BBK11: ಮಂಜು ಮ್ಯಾಚ್ ಫಿಕ್ಸಿಂಗ್ ಗೇಮ್: ಮೋಕ್ಷಿತಾ ,ಗೌತಮಿ ಜತೆ ಫ್ರೆಂಡ್ಸ್ ಶಿಪ್ ಬ್ರೇಕ್


Team Udayavani, Nov 5, 2024, 11:06 PM IST

BBK11: ಮಂಜು ಮ್ಯಾಚ್ ಫಿಕ್ಸಿಂಗ್ ಗೇಮ್: ಮೋಕ್ಷಿತಾ, ಗೌತಮಿ ಫ್ರೆಂಡ್ಸ್ ಶಿಪ್ ಬ್ರೇಕ್

ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ಸ್ನೇಹಿತರಾಗಿದ್ದವರು ಪರಸ್ಪರ ವಾಗ್ವಾದಕ್ಕಿಳಿದ ಸನ್ನಿವೇಶಗಳು ನಡೆದಿವೆ.

ವಿವಿಧ ರೀತಿಯ ಅಧಿಕಾರ ಪಡೆಯುವ ಟಾಸ್ಕ್ ನ್ನು ಬಿಗ್ ಬಾಸ್ ನೀಡಿದ್ದಾರೆ. ವಿವಿಧ ಕಾರ್ಡ್ ಗಳಿದ್ದು, ಟಾಸ್ಕ್ ಆಡಿ ಗೆದ್ದ ತಂಡಗಳು ಕಾರ್ಡ್ ನ ಲಾಭ‌ ಪಡೆದು ತಮಗೆ ಸಿಗುವ ಅಧಿಕಾರವನ್ನು ಪಡೆಯಬಹುದಾಗಿದೆ.

ತಮಗೆ ಬೇಕಾದ ಊಟ, ಬೇಕಾದ ಬೆಡ್, ನಾಮಿನೇಟ್ ‌ನಿಂದ ಪಾರು, ಕ್ಯಾಪ್ಟನ್ಸಿ ಹೀಗೆ ನಾನಾ ರೀತಿಯ ಅಧಿಕಾರವನ್ನು ಗೆದ್ದ ತಂಡ ಪಡೆಯಬಹುದಾಗಿದೆ.

ನಾಲ್ಕು ತಂಡಗಳಿಗೆ ಈ ಸಲ ಚೆಂಡು ನಮ್ದೆ ಎನ್ನುವ ಟಾಸ್ಕ್ ನೀಡಲಾಗಿದೆ. ದೊಡ್ಡ ಚೆಂಡನ್ನು ಗೋಲ್ ಕೋಸ್ಟ್ ಗೆ ಹಾಕುವ ಟಾಸ್ಕ್ ‌ನೀಡಲಾಗಿದೆ. ಗೆದ್ದ ತಂಡ ಒಂದು ತಂಡವನ್ನು ಸೂಕ್ತ ಕಾರಣ‌ ಕೊಟ್ಟು ಆಟದಿಂದ ಹೊರಗೆ ‌ಇಡಬೇಕು.

ಚೈತ್ರಾ ಅವರ ತಂಡ ಇಮ್ಯೂನಿಟ್ ಕಾರ್ಡ್ ಬಳಸಿ ನಾಮಿನೇಟ್ ನಿಂದ ಪಾರಾಗಲು ಟಾಸ್ಕ್ ಆಡಿದ್ದಾರೆ. ಶಿಶಿರ್, ಗೌತಮಿ, ಮಂಜು ಕೂಡ ಇಮ್ಯೂನಿಟ್ ಕಾರ್ಡ್ ಬಳಸಿ ಟಾಸ್ಕ್ ಆಡಿದ್ದಾರೆ.

