ಬೆಂಗಳೂರು ಚಲನಚಿತ್ರೋತ್ಸವ : ಮೊದಲ ದಿನವೇ ಈ ಐದು ಸಿನಿಮಾ ನೋಡಿ


Team Udayavani, Mar 3, 2022, 10:38 PM IST

ಬೆಂಗಳೂರು ಚಲನಚಿತ್ರೋತ್ಸವ : ಮೊದಲ ದಿನವೇ ಈ ಐದು ಸಿನಿಮಾ ನೋಡಿ

ಒಟ್ಟು ಹನ್ನೊಂದು ಸ್ಕ್ರೀನ್‌ ಗಳಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳಲ್ಲಿ ಆಯ್ಕೆಯೇ ಕಷ್ಟ. ಈ ಹಿನ್ನೆಲೆಯಲ್ಲಿ ಪ್ರತಿದಿನವೂ ವಿಶ್ವ ಸಿನಿಮಾ ವಿಭಾಗದಲ್ಲಿ ನೋಡಲೇಬೇಕಾದ ಕನಿಷ್ಟ 5 ಸಿನಿಮಾಗಳ ಶಿಫಾರಸು ನಮ್ಮದು. ಆ ಚಿತ್ರಗಳಿಗೆ ಟಿಕೆಟುಗಳನ್ನು ಕಾದಿರಿಸಿಕೊಳ್ಳಿ.

ಬೆಂಗಳೂರು 13 ನೇ ಸಿನಿಮೋತ್ಸವ ಇಂದಿನಿಂದ ಆರಂಭಗೊಂಡಿದೆ. ನಾಳೆಯಿಂದ ( ಮಾರ್ಚ್‌ 4] ವಿವಿಧ ವಿಭಾಗಗಳಲ್ಲಿ ಹಲವಾರು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಮಾರ್ಚ್‌ ನಾಲ್ಕರಂದು ವಿಶ್ವ ಸಿನಿಮಾದಲ್ಲಿ ಈ ಐದು ಸಿನಿಮಾಗಳನ್ನು ಹೇಗಾದರೂ ನೋಡಿ. ಕೆಲವೊಂದು ಸಮಯದ ಸಮಸ್ಯೆಯೆಂದರೆ ಮತ್ತೆ ಪ್ರದರ್ಶನ ಮಾಡಿದಾಗ ನೋಡಿ.

ರಿಂಗ್‌ ವಾಂಡರಿಂಗ್‌ [Ring Wandering) 2021 – ಜಪಾನ್‌, ನಿರ್ದೇಶನ : ಮಸಕಾಜು ಕನೆಕೊ [Masakazu kaneko) :

