BBK11: ಇನ್ಮುಂದೆ ನನ್ನ ಕಿರಿಕಿರಿ ನಿಮಗೆ ಇರಲ್ಲ .. ದೊಡ್ಮನೆಯಿಂದ ಚೈತ್ರಾ ಔಟ್
ಜೈಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಹೊರಬಂದ ಚೈತ್ರಾ
Team Udayavani, Jan 12, 2025, 10:54 PM IST
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಜನಪ್ರಿಯ ಸ್ಪರ್ಧಿಯೊಬ್ಬರು ಆಚೆ ಬಿದ್ದಿದ್ದಾರೆ. ಆ ಮೂಲಕ ಫಿನಾಲೆ ಹೋಗುವ ಕನಸು ಕಂಡಿದ್ದ ಚೈತ್ರಾ ಕುಂದಾಪುರ ಅವರ ಆಸೆನಮ ನೂಚ್ಚುನೂರಾಗಿದೆ.
ಟಾಸ್ಕ್ ವಿಚಾರದಲ್ಲಿ ಹನುಮಂತು ಅವರಿಗೆ ಭವ್ಯಾ ಅವರು ಕೈ ಎತ್ತಿದ್ದಕ್ಕೆ ಬಿಗ್ ಬಾಸ್ ಹಾಗೂ ಹನುಮಂತು ಅವರ ಬಳಿ ಕ್ಷಮೆ ಕೇಳಿದ್ದಾರೆ. ಶಿಕ್ಷೆಯ ಭಾಗವಾಗಿ ಭವ್ಯಾ ಅವರಿಗೆ ಜೈಲು ಶಿಕ್ಷೆ ನೀಡಿದ್ದಾರೆ.
ಆಡುವ ನಿನ್ನಲ್ಲಿದೆ ಆದರೆ ಮೋಸ ಮಾಡಿ ಗೆಲ್ಲುವುದು ಸರಿಯಲ್ಲ. ಇದನ್ನು ನೀನು ಒಪ್ಪಿಕೊಳ್ಳಲ್ಲ. ಸುಮಾರು ಸರಿ ಆಗಿದೆ. ಹೀಟ್ ಆಫ್ ದಿ ಮೊಮೆಂಟ್ ಅಂಥ ನೀನು ಹೇಳ್ತೀಯಾ. ಬೇರೆ ಅವರ ಹತ್ರ ಮಾತನಾಡುವಾಗ ನೀನು ಬೇರೆ ರೀತಿ ಮಾತನಾಡ್ತೀಯಾ ಅಂಥ ರಜತ್ ಅವರು ಭವ್ಯಾ ಅವರಿಗೆ ಹೇಳಿದ್ದಾರೆ.
ನಾನು ಹೇಗೆ ಬದಲಾಗುವುದು ರಜತ್. ಮೂರು ವಾರದಿಂದ ನಾನು ಏನು ಮಾಡ್ತಾ ಇದ್ದೇನೆ ಅಂಥನೇ ಗೊತ್ತಾಗಿಲ್ಲ ಎಂದು ಭವ್ಯಾ ಕಣ್ಣೀರಿಟ್ಟಿದ್ದಾರೆ.
ಹನುಮಂತು ಅವರು ತುಂಬಾ ಚೆನ್ನಾಗಿ ಆಡಿ ಫಿನಾಲೆಗೆ ಹೋದ್ರು. ಅವರೇ ವಿನ್ನರ್ ಆಗಿಲ್ಲ. ನಿಮ್ಮಲ್ಲೂ ವಿನ್ನರ್ಸ್ ಗಳಿದ್ದಾರೆ. ಚೆನ್ನಾಗಿ ಆಡಿ ಎಂದು ಕಿಚ್ಚ ಸ್ಪರ್ಧಿಗಳಿಗೆ ಕಿವಿ ಮಾತನು ಹೇಳಿದ್ದಾರೆ.
ಕ್ಯಾಪ್ಟನ್ಸಿ ಆಗಬೇಕೆನ್ನುವ ತುಂಬಾ ಆಸೆ ಇತ್ತು. ಏಳು ಸಲಿ ಕ್ಯಾಪ್ಟನ್ಸಿ ರೇಸ್ ಗೆ ಹೋಗಿದ್ದೆ. ಕ್ಯಾಪ್ಟನ್ ಆಗಿದ್ರೆ ನಾನು ಬೇರೆ ರೀತಿಯ ಚೈತ್ರಾ ಆಗ್ತಾ ಇದ್ದೆ ಎಂದು ಚೈತ್ರಾ ಅವರು ಕಿಚ್ಚನ ಮುಂದೆ ಹೇಳಿದ್ದಾರೆ.
