ರಾಜ್ಕುಮಾರ್ ಇಂಟರ್ನ್ಯಾಶನಲ್ಗೆ 10ರ ಸಂಭ್ರಮ
Team Udayavani, Nov 17, 2017, 5:47 PM IST
ಡಾ.ರಾಜ್ಕುಮಾರ್ ಕುಟುಂಬಕ್ಕೆ ಸೇರಿದ ಡಾ.ರಾಜ್ಕುಮಾರ್ ಇಂಟರ್ನ್ಯಾಶನಲ್ ಹೋಟೆಲ್ಗೆ ಈಗ ದಶಕದ ಸಂಭ್ರಮ. ಸಿನಿಮಾ ಚಟುವಟಿಕೆಯ ಪ್ರಮುಖ ಕೇಂದ್ರವಾದ ಗಾಂಧಿನಗರದಲ್ಲಿರುವ ಡಾ.ರಾಜ್ಕುಮಾರ್ ಇಂಟರ್ನ್ಯಾಶನಲ್ ಹೋಟೆಲ್ ಈಗ 10 ವರ್ಷಗಳನ್ನು ಪೂರೈಸಿ, ಹನ್ನೊಂದನ್ನೇ ವರ್ಷಕ್ಕೆ ಕಾಲಿಟ್ಟಿದೆ.
ಈಗ ಹೋಟೆಲ್ ನವೀಕರಣಗೊಂಡಿದ್ದು, ದೈವಿಕ್ ಎಂಬ ರೆಸ್ಟೋರೆಂಟ್ ಕೂಡಾ ಆರಂಭವಾಗಿದೆ. ಗುರುವಾರ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ರಾಜಕುಮಾರ್ ದೀಪ ಬೆಳಗಿಸುವ ಮೂಲಕ ನವೀಕರಣಗೊಂಡ ಹೋಟೆಲ್ಗೆ ಚಾಲನೆ ನೀಡಿದರು.
“ಹೋಟೆಲ್ ಆರಂಭವಾಗಿ ಹತ್ತು ವರ್ಷ ಆಗಿದೆ. ಈಗ 11ನೇ ವರ್ಷಕ್ಕೆ ಕಾಲಿಡುತ್ತಿದ್ದು, ಸಾಕಷ್ಟು ನವೀಕರಣ ಮಾಡಿದೆ. ಹೊಸದಾಗಿ ದೈವಿಕ್ ಎಂಬ ರೆಸ್ಟೋರೆಂಟ್ ಕೂಡಾ ಆರಂಭವಾಗಿದೆ’ ಎಂದರು ರಾಘವೇಂದ್ರ ರಾಜಕುಮಾರ್. ಅಂದಹಾಗೆ, ಕಾಪುವಿನ ವಾಸುದೇವ ಶೆಟ್ಟಿ ಎನ್ನುವವರು ದೈವೀಕ್ ರೆಸ್ಟೋರೆಂಟ್ ಅನ್ನು ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.