BBK11: ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರು ಮಾಡಿದ ಹನುಮಂತು: 2ನೇ ಬಾರಿ ಕ್ಯಾಪ್ಟನ್
Team Udayavani, Oct 29, 2024, 11:09 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮುಕ್ತಾವಾಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಮನಸ್ಸಿನಲ್ಲಿಟ್ಟುಕೊಂಡು ಯಾರಿಗೂ ಹೇಳದ ನೋವಿನ ನುಡಿಯನ್ನು ಬಿಗ್ ಬಾಸ್ ಮುಂದೆ ಹೇಳಿಕೊಂಡಿದ್ದಾರೆ.
ಮಂಜು, ಮೋಕ್ಷಿತಾ,ಚೈತ್ರಾ, ತಿವಿಕ್ರಮ್ ಅವರು ಬಿಗ್ ಬಾಸ್ ಮುಂದೆ ಮುಕ್ತವಾಗಿ ಮಾತನಾಡಿ ಕಣ್ಣೀರಿಟ್ಟಿದ್ದಾರೆ.
ಧನರಾಜ್, ಮಾನಸ, ಹನುಮಂತು ಅವರು ಮನೆಯ ಇತರೆ ಸದಸ್ಯರಿಗೆ ಗೊತ್ತಾದಾಗೆ ಕ್ಲಿಪ್ ಬಳಸಿಕೊಂಡು ಐಸ್ ಕ್ರೀಮ್ ತೆಗೆಯಲು ಪ್ರಯತ್ನಿಸಿದ್ದಾರೆ.
ಐಶ್ವರ್ಯಾ ಹಾಗೂ ತಿವಿಕ್ರಮ್ ಇವರ ಪೈಕಿ ಯಾರು ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲವೆನ್ನುವುದನ್ನು ಸದಸ್ಯರು ಸೂಕ್ತ ಕಾರಣ ಕೊಟ್ಟು ಅವರವರ ಫೋಟೋವನ್ನು ಹರಿದು ಹಾಕಿದ್ದಾರೆ.
ಮೋಕ್ಷಿತಾ ತಿವಿಕ್ರಮ್ ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇಲ್ಲವೆಂದು ಮೋಕ್ಷಿತಾ ಹೇಳಿದ್ದಾರೆ.
ಗೌತಮಿ ಅವರು ತಿವಿಕ್ರಮ್ ಅವರು ಯಾರೊಂದಿಗೂ ಸರಿಯಾಗಿ ಬೆರೆತಿಲ್ಲ ಎಂದು ತಿವಿಕ್ರಮ್ ಅವರ ಫೋಟೋ ಹರಿದು ಹಾಕಿದ್ದಾರೆ.
ಧರ್ಮ, ಮಂಜು,ಹನುಮಂತು, ಶಿಶಿರ್ ಅವರು ತಿವಿಕ್ರಮ್ ಅವರಿಗೆ ಕ್ಯಾಪ್ಟನ್ ಆಗಲು ಅರ್ಹತೆವಿಲ್ಲವೆಂದಿದ್ದಾರೆ.
ಚೈತ್ರಾ, ಮಾನಸ, ಧನರಾಜ್, ಅನುಷಾ, ಸುರೇಶ್ ಅವರು ಐಶ್ವರ್ಯಾ ಅವರು ರೂಲ್ಸ್ ಫಾಲೋ ಮಾಡಿಲ್ಲ ಎಂದು ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲವೆಂದಿದ್ದಾರೆ.
ತಿವಿಕ್ರಮ್ ಹಾಗೂ ಭವ್ಯಾ ಇಬ್ಬರು ಕ್ಯಾಪ್ಟನ್ಸಿ ಓಟದಿಂದ ಹೊರ ಉಳಿಯಲಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್:
12 ಮಂದಿ ಸದಸ್ಯರಿಗೆ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಶಿಶಿರ್ ಅವರು ಹೊರಬಿದ್ದಿದ್ದಾರೆ.
ಸ್ಪರ್ಧಿಗಳು ಬೇರೆ ಸ್ಪರ್ಧಿಗಳ ಫೋಟೋಗಳನ್ನು ತಂದು ಇಟ್ಟಿದ್ದಾರೆ. ಸುರೇಶ್ ಹಾಗೂ ಮಂಜು ರೂಲ್ಸ್ ಬ್ರೇಕ್ ಮಾಡಿದ ಕಾರಣದಿಂದ ಇಬ್ಬರು ಗೇಮ್ ನಿಂದ ಹೊರಬಿದ್ದಿದ್ದಾರೆ. ಆ ಬಳಿಕ ಒಬ್ಬರನ್ನು ಮಾತ್ರ ಹೊರಗೆ ಇಡಬೇಕೆನ್ನುವ ನಿಟ್ಟಿನಲ್ಲಿ ಮಂಜು ಅವರನ್ನು ಮಾತ್ರ ಹೊರಗಿಟ್ಟಿದ್ದಾರೆ.
ರೂಲ್ ಬ್ರೇಕ್ ವಿಚಾರದಲ್ಲಿ ಮಂಜು – ತಿವಿಕ್ರಮ್ ನಡುವೆ ವಾಗ್ವಾದ ನಡೆದಿದೆ.
ಇವನು ನಾಟಕ ಆಡುತ್ತಾನೆ. ನಾನು ಶಿಶಿರ್ ಅವರ ಹೆಸರು ಹೇಳಿಲ್ಲ. ನನ್ನ ಮಗಳ ಮೇಲಾಣೆ. ಸುಳ್ಳು ಹೇಳಿದರೆ ಕರ್ಮ ತಟ್ಟುತ್ತದೆ. ಎಲ್ಲರಿಗೂ ಫಿಟ್ಟಿಂಗ್ ಇಟ್ಟು, ಒಂದಮ್ಕೆ ಹತ್ತು ಸುಳ್ಳು ಹೇಳ್ತಾ ಇರೋದು ಇವನೇ ಎಂದು ಸುರೇಶ್ ಅವರು ಮಂಜು ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಠಿಣವಾದ ಟಾಸ್ಕ್ ನಲ್ಲಿ ಎಲ್ಲರನ್ನೂ ಮೀರಿಸಿ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಮನೆಗೆ ಬಂದ ಎರಡು ವಾರದಲ್ಲೇ ಎರಡು ಬಾರಿ ಹನುಮಂತು ಅವರು ಕ್ಯಾಪ್ಟನ್ ಆಗಿದ್ದಾರೆ. ಆ ಮೂಲಕ ತಮ್ಮ ರಿಯಲ್ ಗೇಮ್ ಶುರು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.