ಚೈತ್ರಾ, ಭವ್ಯ, ಗೌತಮಿ, ಐಶ್ವರ್ಯಾ ಅವರು ಜಿದ್ದಾಜಿದ್ದಿಯಾಗಿ ಟಾಸ್ಕ್ ಆಡಿದ್ದು,  ಮಂಜು ಹಾಗೂ ಶಿಶಿರ್ ತಮ್ಮೊಳಗೆ ಒಪ್ಪಂದ ಮಾಡಿಕೊಂಡಿದ್ದಾರೆ

ಮೊದಲ ಸುತ್ತಿನಲ್ಲಿ ಶಿಶಿರ್ ತಂಡ ಗೆದ್ದಿದ್ದು ಎರಡನೇ ಸುತ್ತಿನಿಂದ ಗೌತಮಿ ಅವರ ತಂಡವಾದ ಟೀಮ್ ರೆಡ್ ನ್ನು ಹೊರಗೆ ಇಡಲು‌ ಇಷ್ಟಪಡುತ್ತೇವೆ ಶಿಶಿರ್ ಹೇಳಿದ್ದಾರೆ.

ನಮ್ಮನ್ನು ಸೋಲಿಸೋಕೆ ಎರಡೆರಡು ತಂಡಗಳು ಒಟ್ಟಾಗುತ್ತಿದೆ ಎಂದು ಚೈತ್ರಾ ಹೇಳಿದ್ದು, ಈ ತರ ಆಟ ಆಡೋಕೆ ಆಟಗಳು ಆಡಬೇಕಾ ಎಂದು ಗೌತಮಿ ಗರಂ ಆಗಿದ್ದಾರೆ.

ಹನುಮಂತಣ್ಣ ನಿಮ್‌ ಕ್ಯಾಪ್ಟನ್ಸಿ ಅಲ್ಲೇ ಈ ನಿಯತ್ತು ನೋಡಬೇಕಾಗಿತ್ತು ನಾನು. ವೋಟ್‌ ಕೊಟ್ಟ ಜನರಿಗೆ ಯಾವ ನಿಯತ್ತಿನ ಬಗ್ಗೆ ಉತ್ತರ ಕೊಡುತ್ತೀರಿ ನಾನು ನೋಡ್ತೀನಿ. ಜನ ನೋಡ್ತಾರೆ ಈ ನಿಯತ್ತನ್ನು ಎಂದು ಚೈತ್ರಾ ಹನುಮಂತು ಮೇಲೆ ರೇಗಾಡಿದ್ದಾರೆ.

ಎರಡನೇ ಸುತ್ತಿನಲ್ಲಿ  ಮಂಜು ಅವರ ಹಸಿರು ತಂಡ ಗೆದ್ದಿದೆ. ನೀವು‌ ನಿಯತ್ತಾಗಿ ಆಡಿಲ್ಲ ಎಂದು ಚೈತ್ರಾ, ಗೌತಮಿ, ಮೋಕ್ಷಿತಾ ಅವರು ಮಂಜು ಮೇಲೆ ರೇಗಾಡಿದ್ದಾರೆ. ಇದಕ್ಕೆ ಮಂಜು ನಾವು ಫೇರ್ ಗೇಮ್ ಆಡಿಲ್ಲ ಆದರೆ ಬುದ್ದಿವಂತಿಕೆ ಆಡಿದ್ದಾರೆ ಎಂದಿದ್ದಾರೆ.

ಚೈತ್ರಾ ಅವರ ತಂಡವನ್ನು ಮಂಜು ಮುಂದಿನ ಸುತ್ತಿನಿಂದ ಹೊರಗಿಟ್ಟಿದ್ದಾರೆ. ಮೂರನೇ ಸುತ್ತಿನಲ್ಲಿ ಮಂಜು ಅವರ ತಂಡ ಸುಲಭವಾಗಿ ಗೆದ್ದಿದ್ದಾರೆ.

