Sandalwood: ಟೀಸರ್ ನಲ್ಲಿ ʼಆಪರೇಶನ್ ಡಿʼ
Team Udayavani, Oct 12, 2024, 2:46 PM IST
“ಆಪರೇಶನ್ ಡಿ’ ಹೀಗೊಂದು ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಅದ್ವಿತ ಫಿಲಂ ಫ್ಯಾಕ್ಟರಿ ಹಾಗೂ ಮಸ್ಕಾಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ ರಂಗನಾಥ್ ಬಿ ಈ ಚಿತ್ರವನ್ನು ನಿರ್ಮಿಸಿದ್ದು, ತಿರುಮಲೇಶ್. ವಿ ಅವರ ನಿರ್ದೇಶನ ಚಿತ್ರಕ್ಕಿದೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ತಿರುಮಲೇಶ್ ವಿ, “ಆಪರೇಷನ್ ಡಿ’ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಮರ್ಡರ್ ಮಿಸ್ಟರಿ ಆದರೂ, ಒಂದು ಕಡೆ ರಕ್ತ ಕಾಣುವುದಿಲ್ಲ ಹಾಗೂ ಆಕ್ಷನ್ ಸನ್ನಿವೇಶಗಳಿಲ್ಲ. 2018-19ರಲ್ಲಿ ಹುಟ್ಟಿದ ಈ ಕಾಲ್ಪನಿಕ ಕಥೆ, 2022 ರಲ್ಲಿ ಸಿನಿಮಾ ರೂಪ ಪಡೆದುಕೊಂಡಿತ್ತು. ನನ್ನ ಕಥೆಯನ್ನು ಸಿನಿಮಾವಾಗಿಸಲು ಕುಟುಂಬದವರು ಹಾಗೂ ಮಿತ್ರರು ಸಹಕಾರಿಯಾದರು. ಸದ್ಯದಲ್ಲೇ ಸೆನ್ಸಾರ್ ಮುಂದೆ ಬರಲಿರುವ ಈ ಚಿತ್ರ ವರ್ಷದ ಕೊನೆಗೆ ತೆರೆಗೆ ಬರಲಿದೆ. ಬಿಡುಗಡೆಯಾಗಿರುವ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ ಎಂದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದೆ ಎಂದು ಸಂಗೀತ ನಿರ್ದೇಶಕಿ ವೇದಿಕ ತಿಳಿಸಿದರು. ಕೆಂಪಗಿರಿ ಹಾಗೂ ತಿರುಮಲೇಶ್ ತಲಾ ಒಂದು ಹಾಡು ಬರೆದಿದ್ದಾರೆ ಹಾಗೂ ಎರಡು ಹಾಡನ್ನು ವೇದಿಕ ಅವರೆ ಬರೆದಿದ್ದಾರೆ, ಭಾರ್ಗವಿ ಮುರಳಿ, ರಂಗನಾಥ್ ಹಾಗೂ ಸುರೇಶ ಅವರು ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹಾ ಭಟ್, ಇಂಚರ ಭರತ್ ರಾಜ್, ಮಹೇಶ್ ಎಸ್ ಕಲಿ, ಶ್ರೀಧರ್, ಪೃಥ್ವಿ ಬನವಾಸಿ, ಶಿವಾನಂದ್, ಸಂಚಯ ನಾಗರಾಜ್, ವೆಂಕಟಾಚಲ, ಶಿವಮಂಜು, ಕ್ರೇಜಿ ನಾಗರಾಜ್, ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.