ಈ ಸಿನಿಮಾ ತಪ್ಪಿಸಲೇಬೇಡಿ. ಒಳ್ಳೆಯ ಸಿನಿಮಾ. ಒಂದು ಬಗೆಯ ನವಿರು ಭಾವದ ಸಿನಿಮಾ. ಸ್ವಲ್ಪ ಕಾಲ್ಪನಿಕ ನೆಲೆಯಲ್ಲಿರುವ ಸಿನಿಮಾ ಎನಿಸಿದರೂ, ಅದೇ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಕೆದಕುವ ಚಿತ್ರವೂ ಹೌದು. ಅದರಲ್ಲೂ ಎರಡನೇ ವಿಶ್ವ ಯುದ್ಧದ ಭೀಕರತೆಯನ್ನು ನೆನಪಿಗೆ ತಂದೊಡ್ಡುವ ಚಿತ್ರ. ಒಬ್ಬ ಕಾಮಿಕ್ಸ್‌ ಚಿತ್ರ ಬರೆಯುವ ಕಲಾವಿದ ಜಪಾನಿನ ತೋಳಗಳ ಬಗ್ಗೆ ಕಥೆ ಬರೆಯಲು ಶುರು ಮಾಡುತ್ತಾನೆ. ಅದರ ಹಿನ್ನೆಲೆಯಲ್ಲಿ ಶೋಧನೆ ಆರಂಭಿಸುತ್ತಾನೆ. ಅದೇ ಚಿತ್ರದ ಒಂದು ಎಳೆಯ ಕಥೆ. ಇದರ ನಿರ್ದೇಶಕ ಮಸಕಾಜು ಕನೆಕೊ [Masakazu kaneko]  ಹೇಳುವಂತೆ, ’ನಾವಿಂದು ಮೇಲ್ಸೇತುವೆ, ಬುಲೆಟ್‌ ಟ್ರೈನ್‌ ಇತ್ಯಾದಿ ಸೌಲಭ್ಯಗಳ ಆಧುನಿಕ ಟೋಕಿಯೋವನ್ನು ನೋಡುತ್ತಿದ್ದೇವೆ. ಆದರೆ, ಎರಡನೇ ವಿಶ್ವ ಯುದ್ಧದಲ್ಲಿ ಇಲ್ಲಿಯೂ ಬಾಂಬುಗಳನ್ನು ಹಾಕಿ ಸಹಸ್ರಾರು ಮಂದಿಯನ್ನು ಕೊಲ್ಲಲಾಗಿತ್ತು. ಕೆಲವಷ್ಟೇ ಮಂದಿಯ ಗುರುತು ಹಚ್ಚಿ ಸರಿಯಾದ ರೀತಿಯ ಅಂತ್ಯಕ್ರಿಯೆ ಮಾಡಲಾಯಿತು. ಉಳಿದಂತೆ ಏನೂ ಇಲ್ಲ. ಆ ಭೀಕರತೆ ಬಹಳ ವಿಷಾದನೀಯ. ಅತ್ಯಾಧುನಿಕ ಟೋಕಿಯೊದಲ್ಲಿನ ನಿಜವಾದ ಟೋಕಿಯೋವನ್ನು ಈ ಸಿನಿಮಾದಲ್ಲಿ ಶೋಧಿಸಲು ಪ್ರಯತ್ನಿಸಿದ್ದೇನೆ’ ಎಂದಿದ್ದಾರೆ. ಇದು ಯುದ್ಧದ ನೆರಳನ್ನು ಉಳ್ಳ ಚಿತ್ರ. ಹಾಗೆಂದು ನೇರವಾಗಿ ಎಲ್ಲೂ ಯುದ್ಧದ ಬಗೆಗಿನ ಪ್ರಸ್ತಾಪವಾಗುವುದಿಲ್ಲ. ಮಾನವ ಸಂಬಂಧಗಳನ್ನೇ ವಿಸ್ತರಿಸಿ ಹೇಳಲು ಪ್ರಯತ್ನಿಸಿರುವ ಚಿತ್ರ. ನಾವೀಗ ನಾಗರಿಕತೆಯ ತುತ್ತತುದಿಯಲ್ಲಿದ್ದೇವೆ. ಅದೇ ಸಂದರ್ಭದಲ್ಲಿ ನಮ್ಮ ಚರಿತ್ರೆ ಹಾಗೂ ಪರಂಪರೆಯನ್ನು ನೆನಪಿಸಿಕೊಳ್ಳಬೇಕು’ ಎಂದಿದ್ದಾರೆ.

ಈ ಚಿತ್ರಕ್ಕೆ ನವೆಂಬರ್‌ 2021 ರಲ್ಲಿ ಗೋವಾದಲ್ಲಿ ನಡೆದ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ [ಇಫಿ] ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿತ್ತು. ಜತೆಗೆ ವಾರ್ಸಾ ಸಿನಿಮೋತ್ಸವದಲ್ಲೂ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದೆ.

ದಿ ವರ್ಸ್ಟ್‌ ಪರ್ಸನ್‌ ಇನ್‌ ದಿ ವರ್ಲ್ಡ್‌ [The worst Person in the world), 2021-ನಾರ್ವೆ- ನಿರ್ದೇಶನ : ಜೋಚಿಮ್‌ ಟ್ರೈರ್‌ [Joachim Trier)  :

ಈ ಸಿನಿಮಾ 2022 ರ ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ವಿದೇಶಿ ಭಾಷೆಗಳ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ನಾರ್ವೆಯ ಚಿತ್ರ. ಇದರ ನಿರ್ದೆಶನ ಜೋಚಿಮ್‌ ಟ್ರೈರ್‌. ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿರುವ ಈ ಚಿತ್ರಕ್ಕೆ ಅತ್ಯುತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ’ಇದೊಂದು ನೋವಿನಿಂದ ಕೂಡಿದ ಚಿತ್ರವಾದರೂ ಪ್ರೀತಿ ಮತ್ತು ಸ್ವಾಭಿಮಾನವನ್ನು ಕುರಿತ ಅತ್ಯಂತ ಪ್ರಖರವಾದ ಚಿತ್ರ’ ಎಂಬ ಅಭಿಪ್ರಾಯ ಕೇಳಿಬಂದಿದೆ.