ಚೈತ್ರಾ – ಶಿಶಿರ್ ಟಾಕ್ ವಾರ್:
ಏನೆಂದೆ ಏನೆಂದ ಎಂದು ಶಿಶಿರ್ ಚೈತ್ರಾ ಮೇಲೆ ಮುಗಿಬಿದಿದ್ದಾರೆ. ನೀನು ಕರೆಕ್ಟ್ ಆಗಿ‌ ಮಾತನಾಡ್ತೇನೆ. ನಿನ್ನ ತರ ಬರಗೆಟ್ಟ ಹಾಗೆ ಮಾತನಾಡಲ್ಲ. ನನ್ನನ್ನು ಅಣ್ಣ ಎನ್ನಬೇಡ ಎಂದು ಚೈತ್ರಾನ ಮೇಲೆ ಶಿಶಿರ್ ರೇಗಾಡಿದ್ದಾರೆ.

ನಿಮ್ಮ ರಿಯಲ್ ಫೇಸ್ ಈಗ ಕಾಣುತ್ತಿದೆ ಎಂದು ಚೈತ್ರಾ ಹೇಳಿದ್ದಾರೆ.

ಮಂಜು, ಗೌತಮಿ ಮೋಕ್ಷಿತಾ ಗೆಳೆತನದಲ್ಲಿ ಬಿರುಕು:
ಆಪ್ತವಾಗಿ ಜತೆಯಾಗಿದ್ದ ಮೋಕ್ಷಿತಾ, ಗೌತಮಿ ಮಂಜು ಅವರ ನಡುವೆ ಟಾಸ್ಕ್ ವಿಚಾರದಲ್ಲಿ ಮಾತಿನ‌ ಚಕಮಕಿ ನಡೆದಿದೆ.  ಮೂರು ನಾಲ್ಕು ದಿನಗಳಿಂದ ಮಿಸ್ ಹೊಡೆಯುತ್ತಾ ಇದೆ. ಅವರೇ ಹೈಲೈಟ್ ಆಗಬೇಕೆಂದು ಮಾಡುತ್ತಿದ್ದಾರೆ. ನೀವು ಆಡಿದ ಗೇಮ್ ನಮಗೆ ಇಷ್ಟ ಆಗಿಲ್ಲವೆಂದು ಗೌತಮಿ ನೇರವಾಗಿಯೇ ಮಂಜು ಅವರಿಗೆ ಹೇಳಿದ್ದಾರೆ.

ಇದು ನಾವು ನೋಡಿದ ಮಂಜಣ್ಣನಾ ಹೀಗೆ ಮಾಡುತ್ತಾ ಇದ್ದಾರ ಅಂಥ ನಂಬೋಕೆ ಆಗ್ತಾ ಇಲ್ಲ ಎಂದು ಮೋಕ್ಷಿತಾ, ಗೌತಮಿ ಮಂಜು ಅವರ ಮ್ಯಾಚ್ ಫಿಕ್ಸಿಂಗ್ ಗೇಮ್ ಪ್ಲ್ಯಾನ್ ನೋಡಿ ಕಣ್ಣೀರಿಟ್ಟಿದ್ದಾರೆ.

ಈ‌ ತರ ಆಡೋದಾದ್ರೆ ಯಾವತ್ತೂ ನಮ್ಮನ್ನು ‌ನಿಮ್ಮ ತಂಡಕ್ಕೆ ಕರೆಯಬೇಡಿ ಎಂದು ಮಂಜು ಅವರ ಬಳಿ ಗೌತಮಿ ಹೇಳಿದ್ದಾರೆ.

