ಮತ್ತೆ ಶೂಟಿಂಗ್‌ ಕಾಣಲಿದೆ ಆಟಿಡೊಂಜಿ ದಿನ


Team Udayavani, Mar 28, 2019, 3:25 PM IST

28-March-13
ಕೋಸ್ಟಲ್‌ವುಡ್‌ನ‌ಲ್ಲಿ ಸದ್ಯ ಸೂತಕದ ಛಾಯೆ ಇದೆ. ತುಳು ಸಿನೆಮಾ ಶೂಟಿಂಗ್‌ ಕಾಣುವ ಹಂತದಲ್ಲಿಯೇ ಕೋಸ್ಟಲ್‌ವುಡ್‌ನ‌ ಭರವಸೆಯ ನಿರ್ದೇಶಕ ಆರ್‌. ಹರೀಶ್‌ ಕೊಣಾಜೆಕಲ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶೇ. 80ರಷ್ಟು ಶೂಟಿಂಗ್‌ ಪೂರ್ಣಗೊಳಿಸಿದ ಅವರ ಬಹುನಿರೀಕ್ಷಿತ ಸಿನೆಮಾ ‘ಅಟಿಡೊಂಜಿ ದಿನ’ ಸದ್ಯ ಈ ಕಾರಣದಿಂದ ಶೂಟಿಂಗ್‌ ನಿಲ್ಲಿಸಿದೆ. ಅಂದಹಾಗೆ ಮುಂದೇನು? ಎಂಬ ಪ್ರಶ್ನೆ ಕೋಸ್ಟಲ್‌ವುಡ್‌ನ‌ಲ್ಲಿ ಮೂಡಿದೆ. ಮುಕ್ಕಾಲು ಭಾಗ ಶೂಟಿಂಗ್‌ ಮುಗಿಸಿದ ಸಿನೆಮಾವನ್ನು ಮತ್ತೆ ಯಾರು ಮುಂದುವರಿಸುತ್ತಾರೆ? ಶೂಟಿಂಗ್‌ ಮತ್ತೆ ಶುರುವಾಗುತ್ತದಾ? ಎಂಬೆಲ್ಲ ಪ್ರಶ್ನೆ ಮೂಡಿದೆ.
ಸಿನೆಮಾದ ಮುಖ್ಯನಟ ಪೃಥ್ವಿ ಅಂಬರ್‌ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ಹೀಗೆನ್ನುತ್ತಾರೆ.. ‘ತುಳು ಚಿತ್ರದ ಸಮರ್ಥ ನಿರ್ದೇಶಕನಾಗಬೇಕು ಎಂಬುದು ಅವರಿಗಿದ್ದ ಬಹುದೊಡ್ಡ ಕನಸು. ಈ ನಿಟ್ಟಿನಲ್ಲಿ ಕೈಯಲ್ಲಿ
ಕಥೆ ಹಿಡಿದುಕೊಂಡು ಮೂರು ವರ್ಷಗಳಿಂದ ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದರು. ಈ ಎಳೆ ವಯಸ್ಸಿಗೆ ಚಿತ್ರ ನಿರ್ದೇಶನ ಬೇಡ ಎಂದು ಕೆಲವರು ಹೇಳಿದ್ದೂ ಇದೆ. ಆದರೆ, ಹಠಕ್ಕೆ ಬಿದ್ದು ನಿರ್ಮಾಪಕರನ್ನು ಹುಡುಕಿ, ‘ಆಟಿಡೊಂಜಿ ದಿನ’ ಎಂಬ ತುಳು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಶೇ. 80ರಷ್ಟು ಚಿತ್ರೀಕರಣ ಮುಗಿಸಿ, ಇನ್ನೇನು ಕನಸು ಈಡೇರಿತು ಎನ್ನುವಷ್ಟರಲ್ಲಿ ವಿಧಿಯಾಟಕ್ಕೆ ಬಲಿಯಾದರು ಎನ್ನುವುದನ್ನು ನಂಬುವುದಕ್ಕೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಅವರು.
ಅವರ ಕನಸನ್ನು ಪೂರ್ಣ ಮಾಡುವುದು ಈಗ ನಮ್ಮ ಮುಂದಿರುವ ಜವಾಬ್ದಾರಿ. ಹೀಗಾಗಿ ಶೇ.20ರಷ್ಟು ಬಾಕಿ ಇರುವ ಸಿನೆಮಾದ ಶೂಟಿಂಗ್‌ ಅನ್ನು ನಾವು ಪೂರ್ಣಗೊಳಿಸಲಿದ್ದೇವೆ. ಚಿತ್ರತಂಡ ಜತೆಯಾಗಿ ನಿಂತು ಈ ಕಾರ್ಯಕ್ಕೆ ಮುಂದಿನ ತಿಂಗಳಿನಿಂದ ಕಾರ್ಯನಿರ್ವಹಿಸಲಿದ್ದೇವೆ. 2 ಹಾಡಿನ ಹಾಗೂ 3 ಫೈಟ್‌ ದೃಶ್ಯಗಳ ಚಿತ್ರೀಕರಣ ನಡೆಯಬೇಕಿದೆ. ಜತೆಗೆ 2-3 ಕಥೆಗಳ ದೃಶ್ಯಗಳ ಶೂಟಿಂಗ್‌ ನಡೆಯಲಿದೆ ಎಂದರು. ಅಂದಹಾಗೆ, ಸಿನೆಮಾದಲ್ಲಿ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಪೃಥ್ವಿ ಅಂಬರ್‌, ನಿರೀಕ್ಷಾ ಶೆಟ್ಟಿ, ದೀಪಕ್‌ ರೈ, ಸೂರಜ್‌ ಸಾಲ್ಯಾನ್‌, ಶ್ರದ್ಧಾ ಸಾಲ್ಯಾನ್‌, ಪೃಥ್ವೀರಾಜ್‌ ಮೂಡುಬಿದಿರೆ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಆಕಾಶ್‌ ಹಾಸನ ಕಾರ್ಯಕಾರಿ ನಿರ್ಮಾಪಕ ಸಹನಿರ್ದೇಶನ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.