Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು


Team Udayavani, Nov 29, 2024, 1:01 PM IST

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

2024 ಕೊನೆಯಾಗುತ್ತಾ ಬಂದಿದೆ. ತಿರುಗಿ ನೋಡಿದರೆ ಚಿತ್ರರಂಗದಲ್ಲಿ ಸಾಕಷ್ಟು ಘಟನೆಗಳು ನಡೆದು ಹೋಗಿವೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿವೆ. ನವೆಂಬರ್‌ ಕೊನೆಯವರೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ 210 ಸಿಗುತ್ತವೆ. ಇನ್ನು ನೇರವಾಗಿ ಓಟಿಟಿಯಲ್ಲಿ 4 ಸಿನಿಮಾಗಳು ಬಿಡುಗಡೆ ಕಂಡಿವೆ. ಅದನ್ನು ಸೇರಿಸಿದರೆ 214. ಡಿಸೆಂಬರ್‌ ಕೊನೆಯ ವಾರದ ಹೊತ್ತಿಗೆ ಈ ಸಂಖ್ಯೆ 220ರ ಹತ್ತಿರ ಬಂದು ನಿಲ್ಲಲಿದೆ.  ಏಕೆಂದರೆ ಡಿಸೆಂಬರ್‌ನಲ್ಲಿ ಸ್ಟಾರ್‌ ಸಿನಿಮಾಗಳ ಹವಾ ಇರುವುದರಿಂದ ಹೆಚ್ಚೆಂದರೆ 6 ರಿಂದ 7 ಕನ್ನಡ ಸಿನಿಮಾಗಳಷ್ಟೇ ತೆರೆಕಾಣುವ ಸಾಧ್ಯತೆ ಇದೆ. ಈ ಮೂಲಕ 500 ರಿಂದ 600 ಕೋಟಿ ರೂಪಾಯಿ ಬಂಡವಾಳವನ್ನು ಈ ವರ್ಷವೂ ಚಿತ್ರರಂಗಕ್ಕೆ ಹೂಡಲಾಗಿದೆ.

ಚಿತ್ರಗಳ ಸಂಖ್ಯೆ ಮುಖ್ಯವೋ ಗುಣಮಟ್ಟ ಮುಖ್ಯವೋ ಎಂಬ ಪ್ರಶ್ನೆ ಪ್ರತಿ ಬಾರಿಯೂ ಬರುತ್ತದೆ. ಸಂಖ್ಯೆಗಿಂತ ಗುಣಮಟ್ಟ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾದರೂ, ಬಿಡುಗಡೆಯಾಗುತ್ತಿರುವ ಸಾಲು ಸಾಲು ಸಿನಿಮಾಗಳನ್ನು ತಡೆಯುವವರು ಯಾರು ಎಂಬ ಪ್ರಶ್ನೆಯೂ ಬರುತ್ತದೆ. ವಾರಕ್ಕೆ ಇಷ್ಟೇ ಸಿನಿಮಾ ಬಿಡುಗಡೆಯಾಗಬೇಕು ಎಂಬ ಯಾವ ನಿಯಮವೂ ಇಲ್ಲಿಲ್ಲ. ಅದೇ ಕಾರಣದಿಂದ ಚಿತ್ರ ಬಿಡುಗಡೆಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಗುಣಮಟ್ಟದ ಕೊರತೆ

ಈ ವರ್ಷ ಬಿಡುಗಡೆಯಾದ ಅಷ್ಟೂ ಚಿತ್ರಗಳನ್ನು ನೋಡಿದರೆ ಬಹುತೇಕ ಸಿನಿಮಾಗಳಲ್ಲಿ ಗುಣಮಟ್ಟದ ಕೊರತೆ ಎದ್ದು ಕಾಣುತ್ತದೆ. ಚಿತ್ರರಂಗಕ್ಕೆ ಬರಬೇಕು, ಏನೋ ಒಂದು ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ಸಿನಿಮಾ ಮಾಡಿದವರೇ ಜಾಸ್ತಿ. ಅದರ ಪರಿಣಾಮವಾಗಿಯೇ ಕಳಪೆ ಸಿನಿಮಾ ಮತ್ತು ಕಳಪೆ ಪ್ರದರ್ಶನ ಎಂಬ ಹಣೆಪಟ್ಟಿಯನ್ನು ಆ ಸಿನಿಮಾಗಳು ಪಡೆದುಕೊಂಡಿವೆ. ಜೊತೆಗೆ ಇಂತಹ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್‌ ರೇಟ್‌ ಕೂಡಾ ಕುಸಿಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿನಿಮಾವನ್ನು ಪ್ರೀತಿಯಿಂದ, ಶ್ರದ್ಧೆಯಿಂದ ಮಾಡಿದಾಗ ಮಾತ್ರ ಗುಣಮಟ್ಟದಿಂದ ಮೂಡಿಬರಲು ಸಾಧ್ಯ. ಗೆಲುವು ಆ ಮೇಲಿನ ಮಾತಾದರೂ ಒಳ್ಳೆಯ ಸಿನಿಮಾ ಮಾಡಿದ ತೃಪ್ತಿ ನಿರ್ದೇಶಕನಿಗಿರುತ್ತದೆ.

