ಭಾಷೆಗಳ ಮಿತಿಯನ್ನು ಮೀರಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿವೆ ‘ಪ್ಯಾನ್ ಇಂಡಿಯಾ ಸಿನಿಮಾಗಳು
Team Udayavani, Aug 1, 2022, 12:24 PM IST
2022, ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆದ ಸಿನಿಮಾಗಳ ಪೈಕಿ ಯಾವ ಸಿನಿಮಾ ಹೆಚ್ಚು ಹಣ ಗಳಿಸಿತು. ಕನ್ನಡದಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳು ಒಂದರ ಹಿಂದೊಂದು ಸೂಪರ್ ಹಿಟ್ ಆಗುತ್ತಿವೆ. ಕೋಟ್ಯಂತರ ಹಣ ಬಾಚುತ್ತಿವೆ. ಇದರ ಜೊತೆಗೆ ವರ್ಷದಲ್ಲಿ ತಮಿಳು, ತೆಲುಗು ಸೇರಿದಂತೆ ಹಲವು ಬಾಷೆಗಳ ಸಿನಿಮಾಗಳು ತಮ್ಮ ಅತ್ಯದ್ಭುತ ನಿರ್ಮಾಣ, ಸಂಕಲನ, ಬರವಣಿಗೆ ಮತ್ತು ಕಥೆ ಹಾಗು ನಾಯಕ ನಟರ ನಟನೆಯ ಕಾರಣದಿಂದ ಪ್ರಾದೇಶಿಕ ಸಿನಿಮಾಗಳು ತಮ್ಮ ಬಾಷೆಗಳ ಮಿತಿಯನ್ನು ಮೀರಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿವೆ. ಕಲೆ, ಕಲಾವಿದರಿಗೆ ಹುಡಿಕೆ ಮತ್ತು ತಾಂತ್ರಿಕ ಬೆಂಬಲ ದೊರೆತರೆ ಅನುಪಮ ಚಲನಚಿತ್ರಗಳು ಮೂಡಿಬರಲು ಸಾಧ್ಯ. ಈ ಹಂತದಲ್ಲಿ ಗಳಿಕೆಯೂ ನಿರೀಕ್ಷೆಗಳ ಗಡಿ ದಾಟುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಟಾಪ್ ಹತ್ತರ ಪಟ್ಟಿಯಲ್ಲಿ ಮೂರು ತೆಲುಗು ಸಿನಿಮಾಗಳಿವೆ, ಎರಡು ತಮಿಳು ಸಿನಿಮಾ ಇದೆ. ಮೂರು ಹಿಂದಿ ಸಿನಿಮಾ ಇದೆ. ಎರಡು ತಮಿಳು ಸಿನಿಮಾ ಇದೆ. ಒಂದು ಇಂಗ್ಲೀಷ್ ಸಿನಿಮಾ, ಒಂದೇ ಒಂದು ಕನ್ನಡ ಸಿನಿಮಾ ಇದೆ.
‘ಭಿಮ್ಲಾ ನಾಯಕ್‘
ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್’. ಮಲಯಾಳಂನ ‘ಅಯ್ಯಪ್ಪನುಂ ಕೋಶಿಯುಂ’ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 133 ಕೋಟಿ ರುಪಾಯಿ ಗಳಿಸಿದೆ.
‘ಗಂಗೂಬಾಯಿ ಕಾಠಿಯಾವಾಡಿ’
ಆಲಿಯಾ ಭಟ್ ನಟನೆಯ ಹಿಂದಿ ಸಿನಿಮಾ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ 151.80 ಕೋಟಿ ಹಣವನ್ನು ಬಾಕ್ಸ್ ಆಫೀಸ್‌ನಲ್ಲಿ ಗಳಿಸಿ ಈವರೆಗೆ ಅತಿ ಹೆಚ್ಚು ಹಣ ಗಳಿಸಿದ ಒಂಬತ್ತನೇ ಸಿನಿಮಾ ಎನಿಸಿಕೊಂಡಿದೆ.
‘ಸರ್ಕಾರು ವಾರಿ ಪಾಟ’
ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಪಕ್ಕಾ ಕಾಮಿಡಿ ಆಕ್ಷನ್ ಸಿನಿಮಾ ಆಗಿರುವ ‘ಸರ್ಕಾರು ವಾರಿ ಪಾಟ’ ಮೇ 12 ರಂದು ಬಿಡುಗಡೆ ಆಗಿತ್ತು. ಕಿರ್ತಿ ಸುರೇಶ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ 155.60 ಕೋಟಿ ರುಪಾಯಿ ಹಣ ಗಳಿಸಿತ್ತು.
