ಪೂಜಾರಿಂದ 10 ಚಿತ್ರಗಳ ಫ್ಯಾಕ್ಟರಿ ಶುರು!
Team Udayavani, Apr 26, 2017, 11:24 AM IST
ಪೂಜಾ ಗಾಂಧಿ ಎಂಟರ್‌ಟೈನ್‌ಮೆಂಟ್ ಫ್ಯಾಕ್ಟರಿ ಎಂಬ ಪ್ರೊಡಕ್ಷನ್ ಹೌಸ್ ಹುಟ್ಟು ಹಾಕಿ 10 ಚಿತ್ರಗಳನ್ನು ನಿರ್ಮಿಸುವುದಕ್ಕೆ ಯೋಚಿಸುತ್ತಿರುವುದು, ಆ ಪೈಕಿ ಮೂರು ಸದ್ಯದಲ್ಲೇ ಸೆಟ್ಟೇರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆ ಮೂರೂ ಚಿತ್ರಗಳ ಮುಹೂರ್ತಕ್ಕೆ ವೇದಿಕೆ ಸಜ್ಜಾಗಿದ್ದು, ಮೇ ಎರಡಕ್ಕೆ ಒಂದೇ ವೇದಿಕೆಯಲ್ಲಿ ಮೂರೂ ಚಿತ್ರಗಳು ಪ್ರಾರಂಭವಾಗಲಿದೆ. ಈ ಮೂರು ಚಿತ್ರಗಳ ಆಹ್ವಾನ ಪತ್ರಿಕೆಯನ್ನು ಫೈಲ್ ತರಹ ಮಾಡಿಸಿರುವ ಪೂಜಾ, ಆ ಫೈಲ್‌ನಲ್ಲಿ ಚಿತ್ರಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅಚ್ಚು ಹಾಕಿಸಿದ್ದಾರೆ.
ಅಂದು ಪ್ರಾರಂಭವಾಗಲಿರುವ “ಉತಾಹಿ’, “ಬ್ಲಾಕ್ ವರ್ಸಸ್ ವೈಟ್’ ಮತ್ತು “ಭೂ’ ಎಂದು ಹೆಸರಿಡಲಾಗಿದ್ದು, ಮೂರು ಚಿತ್ರಗಳನ್ನು ತೆಲುಗು ನಟ-ನಿರ್ದೇಶಕ ಜೆ.ಡಿ. ಚಕ್ರವರ್ತಿ ನಿರ್ದೇಶಿಸಲಿದ್ದಾರೆ. ಮೂರೂ ಚಿತ್ರಗಳಿಗೆ ಕಥೆ ಬರೆದಿರುವುದು ಸಹ ಅವರೇ. ಇನ್ನು ಹರ್ಷರಾಜ್ ಶ್ರಾಫ್ ಅವರ ಛಾಯಾಗ್ರಹಣ ಮತ್ತು ಅಮರ್ ಮೋಹಿಲೆ ಅವರ ಸಂಗೀತ ಈ ಚಿತ್ರಕ್ಕಿದೆ. ಈ ಮೂರರ ಪೈಕಿ ಪೂಜಾ ಗಾಂಧಿ, “ಉತಾಹಿ’ ಮತ್ತು “ಬ್ಲಾಕ್ ವರ್ಸಸ್ ವೈಟ್’ ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
“ಬ್ಲಾಕ್ ವರ್ಸಸ್ ವೈಟ್’ನಲ್ಲಿ ಸಿತಾರಾ, ಅಮೂಲ್ಯ, ದೀಪಕ್ ಮತ್ತು ಸೃಜನ್ ಎಂಬ ನಾಲ್ಕು ಪ್ರತಿಭೆಗಳನ್ನು ಪರಿಚಯಿಸಿದರೆ, “ಭೂ’ ಚಿತ್ರದಲ್ಲೂ ಸಿತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಪೈಕಿ “ಉತಾಹಿ’ ಲವ್‌ಸ್ಟೋರಿಯಾದರೆ, “ಬ್ಲಾಕ್ ವರ್ಸಸ್ ವೈಟ್’ ಒಂದು ಸೋಷಿಯಲ್ ಡ್ರಾಮಾ ಮತ್ತು “ಭೂ’ ಹಾರರ್ ಚಿತ್ರವಂತೆ. ಈ ಪೈಕಿ ಬಹಳ ದಿನಗಳ ನಂತರ ಲವ್‌ಸ್ಟೋರಿಯಲ್ಲಿ ನಟಿಸುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ ಪೂಜಾ ಗಾಂಧಿ.
ಇದಲ್ಲದೆ ಪೂಜಾ ಗಾಂಧಿ ಮುಂದಿನ ದಿನಗಳಲ್ಲಿ “ಎಬಿಸಿಡಿ ನೋ ನೋ ಇಟ್ಸ್ ಇ’, “ಕೆಎ 02 ಎಚ್‌ವೈ 2578′, “ಕಾಶೊ¾àರಾ’, “ಮುನ್ಸಿಪಾಲಿಟಿ’, “ಮಖº’, “ಮಹಾತ್ಮ ಗಾಂಧಿ ಆಟೋಬಯಾಗ್ರಫಿ’ ಮುಂತಾದ ಚಿತ್ರಗಳನ್ನು ನಿರ್ಮಿಸುವ ಯೋಜನೆಯನ್ನು ಪೂಜಾ ಹಾಕಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.