ಇನ್ನು, ವರ್ಷಕ್ಕೆ ಇಷ್ಟೊಂದು ಸಿನಿಮಾ ಬಿಡುಗಡೆಯಾಗುತ್ತಿರುವುದು ಚಿತ್ರರಂಗಕ್ಕೆ ಪೂರಕವೇ ಮಾರಕವೇ ಎಂಬ ಪ್ರಶ್ನೆ, ಸಂದೇಹ ಅನೇಕರಲ್ಲಿದೆ. ಸಿನಿಮಾಗಳ ಗುಣಮಟ್ಟದ ದೃಷ್ಟಿಯಿಂದ ಇಷ್ಟೊಂದು ಸಂಖ್ಯೆಯ ಸಿನಿಮಾಗಳು ಬಿಡುಗಡೆಯಾಗುತ್ತಿರುವು ಖಂಡಿತಾ ಮಾರಕ. ಆದರೆ, ಚಿತ್ರರಂಗವನ್ನು ಸದಾ ಚಲನಶೀಲವನ್ನಾಗಿಸುವಲ್ಲಿ ಸಂಖ್ಯೆ ಕೂಡಾ ಪ್ರಮುಖವಾಗಿರುತ್ತದೆ. ಚಲನಶೀಲತೆಯ ಜೊತೆಗೆ ಗುಣಮಟ್ಟವೂ ಸೇರಿಕೊಂಡರೆ ಚಿತ್ರರಂಗ ಮತ್ತೂಂದು ಹಂತ ಏರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆ ನಿಟ್ಟಿನಲ್ಲಿ ಚಿತ್ರರಂಗಕ್ಕೆ ಬರುವ ಹೊಸಬರು ಗಮನಹರಿಸುವ ಅಗತ್ಯವಿದೆ.

ಡಿಸೆಂಬರ್‌ ತಿಂಗಳು ಸ್ಟಾರ್‌ಗಳಿಗೆ ಮೀಸಲು

ಕಳೆದ 11 ತಿಂಗಳಿನಲ್ಲಿ ಬಿಡುಗಡೆಯಾದ ವೇಗದಲ್ಲಿ ಡಿಸೆಂಬರ್‌ನಲ್ಲಿ ಸಿನಿಮಾಗಳು ಬಿಡುಗಡೆಯಾಗುವು ದಿಲ್ಲ. ಅದಕ್ಕೆ ಕಾರಣ ಸ್ಟಾರ್‌ ಸಿನಿಮಾಗಳ ಹವಾ. ಮುಖ್ಯವಾಗಿ ಡಿಸೆಂಬರ್‌ ಮೊದಲ ವಾರ ಅಂದರೆ ಡಿ.5ರಂದು ಬಹುನಿರೀಕ್ಷಿತ “ಪುಷ್ಪ-2′ ಚಿತ್ರ ತೆರೆಕಾಣುತ್ತಿದೆ. ಇದು ಮೂಲ ತೆಲುಗು ಚಿತ್ರವಾದರೂ ಎಲ್ಲಾ ಭಾಷೆಗಳಲ್ಲೂ ದೊಡ್ಡ ಹವಾ ಸೃಷ್ಟಿ ಮಾಡಿದೆ. ಕರ್ನಾಟಕದ ವಿತರಣೆಯ ಹಕ್ಕನ್ನು ವಿತರಕರೊಬ್ಬರು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ. ಹಾಗಾಗಿ, ಕರ್ನಾಟಕದಲ್ಲೂ “ಪುಷ್ಪ-2′ ಬಹುತೇಕ ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಡಿಸೆಂಬರ್‌ ಮೊದಲ ವಾರ ಕೇವಲ ಒಂದೇ ಒಂದು ಕನ್ನಡ ಚಿತ್ರ (ಧೀರ ಭಗತ್‌ ರಾಯ್‌) ಮಾತ್ರ ತನ್ನ ಬಿಡುಗಡೆ ಘೋಷಿಸಿಕೊಂಡಿದೆ. ಉಳಿದಂತೆ ಉಪೇಂದ್ರ ಯು-ಐ ಚಿತ್ರ ಡಿಸೆಂಬರ್‌ 20ಕ್ಕೆ ಬಿಡುಗಡೆಯನ್ನು ಘೋಷಿಸಿಕೊಂಡರೆ ಸುದೀಪ್‌ “ಮ್ಯಾಕ್ಸ್‌’ ಡಿ.25ಕ್ಕೆ ಬರಲಿದೆ. ಈ ಕಾರಣದಿಂದ ಈ ಎರಡು ವಾರಗಳಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.