ಕಾನ್‌ ಚಿತ್ರೋತ್ಸವದಲ್ಲಿ ಚಿತ್ರದಲ್ಲಿನ ಅತ್ಯುತ್ತಮ ನಟಿ [Renate Reinsve) ಪ್ರಶಸ್ತಿ ಲಭಿಸಿದೆ. ಕೆಲವು ಚಿತ್ರೋತ್ಸವಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಲಭಿಸಿದೆ. ವಿದೇಶಗಳ ಕೆಲವು ಪತ್ರಿಕೆಗಳ ಪ್ರಕಾರ ಇದು 2021 ರ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ನೋಡಲೇಬೇಕಾದ ಚಿತ್ರವಿದು.

ಥೌಸಂಡ್‌ ಡ್ರೀಮ್ಸ್‌ [1000 dreams)- ಕಿರ್ಗಿಸ್ತಾನ್‌-2021- ಮಾರತ್‌ ಸರುಲು [Marat Sarulu] :

ಇದೊಂದು ವಿಭಿನ್ನವಾದ ಅನುಭವ ನೀಡುವ ಚಿತ್ರ. ಕಾಲ್ಪನಿಕ ಜಗತ್ತು, ವಾಸ್ತವತೆ, ಕನಸು-ಹೀಗೆ ವಿವಿಧ ಆಯಾಮಗಳ ಅನುಭವವನ್ನು ಕಟ್ಟಿಕೊಡಲು ಪ್ರಯತ್ನಿಸಿರುವ ಸಿನಿಮಾ. ಮಾರತ್‌ ಸರುಲು ಅವರು ನಿರ್ದೇಶಿಸಿದ ಚಿತ್ರವಿದು.

ಆತ ತನ್ನ ಸಂಗಾತಿಯ ಹಳೆಯ ಗೆಳೆಯನ ಆರ್ಟ್‌ ಸ್ಟುಡಿಯೋಗೆ ಹೋಗುತ್ತಾನೆ. ಅವನು ಕಾಲ್ಪನಿಕ ಜಗತ್ತನ್ನು ಸೃಷ್ಟಿಸುವ ಮಾಂತ್ರಿಕ. ಕಂಪ್ಯೂಟರ್‌ ನಲ್ಲಿದ್ದನ್ನು ನೋಡುತ್ತಿದ್ದಂತೆ ವಿಶಿಷ್ಟ ಜಗತ್ತಿನೊಳಗೆ ಕಾಲಿಡುತ್ತಾನೆ. ವಾಸ್ತವತೆ ಮತ್ತು ಕಲ್ಪನೆಯ ನಡುವಿನ ಪ್ರಣಯ ಆರಂಭವಾಗುತ್ತದೆ. ಕಥಾನಾಯಕನ ಆಳವಾದ ಪ್ರೀತಿ, ಏಕಾಂತ ಎಲ್ಲವನ್ನೂ ಶಕ್ತ ದೃಶ್ಯಗಳಿಂದ ಹೇಳಲು ಪ್ರಯತ್ನಿಸಿರುವ ಚಿತ್ರ.

ಈ ಚಿತ್ರ ನೋಡುವಂಥದ್ದು.

ವೆನ್‌ ಪೋಮ್‌ಗ್ರಾನೆಟ್‌ ಹೌಲ್ [When Pomegranates Howl)- ಆಫ್ಘಾನಿಸ್ತಾನ-2020- ಗ್ರನಾಜ್‌ ಮೊಸ್ಸವಿ (Granaz Mossavi) :

