BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
ಇನ್ನು ಯಾವತ್ತೂ ಮಾತನಾಡಲ್ಲ ಎಂದ ಫೈಯರ್ ಬ್ರ್ಯಾಂಡ್
Team Udayavani, Nov 4, 2024, 11:32 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಆರನೇ ವಾರದ ಆಟ ಶುರುವಾಗಿದೆ. ನಾನು ಹೋಗಿಲ್ಲ ಅಂಥ ಖುಷಿ ಪಡೋದ ಎಲ್ಲರ ಮನಸ್ಸಿನಲ್ಲಿ ಏನು ಇದೆಯೋ ಅದನ್ನು ನೆನೆಸಿಕೊಂಡು ದುಃಖ ಪಡೋದಾ ಅಂಥ ಅನುಷಾ ಬೇಸರದಲ್ಲಿ ಇದ್ದಾರೆ.
ಮಂಜು ಅವರು ಜೈಲಿನೊಳಗೆ ಹೋಗಿದ್ದಾರೆ. ಮಾನಸ ಅವರು ಹೇಳಿದ್ದನ್ನು ನಾನು ಪಾಸಿಟಿವ್ ಆಗಿ ತಕ್ಕೋಳ್ತೇನೆ ಎಂದು ಮಂಜು ಹೇಳಿದ್ದಾರೆ. ಒಂದು ದಿನ ಶಿಕ್ಷೆ ಅನುಭವಿಸಿ ಆಚೆ ಬಂದಿದ್ದಾರೆ.
ಮದುವೆ ವಿಚಾರ ಮಾತನಾಡಿದ ಹನುಮಂತು:
ಗೌತಮಿ ಅವರು ಹನುಮಂತು ಬಳಿ ಮದುವೆ ಎಂದು ಕೇಳಿದ್ದಾರೆ. ಇದಕ್ಕೆ ಇಲ್ಲಿಂದ ಹೊರಗೆ ಹೋದ ಮೇಲೆ ಮದುವೆ ಅಂಥ ಹನುಮಂತು ಹೇಳಿದ್ದಾರೆ. ಯಾರು ಹುಡುಗಿ ಅವಳ ಹೆಸರೇನು ಅವರಿಗಾಗಿ ಹಾಡು ಹೇಳಿ ಎಂದು ಬೆನ್ನು ಬಿದ್ದಿದ್ದಾರೆ. ಇದಕ್ಕೆ ಹನುಮಂತು ಉತ್ತರ ಕರ್ನಾಟಕ ಶೈಲಿಯ ಪ್ರೇಮ ಗೀತೆಯನ್ನು ಹಾಡಿದ್ದಾರೆ.
ಮನೆಯ ದಿನಸಿ ಸಾಮಾಗ್ರಿಗಾಗಿ ಒಂದು ಟಾಸ್ಕ್ ನೀಡಲಾಗಿದೆ. ಒಬ್ಬೊಬ್ಬರ ಫೋಟೋಗಳನ್ನು ಅವರಾಡಿದ ಧ್ವನಿಯನ್ನು ಕೇಳಿಸಲಾಗಿದೆ. ಆ ಮಾತನ್ನು ಅವರು ಎಲ್ಲಿ ಆಡಿದ್ದಾರೆ ಎನ್ನುವುದನ್ನು ಗೆಸ್ ಮಾಡಬೇಕು. ಉತ್ತರ ಸರಿಯಾಗಿದ್ದರೆ ಒಂದೊಂದು ಸಾಮಾಗ್ರಿ ಸಿಗುತ್ತದೆ.
ಸದಾ ಮಂಜು ಅವರ ಜತೆಗಿರುವ ಗೌತಮಿ, ಮೋಕ್ಷಿತ ಕುರಿತು ತ್ರಿವಿಕ್ರಮ್ ಒಂದು ಹಕ್ಕಿ ಹೊಡೆದರೆ ಎರಡು ಹಕ್ಕಿ ಫ್ರೀ. ಇನ್ನೊಂದು ಹಕ್ಕಿ ಆಟಕ್ಕುಂಟು ಲೆಕ್ಕಕಿಲ್ಲ ಎಂದಿರುವುದನ್ನು ತೋರಿಸಲಾಗಿದೆ.
ಇದನ್ನು ನೋಡಿದ ಮೋಕ್ಷಿತಾ ಅಕ್ಕ- ತಂಗಿಯರ ಜತೆ ಬೆಳೆದವರ ಹಕ್ಕಿ ಅಂಥ ಮಾತನಾಡುತ್ತಾರಾ ಯಾರಾದ್ರೂ ಅವರ ತನ ಏನೆಂದು ಇದು ತೋರಿಸುತ್ತದೆ. ಅತಿ ವಿನಯ ದೂರ್ತ ಲಕ್ಷಣಂ ಅಂಥರಲ್ಲ ಅದೇ ಇದು. ಗೋಮುಖ ವ್ಯಾಘ್ರ ಅಂಥ ಕೊಟ್ಟೆ ಅದಕ್ಕೆ ನಾನು ಖಂಡಿತ ಪಶ್ಚಾತ್ತಾಪ ಪಡಲ್ಲ ಎಂದು ಮೋಕ್ಷಿತಾ ತ್ರಿವಿಕ್ರಮ್ ಮೇಲೆ ಗರಂ ಆಗಿ ಕಣ್ಣೀರಿಟ್ಟಿದ್ದಾರೆ.
ನನಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂಥ ಹೇಳಿರುವುದು ಬೇಜಾರಾಗಿದೆ ಎಂದು ಮೋಕ್ಷಿತಾ ಕಣ್ಣೀರಿಟ್ಟಿದ್ದಾರೆ.