ಇದಾದ ಬಳಿಕ ಮಂಜು ತಮ್ಮ ಆಟದ ಶೈಲಿಗೆ ಮೋಕ್ಷಿತಾ, ಗೌತಮಿ ಬಳ ಸ್ಸಾರಿ ಕೇಳಿದ್ದಾರೆ. ಬಳಿಕ ಮೂವರು ಶೇಕ್ ಹ್ಯಾಂಡ್ ಕೊಟ್ಟು ಮತ್ತೆ ಜತೆಯಾಗಿದ್ದಾರೆ. ಶಿಶಿರ್, ಮಂಜು ಮೇಲೆ ಇತರೆ ತಂಡದ ಸದಸ್ಯರು ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಜು ಅವರ ತಂಡ ಇನ್ನೊಂದು ಸುತ್ತಿಗೆ ಕಿಕ್ ಔಟ್ ಕಾರ್ಡ್ ಆಯ್ಕೆ ಮಾಡಿದ್ದಾರೆ. ಮುಂದಿನ ಸುತ್ತಿಗೆ ಗೌತಮಿ ಅವರ ತಂಡವನ್ನು ಹೊರಗಿಟ್ಟಿದ್ದು, ಇದನ್ನು ಹನುಮಂತು ಅವರು ಆಕ್ಷೇಪ ವ್ಯಕ್ತಪಡಿಸಿದ್ದು ಚೈತ್ರಾ ಅವರ ತಂಡವನ್ನು ಹೊರಗಿಟ್ಟಿದ್ದಾರೆ.

ಎರಡನೇ ಟಾಸ್ಕ್ ‘ಟವರಿನ ಸಿರಿ’ಯಲ್ಲಿ ಮಂಜು, ಶಿಶಿರ್, ಗೌತಮಿ ಅವರ ತಂಡ ಸೆಣಸಾಟ ನಡೆಸಿದೆ. ಇದರಲ್ಲಿ ಗೌತಮಿ ಅವರ ತಂಡ ಗೆದ್ದಿದೆ.

ಇಮ್ಯೂನಿಟ್ ಕಾರ್ಡ್ ಬಳಸಿ ಗೌತಮಿ ಅನುಷಾ ಅವರನ್ನು ಸೇವ್ ಮಾಡಿದ್ದಾರೆ

ಮೂವರನ್ನು ‌ನಾಮಿನೇಟ್ ಮಾಡಿದ ಕ್ಯಾಪ್ಟನ್ ಹನುಮಂತು:
ಸೋತ ತಂಡಗಳ ಪೈಕಿ ಮೂವರನ್ನು ಹನುಮಂತು ನಾಮಿನೇಟ್ ಮಾಡಿದ್ದಾರೆ.ಗೋಲ್ಡ್ ಸುರೇಶ್ ಅವರು ಐದೈದು ನಿಮಿಷಕ್ಕೆ ಮಾತು ಬದಲಾಯಿಸುತ್ತಾರೆ ಅಂಥೇಳಿ ಹನುಮಂತು ನಾಮಿನೇಟ್ ಮಾಡಿದ್ದಾರೆ. ಆದರೆ ಇದಕ್ಕೆ ಹನುಮಂತು ಸುಮ್ಮನೆ ಸುಮ್ಮನೆ ಸ್ಟೇಟ್ ಮೆಂಟ್ ಕೊಡ್ಬೇಡಿ ಎಂದಿದ್ದಾರೆ. ಅದಕ್ಕೆ ಹನುಮಂತು ಕ್ಯಾಪ್ಟನ್ ‌ನಾನು. ಇಲ್ಲಿ ಆಡೋಕೆ ಬಂದಿದ್ದೇನೆ ಎಂದಿದ್ದಾರೆ.

ಮೋಕ್ಷಿತಾ, ಧನರಾಜ್ ಅವರ ಹೆಸರನ್ನು ಹೇಳಿ ನಾಮಿನೇಟ್ ಮಾಡಿದ್ದಾರೆ.

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಬೆನ್ನ ಹಿಂದೆ ನಡೆದ ಮಾತಿನ ಬಂಡವಾಳ ಬಹಿರಂಗ.. ಮೋಕ್ಷಿತಾ – ತಿವಿಕ್ರಮ್‌ ಟಾಕ್‌ ವಾರ್

BBK11: ಬೆನ್ನ ಹಿಂದೆ ನಡೆದ ಮಾತಿನ ಬಂಡವಾಳ ಬಹಿರಂಗ.. ಮೋಕ್ಷಿತಾ – ತ್ರಿವಿಕ್ರಮ್ ಟಾಕ್‌ ವಾರ್

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.