ಈಗ ಯುದ್ಧದ ಸಮಯ. ಇದಕ್ಕೆ ಹೊಂದುವಂತೆಯೇ ಇರುವ ಚಿತ್ರ ವೆನ್‌ ಪೋಮ್‌ ಗ್ರಾನೆಟ್‌ ಹೌಲ್‌. ಸದಾ ಯುದ್ಧ, ಬಾಂಬುಗಳು ಸ್ಫೋಟಿಸುವಂಥ ಕಾಬೂಲ್‌ ಪಟ್ಟಣದಲ್ಲಿ ನಡೆಯುವ ಕಥೆ. ತನ್ನ ತಂದೆಯನ್ನು ಕಳೆದುಕೊಂಡ ಬಾಲಕ, ತನ್ನ ತಾಯಿ, ತಂಗಿ ಹಾಗೂ ಅಜ್ಜಿಯರನ್ನು ಸಾಕಲು ತಳ್ಳುವ ಗಾಡಿ ಹಿಡಿದು ವ್ಯಾಪಾರ ಆರಂಭಿಸುತ್ತಾನೆ. ದಾಳಿಂಬೆ ಹಣ್ಣಿನಿಂದ ಹಿಡಿದು, ಬೀಟ್‌ ರೂಟ್‌-ಹೀಗೆ ಎಲ್ಲವನ್ನೂ ಮಾರುತ್ತಿರುತ್ತಾನೆ. ಅವನಿಗೆ ಸಿನಿಮಾ ನಟನಾಗಬೇಕೆಂಬ ಆಸೆ. ಈ ಕನಸು ಕೈಗೂಡಿಸಿಕೊಳ್ಳುವಾಗಲೇ ಬಾಂಬು ಸಿಡಿಯುತ್ತದೆ. ಯುದ್ಧಗ್ರಸ್ಥ ಪ್ರದೇಶಗಳಲ್ಲಿ ಮಕ್ಕಳಿಗೆ ರಸ್ತೆಗಳೇ ಆಟವಾಡುವ ಮೈದಾನಗಳು, ದುಡಿಯುವ ಅಂಗಳಗಳು ಹಾಗೂ ಶತ್ರುಗಳ ಯುದ್ಧಭೂಮಿಗಳು- ಎನ್ನುವುದೇ ರೌರವ ವಾಸ್ತವ. ಇದನ್ನೇ ನಿರೂಪಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು.

ತಾಂತ್ರಿಕವಾಗಿ ಬಹಳ ಅದ್ಭುತ ಎನ್ನುವ ಚಿತ್ರವಲ್ಲ. ಆದರೆ ಕಥಾ ಬಂಧದಿಂದ ನಮ್ಮನ್ನು ಹಿಡಿದಿಡುವ ಚಿತ್ರ.

ಎಸಿಯಾ [Asia)- ಇಸ್ರೇಲ್‌-2020- ರೂಥಿ ಪ್ರಿಬರ್ [Ruthy Pribar) :

ಈ ಚಲನಚಿತ್ರವೂ ಸಾಕಷ್ಟು ಒಳ್ಳೆಯ ವಿಮರ್ಶೆ ಪಡೆದ ಚಿತ್ರ. ತಾಯಿ ಮತ್ತು ಮಗಳ ನಡುವಿನ ಬಾಂಧವ್ಯವವನ್ನು ಅತ್ಯಂತ ತೀವ್ರತೆಯಿಂದ ಹೇಳಲು ಪ್ರಯತ್ನಿಸಿರುವ ಚಿತ್ರ. ಹಲವು ಚಲನಚಿತ್ರೋತ್ಸವಗಳಲ್ಲೂ ಪ್ರದರ್ಶಿತವಾಗಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿರುವ ಚಿತ್ರ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟನೆಗೂ ಪ್ರಶಸ್ತಿ ಪಡೆದಿರುವ ಚಿತ್ರವಿದು.

 

ಟಾಪ್ ನ್ಯೂಸ್

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

PM Mod

PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು

Shri-Guru-Kottureshwara-Temple

ಬರೀ ಹುಂಡಿ ಪೆಟ್ಟಿಗೆಗಳಿಂದ ತುಂಬಿದ ಕೊಟ್ಟೂರೇಶ್ವರ ದೇವಸ್ಥಾನ: ಭಕ್ತರಿಂದ ತೀವ್ರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudla namdu Ooru movie

Sandalwood: ಕುಡ್ಲ ನಮ್ದು ಊರು!: ಇದು ಕರಾವಳಿ ತಂಡದ ಹೊಸ ಕನಸು

1-neemo

ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ewewq

Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್

bsf

2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು

Basavarj-horatti

ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ

1-adads

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

1-viju

Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.