ಅವರವರು ಆಡಿದ ಮಾತು ಅವರವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಗೌತಮಿ ತ್ರಿವಿಕ್ರಮ್ ಮಾತಿಗೆ ಹೇಳಿದ್ದಾರೆ.
ಟಿವಿಯಲ್ಲಿ ಬಂದ ಮತ್ತೊಂದು ಧ್ವನಿಯ ವಿಚಾರಕ್ಕೆ ಶಿಶಿರ್ ಹಾಗೂ ಸುರೇಶ್ ಅವರ ನಡುವೆ ವಾಗ್ವಾದ ನಡೆದಿದೆ.
ಶಿಶಿರ್ ಫೋಟೋ ತರುವ ವಿಚಾರಕ್ಕೆ ಅಂದು ನಡೆದ ಸಂಭಾಷಣೆ ಸಂಗತಿಗೆ ಶಿಶಿರ್ – ಸುರೇಶ್ ನಡುವೆ ವಾಗ್ವಾದ ನಡೆದಿದೆ.
ಮಂಜು ಅವರು ಟಾಸ್ಕ್ ಸಮಯದಲ್ಲಿ ಸುರೇಶ್ ಅವರ ಕುರಿತು ಆಡಿದ ಮಾತಿಗೆ ಸುರೇಶ್ ಅವರು
ಈ ರೀತಿ ಹೇಳಿಕೆಗಳನ್ನು ಕೊಡಬೇಡಿ. ತುಂಬಾ ಕೆಳಮಟ್ಟದಲ್ಲಿ ಕೊಟ್ಟಂಗೆ ಆಗುತ್ತದೆ ಎಂದಿದ್ದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದರಲ್ಲಿ ಭವ್ಯ, ತ್ರಿವಿಕ್ರಮ್, ಐಶ್ವರ್ಯಾ, ಮಂಜು ಅವರು ಗೆಸ್ ಮಾಡುವುದಲ್ಲಿ ಎಡವಿದ್ದಾರೆ. ಅನುಷಾ, ಗೌತಮಿ, ಶಿಶಿರ್, ಮೋಕ್ಷಿತಾ, ಮಂಜು ಅವರು ಸರಿಯಾಗಿ ಉತ್ತರಿಸಿದ್ದಾರೆ.
ಚೈತ್ರಾ, ಮಂಜು, ಶಿಶಿರ್ ಹಾಗೂ ಗೌತಮಿ ಅವರ ನಾಯಕತ್ವಕ್ಕೆ ಆಯಾ ಸದಸ್ಯರು ಸೇರಿದ್ದಾರೆ. ನಾಮಿನೇಷನ್ ಟಾಸ್ಕ್ ಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಲುಡೋ ಮಾದರಿಯ ಟಾಸ್ಕ್ ನೀಡಲಾಗಿದೆ.
ಚೈತ್ರಾ ಅವರ ತಂಡ ಗೌತಮಿ ಅವರನ್ನು ಉಳಿಸಿದ್ದಾರೆ. ಮಂಜು ಅವರ ತಂಡ ಅವರದ್ದೇ ತಂಡದ ಭವ್ಯ ಅವರನ್ನು ನಾಮಿನೇಟ್ ಮಾಡಿದೆ. ಚೈತ್ರಾ ಅವರ ತಂಡ ಕೂಡ ತಮ್ಮದೇ ಸದಸ್ಯ ಧರ್ಮ ಅವರನ್ನು ನಾಮಿನೇಟ್ ಮಾಡಿದೆ. ತ್ರಿವಿಕ್ರಮ್ ಅವರ ತಂಡ ಮೋಕ್ಷಿತಾ ಅವರನ್ನು ನಾಮಿನೇಟ್ ನಿಂದ ಉಳಿಸಿದ್ದಾರೆ.
ಅನುಷಾ ಹಾಗೂ ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಅನುಷಾ ಅವರಿಗೆ ನೀನು ಎಲ್ ಕೆಜಿ ಕಿಡ್ ಎಂದಿದ್ದಾರೆ ಇದಕ್ಕೆ ಪ್ರತಿಸಲಿ ಹೀಗೆ ಹೇಳಿದರೆ ಸರಿ ಇರಲ್ಲ. ನಾನಿನ್ನು ಮಗುವಲ್ಲ ಎಂದಿದ್ದಾರೆ. ಇದಕ್ಕೆ ಚೈತ್ರಾ ತಪ್ಪಾಯಿತು ಅಮ್ಮ ಇನ್ನು ಯಾವತ್ತೂ ಮಾತನಾಡಲ್ಲ. ಇದು ನೆನಪು ಇಟ್ಟುಕೊಳ್ತೇನೆ ಎಂದಿದ್ದಾರೆ. ಆಯಿತು ಯಾರು ಕೇರ್ ಮಾಡ್ತಾರೆ ಎಂದು ಅನುಷಾ ಹೇಳಿದ್ದಾರೆ.
ಗೌತಮಿ ಬಳಿ ಮಂಜು ಒಂದು ಲೋಟ ಹಾಲು ಕೇಳಿದ್ದಕ್ಕೆ ಗರಂ ಆಗಿದ್ದಾರೆ. ನನ್ನ ಜತೆ ಆಟ ಆಡಬೇಡಿ. ಗೇಮ್ ಮುಗಿದಿದೆ. ನೀವು ನನ್ನನ್ನು ಮಕ್ಕರ್ ಮಾಡಿತ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.
ನಾಮಿನೇಟ್ ಅದವರು ಯಾರೆಲ್ಲ..
ಈ ವಾರ ಭವ್ಯ, ಧರ್ಮ, ಅನುಷಾ, ತ್ರಿವಿಕ್ರಮ್, ಚೈತ್ರಾ ನಾಮಿನೇಟ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.