ಜಗ್ಗೇಶ್ ಚಿತ್ರದಲ್ಲಿ 21 ನಾಯಕಿಯರು!
ಕಾಳಿದಾಸನ ಸುತ್ತಮುತ್ತ ಕಲರ್‌ಫುಲ್ ಬೆಡಗಿಯರು
Team Udayavani, Oct 23, 2019, 5:01 AM IST
ಜಗ್ಗೇಶ್‌ಗೆ 21ನಾಯಕಿಯರ ಸಾಥ್! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಸತ್ಯ. ಜಗ್ಗೇಶ್ ಅವರ ಸಿನಿಮಾವೊಂದರಲ್ಲಿ 21 ಮಂದಿ ಕನ್ನಡದ ನಾಯಕಿ ನಟಿಯರು ಕಾಣಿಸಿಕೊಳ್ಳಲಿದ್ದಾರೆ! ಅಷ್ಟಕ್ಕೂ ಯಾವ ಸಿನಿಮಾ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ “ಕಾಳಿದಾಸ ಕನ್ನಡ ಮೇಷ್ಟ್ರು’. ಈ ಸಿನಿಮಾದಲ್ಲಿ ಜಗ್ಗೇಶ್ ನಾಯಕರಾಗಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ನವೆಂಬರ್ 15ರಂದು ಚಿತ್ರ ತೆರೆಕಾಣುತ್ತಿದೆ.
ಈಗ ಚಿತ್ರತಂಡದಿಂದ ಹೊರಬಿದ್ದಿರುವ ಸುದ್ದಿ ಪ್ರಕಾರ, ಈ ಚಿತ್ರದಲ್ಲಿ ಜಗ್ಗೇಶ್‌ಗೆ 21 ನಾಯಕಿಯರು ಸಾಥ್ ನೀಡುತ್ತಿದ್ದಾರೆ. ಅದು ಚಿತ್ರದ ಪ್ರಮೋಶನ್ ಗೀತೆಯಲ್ಲಿ. ಚಿತ್ರಕ್ಕಾಗಿ ಕವಿರಾಜ್ ಪ್ರಮೋಶನ್ ಸಾಂಗ್ ಮಾಡಿದ್ದು, ಇದರಲ್ಲಿ ಕನ್ನಡದ ನಟಿಯರಾದ ರಚಿತಾ ರಾಮ್, ಹರಿಪ್ರಿಯಾ, ಕಾರುಣ್ಯ, ರೂಪಿಕಾ, ಅದಿತಿ ಪ್ರಭುದೇವ, ಅದಿತಿ ರಾವ್, ಸಂಯುಕ್ತಾ ಹೊರನಾಡು, ಸೋನು ಗೌಡ, ದಿಶಾ ಪೂವಯ್ಯ, ನಿಶ್ವಿಕಾ ನಾಯ್ಡು, ಶುಭಾ ಪೂಂಜಾ ಸೇರಿದಂತೆ ಒಟ್ಟು 21 ಮಂದಿ ನಟಿಯರು ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ಈ ಬಗ್ಗೆ ಮಾತನಾಡುವ ನಿರ್ದೇಶಕ ಕವಿರಾಜ್, ಚಿತ್ರಕ್ಕೆ 21 ಮಂದಿ ನಾಯಕಿಯರು ಸಾಥ್ ನೀಡಿರೋದು ನಿಜ. ಅದು ಹೇಗೆ ಎಂಬುದು ಸಸ್ಪೆನ್ಸ್’ ಎನ್ನುತ್ತಾರೆ. ಅಂದಹಾಗೆ, ಈ ಚಿತ್ರದಲ್ಲಿ ಜಗ್ಗೇಶ್ ಅವರಿಗೆ ಮೇಘನಾ ಗಾಂವ್ಕರ್ ಜೋಡಿ. ಜಗ್ಗೇಶ್ ಅವರು ಈ ಚಿತ್ರದಲ್ಲಿ ಕನ್ನಡ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮರ್ಥ್ಯ ಮೀರಿ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸುವ ಪೋಷಕರು, ಶಿಕ್ಷಣ ವ್ಯವಸ್ಥೆಯ ದುರುಪಯೋಗ, ಮಧ್ಯಮ ವರ್ಗದ ತೊಂದರೆ ಸೇರಿದಂತೆ ಹಲವು ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆಯಂತೆ.
ಗಂಭೀರ ವಿಷಯವನ್ನು ಹಾಸ್ಯಮಯವಾಗಿ ಹೇಳುವ ಜೊತೆಗೆ ಚಿತ್ರದಲ್ಲೊಂದು ಸಂದೇಶವನ್ನು ನೀಡಲಾಗಿದೆಯಂತೆ. ದುಬೈನಲ್ಲಿ ಎಂಟನೆ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಯೇ ನಿರ್ದೇಶಕರಿಗೆ ಕಥೆ ರಚಿಸಲು ಕಾರಣವಾಯಿತಂತೆ. ಚಿತ್ರದಲ್ಲಿ ಜಗ್ಗೇಶ್, ಮೇಘನಾ, ಅಂಬಿಕಾ, ತಬಲ ನಾಣಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ನಟ ದರ್ಶನ್ ಬಿಡುಗಡೆ ಮಾಡಿ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.