ಕೆಲವೇ ದಿನಗಳಿಷ್ಟೇ ಇವೆ. ಈ ನಡುವೆ ವಿಕಿಪಿಡಿಯಾ ಬಿಗ್ ಬಾಸ್ ಸೀಸನ್ -11ರ ವಿನ್ನರ್ ಯಾರೆಂದು ಫಿನಾಲೆಗೂ ಮೊದಲೇ ಹೆಸರು ರಿವೀಲ್ ಮಾಡಿ ಇಕ್ಕಟ್ಟಿಗೆ ಸಿಲುಕಿದೆ.
ವಿಕಿಪಿಡಿಯಾದಲ್ಲಿ ಹನುಮಂತು ವಿನ್ನರ್, ತ್ರಿವಿಕ್ರಮ್ ರನ್ನರ್ ಅಪ್ ಎಂದು ವಿಕಿಪಿಡಿಯಾದಲ್ಲಿ ಹಾಕಲಾಗಿದೆ. ಫಿನಾಲೆಗೂ ಮುನ್ನ ಈ ರೀತಿ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ನೋಡಿ ಕೆಲ ವೀಕ್ಷಕರು ಖುಷ್ ಆಗಿದ್ದು, ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.
ತಪ್ಪಿನ ಅರಿವಾದ ಬಳಿಕ ವಿಕಿಪಿಡಿಯಾ ಹಾಕಿದ್ದ ವಿನ್ನರ್ ಹಾಗೂ ರನ್ನರ್ ಅಪ್ ಸ್ಪರ್ಧಿಯ ಹೆಸರನ್ನು ತೆಗೆದು ಹಾಕಿದೆ. ಆ ಬಳಿಕ ‘TBA’ ಅಂದರೆ ʼto be announcedʼ ಎಂದು ಹಾಕಿಕೊಂಡಿದೆ. ಆದರೆ ವಿನ್ನರ್ ಎಂದು ಹಾಕಿದ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿದೆ.
ವಿಕಿಪಿಡಿಯಾದಲ್ಲಿ ಯಾವ ಮಾಹಿತಿಯನ್ನು ಆಧರಿಸಿ ಹೆಸರನ್ನು ಹಾಕಿದ್ದಾರೆ ಎನ್ನುವುದರ ಬಗ್ಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇನ್ನು ಹನುಮಂತು ಫಿನಾಲೆಗೆ ಪ್ರವೇಶ್ ಪಡೆದಿದ್ದು, ರಜತ್, ತ್ರಿವಿಕ್ರಮ್, ಮೋಕ್ಷಿತಾ, ಮಂಜು, ಧನರಾಜ್ , ಭವ್ಯಾ ಅವರು ಇತರೆ ಸ್ಪರ್ಧಿಯಾಗಿ ಮನೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್
BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ
MUST WATCH
ಹೊಸ ಸೇರ್ಪಡೆ
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Udupi: ಮಾದಕ ವಸ್ತು ಮಾರಾಟಕ್ಕೆ ಯತ್ನ… ನಾಲ್ವರು ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.