BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
ನಾನು ಒಂಟಿ ಸಲಗ, ಹಾರೋ ಚಿಟ್ಟೆಯಲ್ಲ..
Team Udayavani, Nov 12, 2024, 11:05 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನೇರವಾಗಿ ನಾಮಿನೇಟ್ ಮಾಡಲು ಜೋಡಿಗಳು ಚರ್ಚೆ ಆರಂಭಿಸಿದ್ದಾರೆ.
ಜೋಡಿಗಳು ಅನುಷಾ ಹಾಗೂ ಸುರೇಶ್ ಹೆಸರನ್ನು ತೆಗೆದುಕೊಂಡಿದ್ದಾರೆ.
ಧನರಾಜ್ , ಮೋಕ್ಷಿತಾ ಅವರ ಗೋಲ್ಡ್ ಸುರೇಶ್, ಅನುಷಾ ಅವರ ಹೆಸರನ್ನು ನಾಮಿನೇಷನ್‌ಗೆ ಹೇಳಿದ್ದಾರೆ. ಇನ್ನೊಂದು ಕಡೆ ಐಶ್ವರ್ಯಾ, ಧರ್ಮ ಅವರು ಸಹ ಸುರೇಶ್, ಅನುಷಾ ಅವರ ಹೆಸರನ್ನೇ ಹೇಳಿದ್ದಾರೆ. ಗೌತಮಿ, ಹನುಮಂತು ಕೂಡ ಸುರೇಶ್ ಅವರ ಹೆಸರನ್ನು ಹೇಳಿದ್ದಾರೆ.
ನಿಮ್ಮ ನಗು ಫೇಕ್ ಅಂಥ ಅನ್ನಿಸುತ್ತದೆ ಎಂದು ಗೌತಮಿ ಸುರೇಶ್ ಅವರ ನಾಮಿನೇಷನ್‌ಗೆ ಕಾರಣವನ್ನು ನೀಡಿದ್ದಾರೆ. ಅನುಷಾ ಅವರು ಭಾಗವಹಿಸುವಿಕೆ ಮನೆಯಲ್ಲಿ ಅಷ್ಟಾಗಿ ಇಲ್ಲ ಎಂದು ಚೈತ್ರಾ ಹೇಳಿದ್ದು, ಇನ್ನೊಂದೆಡೆ ಮನರಂಜನೆ ಫ್ಯಾಕ್ಟ್ ನಲ್ಲೂ ಅನುಷಾ ಕಾಣಿಸಿಕೊಂಡಿಲ್ಲ ಎಂದು ಮೋಕ್ಷಿತ ಅವರು ಕಾರಣವನ್ನು ನೀಡಿ ನಾಮಿನೇಟ್ ಮಾಡಿದ್ದಾರೆ.
ಎಲ್ಲರ ಕಾರಣವನ್ನು ಕೇಳಿದ ಅನುಷಾ ಅವರು, “ಮೋಕ್ಷಿತಾ ನೀವೆಷ್ಟು ಮನರಂಜನೆಯಲ್ಲಿ ತೊಡಗಿಕೊಂಡಿದ್ದೀರಿ. ಗೌತಮಿ ನಿಮ್ಮ ಮುಖದ ಎದುರು ಹೇಳ್ತೇನೆ ನೀವು ಫೇಕ್. ಧರ್ಮ ಅವರೇ ನೀವೆಷ್ಟು ಆ್ಯಗರ್ಷನ್ ಆಗಿದ್ದೀರಿ. ನೀವೇನು ಆಟ ಆಡಲೇ ಇಲ್ಲ. ಈ ಮನೆಯಲ್ಲಿ ನಿಮ್ಮದ್ದೆಷ್ಟು ಪಾಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲದಕ್ಕೂ ಸುರೇಶ್ ಸುರೇಶ್ ಎಂದು ಹೇಳುತ್ತೀರಾ. ಈ ಮನೆಯಯ ನಾನು ಸುಲಭವಾಗಿ ಟಾರ್ಗೆಟ್ ಆಗುತ್ತೀನಿ. ನಾನು ಲಾಸ್ಟ್ ವೀಕ್ ಆಡಿದ ಮಾತಿಗೆ ಕ್ಷಮೆ ಕೇಳಿದ್ದೀನಿ. ಮತ್ತೆ ಮತ್ತೆ ಅದೇ ಕಾರಣವನ್ನಿಟ್ಟು ನಾಮಿನೇಟ್ ಮಾಡ್ತಾ ಇದ್ದೀರಿ. ಅಡುಗೆ ಮನೆಯಿಂದ ಹಿಡಿದು ವಾಶ್ ರೂಮ್ ಎಲ್ಲ ಕೆಲಸದಲ್ಲೂ ತೊಡಗಿಕೊಂಡಿದ್ದೇನೆ. ಆದರೂ ನನ್ನ ಪಾತ್ರ ಯಾರಿಗೂ ಕಾಣುತ್ತಿಲ್ಲ. ನಾನು ಇದನ್ನು ಒಪ್ಪಲ್ಲ. ಕರ್ನಾಟಕದ ಜನ ಇದನ್ನು ನೋಡುತ್ತಿದ್ದಾರೆ ಎಂದು ಸುರೇಶ್ ಅವರು ನಾಮಿನೇಟ್ ಮಾಡಿದವರಿಗೆ ಎಲ್ಲರಿಗೂ ಹೇಳಿದ್ದಾರೆ.
