ಧನ್ವಂತರಿ ದೇವರ ಹಾಡು ‘ಭಜರಂಗಿ 2’ ಸಿನಿಮಾದಲ್ಲಿ ವಿಶೇಷ : ನಾಗೇಂದ್ರ ಪ್ರಸಾದ್
Team Udayavani, Feb 28, 2021, 7:33 PM IST
ಮಣಿಪಾಲ : ಕನ್ನಡ ಚಲನಚಿತ್ರೋದ್ಯಮದ ಜನಪ್ರಿಯ ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಉದಯವಾಣಿಯವರೊಂದಿಗಿನ ವಿಶೇಷ ಸಂದರ್ಶನದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರ ಮುಂಬರುವ ಚಿತ್ರ ಬಜರಂಗಿ 2 ಧನ್ವಂತರಿ ದೇವರುಗಳ ಬಗ್ಗೆ ಒಂದು ಹಾಡನ್ನು ಮಾಡುತ್ತಿದ್ದಾರೆ ಎಂದು ಘೋಷಿಸಿದ್ದಾರೆ.
ಡಾ.ಪ್ರಸಾದ್ ಅವರು ಕನ್ನಡದಲ್ಲಿ “ಅಪ್ಪಾ, ಐ ಲವ್ ಯು,” “ಸಾಲುತ್ತಿಲ್ಲವೇ” ಮತ್ತು ಅಧ್ಯಕ್ಷ ಹಾಡುಗಳನ್ನು ಒಳಗೊಂಡಂತೆ 3,000 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ.
ಸಾಹಿತ್ಯ ಸಂಯೋಜನೆ ಮಾಡುವುದರ ಜೊತೆಗೆ, ಅವರು ಚಲನಚಿತ್ರ ನಿರ್ದೇಶಕ, ನಟ, ಸಂಭಾಷಣೆ ಬರಹಗಾರ ಮತ್ತು ಸಂಗೀತ ಸಂಯೋಜಕರೂ ಕೂಡ ಹೌದು.
ಅವರು ರಂಗಭೂಮಿಯಲ್ಲೂ ಕೂಡ ಸಕ್ರಿಯವಾಗಿ ಭಾಗಿಯಾಗಿದ್ದವರು, ನಂತರ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು.
ಇನ್ನು ಸಿನೆಮಾ ಮತ್ತು ಹಾಡುಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು “ಹಾಡುಗಳು ಚಲನಚಿತ್ರವನ್ನು ವೀಕ್ಷಿಸಲು ಜನರನ್ನು ಆಕರ್ಷಿಸುವ ಮಾಧ್ಯಮ” ಎಂದು ಅಭಿಪ್ರಾಯ ಪಟ್ಟಿರು.
“ಜನರು ತಮ್ಮ ಕೆಲಸವು ಸಮಾಜಕ್ಕೆ ಒಪ್ಪಿಗೆಯಾಗುತ್ತಿದೆಯೋ ಇಲ್ಲವೋ ಎಂದು ತಿಳಿಯಲು ಇತರರ ಅಭಿಪ್ರಾಯಗಳನ್ನು ಕಾಯಬೇಕಾಗಿಲ್ಲ, ಇಂದು ಸಾಮಾಜಿಕ ಮಾಧ್ಯಮವು ನಿಮ್ಮ ಕೆಲಸದ ಬಗ್ಗೆ ತ್ವರಿತ ಮೌಲ್ಯಮಾಪನ ಮತ್ತು ವಿಮರ್ಶೆಗಳನ್ನು ಒದಗಿಸಿಕೊಡುತ್ತದೆ ಎಂದು ಸಾಮಾಜಿಕ ಜಾಲತಾಣಗಳ ವರದಾನದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಂಗೀತದ ವೃತ್ತಿಜೀವನದಲ್ಲಿ ಶ್ರದ್ಧೆ ಮತ್ತು ನಿರಂತರ ಅಭ್ಯಾಸವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಪ್ರಸಾದ್ ಪ್ರತಿಪಾದಿಸಿದ್ದಾರೆ.
ಬಜರಂಗಿಗಾಗಿ ಅವರು ಶ್ರೀ ಕೃಷ್ಣ ಹಾಡನ್ನು ಬರೆದ ಸಮಯವನ್ನು ನೆನಪಿಸಿಕೊಂಡ ಡಾ.ಪ್ರಸಾದ್, “ಈ ಹಾಡಿನಲ್ಲಿ ಭಗವಾನ್ ಕೃಷ್ಣ ಮತ್ತು ಹನುಮನನ್ನು ಒಂದೇ ಹಾಡಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಅನೇಕ ಜನರು ಗಮನಿಸಲಿಲ್ಲ, ವಾಸ್ತವದಲ್ಲಿ ಅವರಿಬ್ಬರೂ ವಿಭಿನ್ನ ಯುಗಗಳಿಗೆ ಸೇರಿದವರಾಗಿದ್ದಾರೆ ಮತ್ತು ಹನುಮಾನ್ ಯಾವಾಗಲೂ ಭಗವಾನ್ ರಾಮನ ಹೆಸರಿನ ಜೊತೆ ಜಒತೆಯಲ್ಲೇ ಇರುತ್ತಾನೆ ಎಂದು ಅಭಿಪ್ರಾಯ ಪಟ್ಟರು.
ಅವರ ಮುಂಬರುವ ಯೋಜನೆಗಳ ಬಗ್ಗೆ, ಈ ವರ್ಷ ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳಿಗಾಗಿ ಅವರು ಬರೆದ ಹಾಡುಗಳು, ವಿವಿಧ ಸೆಲೆಬ್ರಿಟಿಗಳೊಂದಿಗಿನ ಅವರ ಸ್ನೇಹ ಮತ್ತು ಸಿನಿ-ಗಾಸಿಪ್ ಗಳ ಉದಯವಾಣಿ ಬಳಗದೊಂದಿಗೆ ಹಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.