‘ಸಂಗೀತ ಸಂಜೆ’ಯ ಮೂಲಕ ಶಾಲಾ ಕಟ್ಟಡಕ್ಕೆ 1.20 ಲಕ್ಷ ರೂ.ದೇಣಿಗೆ ನೀಡಿದ್ದರು ಎಸ್ ಪಿಬಿ !
Team Udayavani, Sep 25, 2020, 7:20 PM IST
ಗಂಗಾವತಿ: ನಗರದ ವಿದ್ಯಾನಗರದಲ್ಲಿರುವ ಶಾರದಾ ಎಜುಕೇಶನ್ ಸಂಸ್ಥೆ ಶಾಲಾ ಕಟ್ಟಡ ನಿರ್ಮಾಣಕ್ಕೆ 1977 ರಲ್ಲಿ ಗಂಗಾವತಿಗೆ ಆಗಮಿಸಿದ್ದ ಗಾಯಕ ಎಸ್ ಪಿಬಿ ಸಂಗೀತ ಸಂಜೆ ನಡೆಸಿ ಅದರಿಂದ ಬಂದ 1.20 ಲಕ್ಷ ರೂ.ಗಳನ್ನು ಕಟ್ಟಡ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಿದ್ದರು.
ವಲಸೆ ತೆಲುಗು ಆಂದ್ರ ಜನತೆಯ ಮಕ್ಕಳಿಗಾಗಿ ವಿದ್ಯಾನಗರದಲ್ಲಿ ಶಾರದಾ ಎಜುಕೇಶನ್ ಸಂಸ್ಥೆ ಸ್ಥಾಪಿಸಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡಲು ಸಂಸ್ಥೆಯವರು ಮದ್ರಾಸ್ ನಿಂದ ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಗೂ ತಂಡದವರನ್ನು ಕರೆಯಿಸಿ ಸಂಗೀತ ಸಂಜೆ ಹಮ್ಮಿಕೊಂಡಿದ್ದರು. ಎಸ್ ಪಿಬಿಯವರು ಸಂಭಾವನೆ ಸ್ವೀಕರಿಸದೇ ಶಾಲೆಯ ಕಟ್ಟಡ ನಿರ್ಮಿಸುವಂತೆ ಹಣವನ್ನು ಮರಳಿಸಿ ಹೇಳಿದ್ದರು.
ಒಂದೇ ತಾಯಿಯ ಮಕ್ಕಳು: ಕನ್ನಡ ತೆಲುಗು ಭಾಷಿಕರು ಒಂದೇ ತಾಯಿಯ ಮಕ್ಕಳು. ಸಂಸ್ಕೃತಿ ಜೀವನ ಶೈಲಿ ಒಂದೇ ಆಗಿದ್ದು ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಎರಡು ರಾಜ್ಯಗಳನ್ನು ಬೆಸೆದಿದ್ದರು. ಈಗ ತುಂಗಭದ್ರಾ ಡ್ಯಾಂ ಎರಡು ರಾಜ್ಯಗಳ ಬಾಂಧವ್ಯ ಬೆಸೆದಿದೆ ಎಂದು ಎಸ್.ಬಿ ಬಾಲಸುಬ್ರಹ್ಮಣ್ಯಂ ಹೇಳಿದ್ದರೆಂದು ಸಂಸ್ಥೆ ಅಧ್ಯಕ್ಷ ತಮ್ಮಿನೀಡಿ ಸತ್ಯನಾರಾಯಣ ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.