ಆಯಿತು ನಾನು ಒಪ್ಪಿಕೊಳ್ಳುತ್ತೀನಿ. ಎಲ್ಲರೂ ನನ್ನನ್ನು ನಾಲಾಯಾಕ್ ಬೇವರ್ಸಿ ಎಂದಿದ್ದೀರಾ ಎಂದು ಹೇಳಿದ್ದಾರೆ.
5 ತಂಡದವರು ಅನುಷಾ- ಸುರೇಶ್ ಅವರ ಹೆಸರನ್ನು ಹೇಳಿದ್ದಾರೆ. ಆದರೆ ನಾವು ಒಪ್ಪಲ್ಲವೆಂದು ಸುರೇಶ್- ಅನುಷಾ ಹೇಳಿದ್ದಾರೆ. ಅಂತಿಮವಾಗಿ ಬಿಗ್ ಬಾಸ್ ಅನುಷಾ, ಸುರೇಶ್ ಅವರ ಹೆಸರನ್ನು ಹೇಳಿ ನಾಮಿನೇಟ್ ಜೋಡಿಯನ್ನು ಘೋಷಿಸಿದ್ದಾರೆ.
ಧರ್ಮ – ಅನುಷಾ ಸ್ನೇಹಕ್ಕೆ ಬಿತ್ತು ಬ್ರೇಕ್:
ನಾಮಿನೇಟ್ ವೇಳೆ ನಡೆದ ವಿಚಾರಕ್ಕೆ ಸ್ಪಷ್ಟನೆ ನೀಡಲು ಬಂದಾಗ ಧರ್ಮ ಅವರ ಮೇಲೆ ಅನುಷಾ ಗರಂ ಆಗಿದ್ದಾರೆ. ನಿಮ್ಮ ಹತ್ತಿರ ಮಾತನಾಡಲು ಇಷ್ಟ ಇಲ್ಲ. ಇವನಿಗೆ ಬೇರೆ ಅವರ ಹತ್ರ ಮಾತನಾಡೋಕೆ ಆಗಲ್ಲ. ನನ್ನ ಹತ್ರ ಮಾತನಾಡೋಕೆ ಬಂದ. ನಿಮ್ಮ ಹತ್ರ ಮಾತನಾಡೋಕೆ ನನಗೆ ಇಷ್ಟವಿಲ್ಲ. ನನಗೆ ಸಲಗದಂತೆ ಇದ್ದು ಅಭ್ಯಾಸ. ಚಿಟ್ಟೆಯಂತೆ ಹಾರೋಕೆ ಬರಲ್ಲ. ನನಗೆ ಯಾವ ಸ್ಸಾರಿಯೂ ಬೇಡ. ಯಾರ ಹತ್ರನೂ ಮಾತನಾಡೋಕ್ಕೂ ಇಷ್ಟವಿಲ್ಲ.ನಿಮ್ಮ ಜತೆ ಮಾತನಾಡುವ ಅವಶ್ಯಕತೆ ನನಗಿಲ್ಲವೆಂದು ಅನುಷಾ ಹೇಳಿದ್ದಾರೆ.
ಆದರೆ ಧರ್ಮ ಮತ್ತೆ ಅನುಷಾಳ ಬೆನ್ನು ಬಿದ್ದು ಕ್ಷಮೆ ಕೇಳುವ ಪ್ರಯತ್ನವನ್ನು ಮಾಡಿದ್ದಾರೆ.
ನಾಮಿನೇಟ್ ಆದವರು ಯಾರೆಲ್ಲ..