ಏಳನೇ ಸ್ಥಾನದಲ್ಲಿ ಹಾಲಿವುಡ್ ಸಿನಿಮಾ
‘ಡಾಕ್ಟರ್ ಸ್ಟ್ರೇಂಜ್; ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್’ ಸಿನಿಮಾವು ಭಾರತದಲ್ಲಿ 161 ಕೋಟಿ ರುಪಾಯಿ ಹಣ ಗಳಿಸಿತು.
ಆರನೇ ಸ್ಥಾನದಲ್ಲಿ ಫ್ಲಾಪ್ ಸಿನಿಮಾ
ತಮಿಳಿನ ‘ಬೀಸ್ಟ್’ ಸಿನಿಮಾ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಸಲಿಗೆ ‘ಬೀಸ್ಟ್’ ಸಿನಿಮಾ ಫ್ಲಾಪ್ ಸಿನಿಮಾ ಎಂದು ಹೇಳಲಾಗಿತ್ತು. ಆದರೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ 169.40 ಕೋಟಿ ಹಣ ಗಳಿಸಿತು.
‘ಭೂಲ್ ಭುಲಯ್ಯ 2
ಕಾಮಿಡಿ ಹಾರರ್ ಸಿನಿಮಾ ಆದ ‘ಭೂಲ್ ಭುಲಯ್ಯ 2’ ಮುಳುಗುತ್ತಿದ್ದ ಬಾಲಿವುಡ್‌ಗೆ ಆಸರೆ ನೀಡಿದ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆದ ಈ ಸಿನಿಮಾ 217.19 ಕೋಟಿ ಹಣ ಗಳಿಸಿತು.
‘ದಿ ಕಾಶ್ಮೀರ್ ಫೈಲ್ಸ್’
ಅತಿ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ್ದರೂ ಸಹ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಭಾರಿ ಮೊತ್ತದ ಹಣವನ್ನು ಗಳಿಸಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 280 ಕೋಟಿ ರುಪಾಯಿಗೂ ಹೆಚ್ಚು ಹಣ ಗಳಿಸಿದೆ.
‘ವಿಕ್ರಂ
ನಾಲ್ಕು ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದ ಕಮಲ್ ಹಾಸನ್ ‘ವಿಕ್ರಂ’ ಸಿನಿಮಾ ಮೂಲಕ ಭರ್ಜರಿಯಾಗಿ ಎಂಟ್ರಿ ನೀಡಿದ್ದು, ಬಾಕ್ಸ್ ಆಫೀಸ್‌ನಲ್ಲಿ 307 ಕೋಟಿ ರುಪಾಯಿಗೂ ಹೆಚ್ಚು ಹಣ ಗಳಿಸಿತು.
‘RRR’
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ RRR ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜೂ ಎನ್‌ಟಿಆರ್-ರಾಮ್ ಚರಣ್ ತೇಜ ನಟನೆಯ ಈ ಸಿನಿಮಾ ಭಾರತದಲ್ಲಿ 902 ಕೋಟಿ ಗಳಿಕೆ ಮಾಡಿದೆಮೊದಲ ಸ್ಥಾನದಲ್ಲಿ ‘ಕೆಜಿಎಫ್ 2’
ಈ ಪಟ್ಟಿಯಲ್ಲಿ ಕನ್ನಡದ ಹೆಮ್ಮೆಯ ಸಿನಿಮಾ ‘ಕೆಜಿಎಫ್ 2’ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಮಾತ್ರವೇ ಈ ಸಿನಿಮಾ ಸರಿ ಸುಮಾರು 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಟಾಪ್ ಹತ್ತರ ಪಟ್ಟಿಯಲ್ಲಿ ಮೂರು ತೆಲುಗು ಸಿನಿಮಾಗಳಿವೆ, ಎರಡು ತಮಿಳು ಸಿನಿಮಾ ಇದೆ. ಮೂರು ಹಿಂದಿ ಸಿನಿಮಾ ಇದೆ. ಎರಡು ತಮಿಳು ಸಿನಿಮಾ ಇದೆ. ಒಂದು ಇಂಗ್ಲೀಷ್ ಸಿನಿಮಾ, ಒಂದೇ ಒಂದು ಕನ್ನಡ ಸಿನಿಮಾ ಇದೆ. ಪ್ರಾದೇಶಿಕ ಸಿನಿಮಾಗಳ ಈ ಮಟ್ಟದ ಬೆಳವಣಿಗೆ ಾಧುನಿಕ ಸಾಹಿತ್ಯ ಮತ್ತು ಕಲೆಗೆ ಕೊಡುಗೆ ನೀಡಲಿ ಎನ್ನುವುದು ಕಲಾರಾಧಕರ ಅಪೇಕ್ಷೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.