ಮನೆಮಂದಿಗೆ ಕಿಚ್ಚ ಫನ್ನ್ ಟಾಸ್ಕ್ ನೀಡಿದ್ದಾರೆ. ಕೇಳುವ ಪ್ರಶ್ನೆಗಳಿಗೆ ತಪ್ಪು ಉತ್ತರ ಹೇಳಿದ್ರೆ ಶಾಕ್ ನೀಡಲಾಗುತ್ತದೆ. ಅದರಂತೆ ಸ್ಲೇಟ್ ಕೊಟ್ಟು ಒಂದೊಂದು ಪ್ರಶ್ನೆಯನ್ನು ತೋರಿಸಲಾಗಿದೆ. ತಪ್ಪು ಉತ್ತರ ಕೊಟ್ಟ ಭವ್ಯಾ, ಮಂಜು, ಚೈತ್ರಾ, ರಜತ್,ಮೋಕ್ಷಿತಾ, ಧನರಾಜ್, ಭವ್ಯಾ, ಹನುಮಂತು ಶಾಕ್ ನೀಡಿ ಚಮಕ್ ನೀಡಲಾಗಿದೆ.
ಒಬ್ಬ ವ್ಯಕ್ತಿ ನನ್ನ ಜರ್ನಿಗೆ ಅಡ್ಡ ಆಗುತ್ತಾನೆ ಎನ್ನುವ ಮಾತಿಗೆ ಸ್ಪರ್ಧಿಗಳು ತಮ್ಮ ಪಯಣಕ್ಕೆ ಅಡ್ಡಿಯಾಗುವ ಸ್ಪರ್ಧಿಗಳ ಹೆಸರನ್ನು ಹೇಳಿದ್ದಾರೆ.
ಮೋಕ್ಷಿತಾ ಅವರು ತಮಗೆ ರಜತ್ ಅವರು ಜರ್ನಿಗೆ ಅಡ್ಡಿ ಆಗುತ್ತಾರೆ ಎಂದು ಹೇಳಿದ್ದಾರೆ. ಧನರಾಜ್ ಅವರು ತಿವಿಕ್ರಮ್ ಅವರ ಹೆಸರನ್ನು ಹೇಳಿದ್ದಾರೆ. ಗೌತಮಿ ಅವರು ಹನುಮಂತು ಅವರ ಹೆಸರನ್ನು ಹೇಳಿದ್ದಾರೆ. ತಿವಿಕ್ರಮ್ ಕೂಡ ಹನುಮಂತು ಅವರ ಹೆಸರನ್ನನೇ ಹೇಳಿದ್ದಾರೆ. ರಜತ್ ತಿವಿಕ್ರಮ್ ವಾರತ ಹೆಸರನ್ನು ಹೇಳಿದ್ದಾರೆ. ಮಂಜು ಅವರು ಹನುಮಂತು ಅವರ ಹೆಸರನ್ನು ಹೇಳಿದ್ದಾರೆ. ಭವ್ಯಾ ಅವರು ತಿವಿಕ್ರಮ್ ಅವರ ಹೆಸರು ಹೇಳಿದ್ದಾರೆ. ಚೈತ್ರಾ ಅವರು ಹನುಮಂತು ಹೆಸರನ್ನು ಹೇಳಿದ್ದಾರೆ. ಹನುಮಂತು ಅವರು ತಿವಿಕ್ರಮ್ ಅವರ ಹೆಸರನ್ನು ಹೇಳಿದ್ದಾರೆ.
ಗೌತಮಿ, ಭವ್ಯಾ, ಧನರಾಜ್, ಚೈತ್ರಾ, ಮಂಜು, ಮೋಕ್ಷಿತಾ ಅವರು ಯಾಕೆ ಯಾರಿಗೂ ಕಾಂಪಿಟೇಟರ್ ಅಲ್ಲ. ಯೋಚನೆ ಮಾಡಿ ಎಂದು ಕಿಚ್ಚ ಅವರು ಸ್ಪರ್ಧಿಗಳಿಗೆ ಖಡಕ್ ಆಗಿಯೇ ಹೇಳಿದ್ದಾರೆ.