ರಹಸ್ಯ ಈ ವಾರ ನಾಮಿನೇಟ್ ನಡೆದಿದೆ. ಇಬ್ಬರು ಜೋಡಿಗಳನ್ನು ಕರೆದು ಇಬ್ಬರಲ್ಲಿ ಮನೆಯಲ್ಲಿ ಇರಲು ಯಾರು ಅರ್ಹರು ಎಂದು ಕೇಳಲಾಗಿದೆ.
ಐಶ್ವರ್ಯಾ – ಧರ್ಮ ಅವರ ಪೈಕಿ ಇಬ್ಬರು ಚರ್ಚಿಸಿ ಧರ್ಮ ಅವರನ್ನು ನಾಮಿನೇಟ್ ಮಾಡಲಾಗಿದೆ. ಐಶ್ವರ್ಯಾ ಅವರು ಧರ್ಮ ಅವರನ್ನು ನಾಮಿನೇಟ್ ನಾಡಿ ಕಣ್ಣೀರಿಟ್ಟಿದ್ದಾರೆ.
ಧನರಾಜ್ – ಮೋಕ್ಷಿತಾ ಅವರು ಚರ್ಚೆ ಮಾಡಿ, ಮೋಕ್ಷಿತಾ ನಿಮ್ಮಗಿಂತ ಜಾಸ್ತಿ ಈ ಮನೆಯಲ್ಲಿ ಇರಲು ಅರ್ಹವೆಂದು ಮೋಕ್ಷಿತಾ ಹೇಳಿದ್ದಾರೆ. ಆದರೆ ಧನರಾಜ್ ಕೂಡ ಇದಕ್ಕೆ ನಾನು ಕೂಡ ಅರ್ಹವೆಂದು ಹೇಳಿದ್ದಾರೆ. ಒಮ್ಮತಕ್ಕೆ ಬಾರದ ಕಾರಣ ಇಬ್ಬರೂ ನಾಮಿನೇಟ್ ಆಗಿದ್ದಾರೆ.
ಶಿಶಿರ್ – ಚೈತ್ರಾ ಇಬ್ಬರು ಚರ್ಚಿಸಿ ಶಿಶಿರ್ ಅವರು ನಾನೇ ನಾಮಿನೇಟ್ ಆಗುತ್ತೇನೆ ಎಂದಿದ್ದಾರೆ. ಚೈತ್ರಾ ಅವರು ಕಣ್ಣೀರು ಇಟ್ಟು ಶಿಶಿರ್ ಅವರ ಫೋಟೋವನ್ನು ಆಯ್ಕೆ ಮಾಡಿದ್ದಾರೆ. ಯಾರೆಲ್ಲ ಹಂಗಿಸಿದ್ದೀರಿ ಅವರಿಗೆಲ್ಲ ಉತ್ತರ ಕೊಟ್ಟು ನಿನ್ನನ್ನು ನೀನು ಪ್ರೂವ್ ಮಾಡು ಎಂದು ಶಿಶಿರ್ ಚೈತ್ರಾಗೆ ಧೈರ್ಯ ತುಂಬಿದ್ದಾರೆ.
ಮಂಜು – ಭವ್ಯ ಅವರು ನಾಮಿನೇಟ್ ವಿಚಾರದಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಟ್ಟಿಲ್ಲ. ಪರಿಣಾಮ ಇಬ್ಬರೂ ನಾಮಿನೇಟ್ ಆಗಿದ್ದಾರೆ.
ಹನುಮಂತು – ಗೌತಮಿ ಇಬ್ಬರೂ ಕೂಡ ನಾಮಿನೇಟ್ ಆಗಿದ್ದಾರೆ.
ವಾರದ ಮೊದಲ ಟಾಸ್ಕ್ ಬಿಗ್ ಬಾಸ್ ನೀಡಿದ್ದು, ಅದರಂತೆ ಜೋಡಿಗಳು ಕ್ಯಾಪ್ಟನ್ ಸೂಚಿಸುವ ಭಂಗಿಯಲ್ಲೇ ನಿಲ್ಲಬೇಕು. ಉಳಿದ ಜೋಡಿ ಅವರ ಏಕಾಗ್ರತೆಯನ್ನು ಭಂಗ ತರಬೇಕು.
ನೀರು, ಪೌಡರ್ ಬಿಸಾಕಿ ಜೋಡಿಗಳ ಏಕಾಗ್ರತೆಗೆ ಭಂಗ ತರುವ ಯತ್ನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.