ಬಿಡುಗಡೆಗೆ ಮೊದಲೇ ಸದ್ದು ಮಾಡುತ್ತಿದೆ ಪಡ್ಡೆ ಹುಲಿ
2.36 ಕೋಟಿ ಡಬ್ಬಿಂಗ್ ರೈಟ್ಸ್ ಪಡೆದ ಮಂಜು ಮಗನ ಸಿನಿಮಾ
Team Udayavani, Apr 6, 2019, 1:54 PM IST
![padde-huli](https://www.udayavani.com/wp-content/uploads/2019/04/padde-huli-620x424.png)
![padde-huli](https://www.udayavani.com/wp-content/uploads/2019/04/padde-huli-620x424.png)
ಬೆಂಗಳೂರು: ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಕೆ ಮಂಜು ಅಭಿನಯದ ಮೊದಲ ಸಿನಿಮಾ ‘ಪಡ್ಡೆಹುಲಿ’ ಈಗಾಗಲೇ ಟ್ರೈಲರ್ ಮತ್ತು ಹಾಡುಗಳಿಂದ ಸುದ್ದಿಯಾಗಿದ್ದು ಗೊತ್ತೆ ಇದೆ. ಆದರೆ ಈಗ ಮಂಜು ಮಗನ ಮೊದಲ ಚಿತ್ರವೇ ದೊಡ್ಡ ಮೊತ್ತಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್ ಪಡೆದಿದ್ದು, ಚಿತ್ರ ತಂಡದ ಖುಷಿ ಡಬಲ್ ಆಗಿದೆ.
ಶ್ರೇಯಸ್ ಮತ್ತು ನಿಶ್ವಿಕಾ ನಾಯ್ಡು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ ಪಡ್ಡೆ ಹುಲಿ’ ಚಿತ್ರವನ್ನು ಚೆನ್ನೈ ನ ಎಸ್ ಪಿ ಎಂ ಆರ್ಟ್ಸ್ ಎಲ್ ಎಲ್ ಬಿ ಸಂಸ್ಥೆ 2.36 ಕೋಟಿ ಕೊಟ್ಟು ಹಿಂದಿ ಡಬ್ಬಿಂಗ್ ರೈಟ್ಸ್ ಪಡೆದಿದೆ.ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಬಂಡವಾಳ ಹಾಕಿರುವುದು ರಮೇಶ್ ರೆಡ್ಡಿ ನಂಗ್ಲಿ.
ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಚಿತ್ರ ಏಪ್ರಿಲ್ 19ರಂದು ತೆರೆ ಕಾಣುತ್ತಿದೆ.