ನಾನು ಆಟ ಶುರು ಮಾಡಿ ಬಹಳ ದಿನವಾಯಿತು ಇವರಿಗೆಲ್ಲ ಇವತ್ತು ಶುರು ಆಯಿತೆಂದು ಹನುಮಂತು ಹೇಳಿದ್ದಾರೆ. ಮಾರಿಹಬ್ಬ ಶುರುವಾಗಿದೆ. ಇನ್ಮುಂದೆ ಜೋರಾಗಿಯೇ ಇರುತ್ತದೆ ಎಂದು ತಿವಿಕ್ರಮ್ ವಾರು ಹೇಳಿದ್ದಾರೆ.
ಫ್ರೆಂಡ್ಸ್ ಶಿಪ್ ನಮ್ಮ ಗೋಲ್ ಗೆ ಅಡ್ಡ ಆಗಬಾರದೆಂದು ಕಿಚ್ಚ ಕಿವಿ ಮಾತು ಹೇಳಿದ್ದಾರೆ.
ನಾಮಿನೇಷನ್ ಆಗಿರುವ ಭವ್ಯಾ, ತಿವಿಕ್ರಮ್, ಮೋಕ್ಷಿತಾ, ಧನರಾಜ್ , ಚೈತ್ರಾ ಅವರ ಪೈಕಿ ಮೊದಲು ಭವ್ಯಾ, ತಿವಿಕ್ರಮ್, ಮೋಕ್ಷಿತಾ ಅವರು ಸೇಫ್ ಆಗಿದ್ದಾರೆ.
ಧನರಾಜ್ ಹಾಗೂ ಚೈತ್ರಾ ಅವರಿಗೆ ಟಾಸ್ಕ್ ವೊಂದನ್ನು ನೀಡಿದ್ದಾರೆ. ಅದರಂತೆ ಮನೆಯಲ್ಲಿ ಇಟ್ಟ ಚೀಟಿಯೊಂದರಲ್ಲಿ ಹೊರಗೆ ಹೋಗುವವರ ಹೆಸರು ಇಡಲಾಗಿದೆ. ಚೈತ್ರಾ ಅವರ ಹೆಸರು ಚೀಟಿಯಲ್ಲಿದ್ದು ಧನರಾಜ್ ಅವರಿಗೆ ‘ಎಡ್ಡೆ ಅವುಂಡ್’ ಎಂದು ತುಳುವಿನಲ್ಲಿ ಶುಭಾಶಯವನ್ನು ಕೋರಿ ಚೈತ್ರಾ ಅವರು ಹೊರಗೆ ಹೋಗಿದ್ದಾರೆ.
ಈ ಸಲಿ ನಾನು ಜಾಸ್ತಿ ಮಾತನಾಡಲ್ಲ. ನನ್ನ ವಾಯ್ಸ್ ನಿಮ್ಮೆಗೆಲ್ಲ ಕಿರಿಕಿರಿ ಆಗಲ್ಲ. ಈ ಮನೆಯನ್ನು ನಾನು ತುಂಬಾ ಪ್ರೀತಿಸಿದೆ. ಉತ್ತಮ ಪಡೆದುಕೊಂಡು ಹೋಗ್ತಾ ಇದ್ದೇನೆ ಅನ್ನೋ ಖುಷಿಯಿದೆ. ನನ್ನ ಕಿರಿಕಿರಿ ಇನ್ಮುಂದೆ ನಿಮಗೆ ಇರಲ್ಲ. ನಾನು ಖುಷಿಯಿಂದಲೇ ಹೋಗ್ತಾ ಇದ್ದೇನೆ. ಎಲ್ಲರು ಉತ್ತಮ ಕೊಟ್ಟು ನನ್ನನ್ನು ಕಳಿಸುತ್ತಾ ಇದ್ದೀರಿ ಎಂದು ಚೈತ್ರಾ ಅವರು ಮನೆಯಿಂದ ಆಚೆ ಬಂದಿದ್ದಾರೆ.
ಕೊನೆಯದಾಗಿ ನನ್ನ ಜೈಲೆಂದು ಚೈತ್ರಾ ಜೈಲಿಗೆ ನಮಸ್ಕಾರ ಮಾಡಿ ಮನೆಯಿಂದ ಆಚೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.