ಒಟಿಟಿಯಲ್ಲಿ 4 ಸಿನಿಮಾ

ಕಳೆದ 11 ತಿಂಗಳಿನಲ್ಲಿ 210 ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆಕಂಡರೆ 4 ಸಿನಿಮಾಗಳು ಮಾತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. “ಎಂಥ ಕಥೆ ಮಾರಾಯ’, “ಹ್ಯಾಪಿ ಬರ್ತ್‌ಡೇ ಟು ಮಿ’, “ಹ್ಯಾಪಿ ಮ್ಯಾರೀಡ್‌ ಲೈಫ್’ ಹಾಗೂ “ಮೂರು ಕಾಸಿನ ಕುದುರೆ’ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಗೊಂಡಿವೆ.

5 ದಿನ ಅಂತರದಲ್ಲಿ 2 ಸ್ಟಾರ್‌ ಸಿನಿಮಾ

ಸದ್ಯ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್‌ ನಟರ ಚಿತ್ರಗಳು ಐದು ದಿನ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಉಪೇಂದ್ರ ನಟನೆಯ “ಯು-ಐ’ ಚಿತ್ರ ಡಿಸೆಂಬರ್‌ 20ಕ್ಕೆ ತೆರೆಕಂಡರೆ, ಸುದೀಪ್‌ ಅವರ “ಮ್ಯಾಕ್ಸ್‌’ ಏಕಾಏಕಿ ಡಿ.25ಕ್ಕೆ ಬರುವುದಾಗಿ ಘೋಷಿಸಿಕೊಂಡಿದೆ. ಹೀಗಾಗಿ ಐದು ದಿನ ಅಂತರದಲ್ಲಿ ಎರಡು ಸ್ಟಾರ್‌ ಸಿನಿಮಾ ಬರುವುದು ಪಕ್ಕಾ. ಈ ಹಿಂದೆಯೂ ಸುದೀಪ್‌ ಸಿನಿಮಾಕ್ಕೆ ಹೀಗೆಯೇ ಆಗಿತ್ತು. “ಕೋಟಿಗೊಬ್ಬ-2′ 2021 ಅಕ್ಟೋಬರ್‌ 15ಕ್ಕೆ ತೆರೆಕಂಡರೆ, ಅದರ ಮುಂಚಿನ ದಿನ ವಿಜಯ್‌ “ಸಲಗ’ ಅಕ್ಟೋಬರ್‌ 14ಕ್ಕೆ ತೆರೆಕಂಡು, ಗೆಲುವಿನ ನಗೆ ಬೀರಿತ್ತು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-movie

Mock the Young: ಹೊಸಬರ ಚಿತ್ರವಿದು.. ಹಾಡಲ್ಲಿ ಮಾಕ್‌ ದಿ ಯಂಗ್‌

9-movie

Kanna Mucche Kaade Goode – Movie review: ನಿಗೂಢ ಹಾದಿಯ ಹೆಜ್ಜೆಗಳು

7-swg2

Sanju Weds Geetha 2 Review: ಏರಿಳಿತಗಳ ಪಯಣದ ಭಾವ ಲಹರಿ

Sandalwood: ಅದ್ಧೂರಿ ಸೆಟ್‌ ನಲ್ಲಿ ಅಯೋಗ್ಯ-2

Sandalwood: ಅದ್ಧೂರಿ ಸೆಟ್‌ ನಲ್ಲಿ ಅಯೋಗ್ಯ-2

Sanjana Anand set to join Ekka

ʼಎಕ್ಕʼ ತಂಡ ಸೇರಿದ ಸಂಜನಾ ಆನಂದ್

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.