ಸುದೀಪ್‌ ಬರ್ತ್‌ಡೇಗೆ ಅಭಿಮಾನಿಗಳಿಗೆ 3 ಗಿಫ್ಟ್


Team Udayavani, Aug 30, 2017, 10:32 AM IST

sudeep-raju-maedium.jpg

ಸೆಪ್ಟೆಂಬರ್‌ 02 ಸುದೀಪ್‌ ಹುಟ್ಟುಹಬ್ಬ. ಪ್ರತಿ ವರ್ಷ ಸುದೀಪ್‌ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬ. ಸೆಪ್ಟೆಂಬರ್‌ 01ರ ಮಧ್ಯರಾತ್ರಿಯಿಂದಲೇ ಜೆ.ಪಿ.ನಗರದ ಅವರ ಮನೆಮುಂದೆ ಕಟೌಟ್‌, ಸ್ಟಾರ್‌ ಕಟ್ಟುವ ಅಭಿಮಾನಿಗಳ ಆಸೆ ಈ ಬಾರಿ ಈಡೇರುವುದಿಲ್ಲ. ಅದಕ್ಕೆ ಕಾರಣ ಸುದೀಪ್‌ ನಿರ್ಧಾರ. “ನಾನು ಇನ್ನು ಮುಂದೆ ಹುಟ್ಟುಹಬ್ಬ ಆಚರಿಸುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ದುಡ್ಡನ್ನು ಬೇರೆ ಕೆಲಸಗಳಿಗೆ ಬಳಸಿ’ ಎಂದು ಕೆಲ ದಿನಗಳ ಹಿಂದೆ ಸುದೀಪ್‌ ಹೇಳಿದ್ದರು. ಅಲ್ಲಿಗೆ ಸುದೀಪ್‌ ಮನೆ ಬಳಿ ಅಭಿಮಾನಿಗಳು ಹೋದರೂ ಅಲ್ಲಿ ಸುದೀಪ್‌ ಸಿಗೋದಿಲ್ಲ ಎಂಬುದು ಕಾತರಿಯಾಗಿದೆ.

ಹಾಗಂತ ಸುದೀಪ್‌ ಹುಟ್ಟುಹಬ್ಬ ಆಚರಿಸಲು ಅವಕಾಶವಿಲ್ಲವೆಂದು ಅಭಿಮಾನಿಗಳು ಬೇಸರಿಸಿಕೊಳ್ಳಬೇಕಿಲ್ಲ. ಏಕೆಂದರೆ, ಸುದೀಪ್‌ ಅವರ ಮೂರು ಸಿನಿಮಾಗಳಿಂದ ಅಭಿಮಾನಿಗಳಿ ಭರ್ಜರಿ ಗಿಫ್ಟ್ ಸಿಗಲಿದೆ. ಹೌದು, ಸುದೀಪ್‌ ಅವರು ನಟಿಸಿರುವ ಹಾಗೂ ನಟಿಸಲಿರುವ ಮೂರು ಸಿನಿಮಾಗಳ ಟೀಸರ್‌, ಮೋಶನ್‌ ಪೋಸ್ಟರ್‌ ಹಾಗೂ ಫ‌ಸ್ಟ್‌ಲುಕ್‌ ರಿಲೀಸ್‌ ಆಗಲಿವೆ. ಈಗಾಗಲೇ ಸುದೀಪ್‌ “ದಿ ವಿಲನ್‌’ ಚಿತ್ರದಲ್ಲಿ ನಟಿಸಿದ್ದು, “ವಿಲನ್‌’ ತಂಡ ಸುದೀಪ್‌ ಬರ್ತ್‌ಡೇಗೆ ಮೋಶನ್‌ ಪೋಸ್ಟರ್‌ವೊಂದನ್ನು ಉಡುಗೊರೆಯಾಗಿ ಬಿಡುಗಡೆ ಮಾಡಲಿದೆ.

ಮಧ್ಯರಾತ್ರಿ 12 ಗಂಟೆಗೆ ಈ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಲಿದ್ದು, ಈ ಮೂಲಕ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು, ಸುದೀಪ್‌ ಅವರು “ರಾಜು ಕನ್ನಡ ಮೀಡಿಯಂ’ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಸುದೀಪ್‌ ನಟಿಸಿದ್ದು, ಸಖತ್‌ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಂಡಿರೋದು ನಿಮಗೆ ಗೊತ್ತೇ ಇದೆ. ಸುದೀಪ್‌ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಟೀಸರ್‌ವೊಂದನ್ನು “ರಾಜು ಕನ್ನಡ ಮೀಡಿಯಂ’ ತಂಡ ಬಿಡುಗಡೆ ಮಾಡಲಿದೆ.

ಇದು ಎರಡು ಸಿನಿಮಾಗಳ ವಿಷಯವಾದರೆ, “ಹೆಬ್ಬುಲಿ’ ನಂತರ ಮತ್ತೆ ಸುದೀಪ್‌ ಸಿನಿಮಾ ಮಾಡುತ್ತಿರುವ ನಿರ್ದೇಶಕ ಕೃಷ್ಣ ಅಂದು ತಮ್ಮ ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಲಿದ್ದಾರೆ. ಈಗಾಗಲೇ ಬ್ಯಾಂಕಾಕ್‌ನಲ್ಲಿ ಫೋಟೋಶೂಟ್‌ ಆಗಿದ್ದು, ಬಾಕ್ಸಿಂಗ್‌ ಸುತ್ತ ಈ ಚಿತ್ರ ಮಾಡುತ್ತಿದ್ದಾರೆ ಕೃಷ್ಣ.  ಹೀಗೆ ಒಂದೇ ದಿನ ಸುದೀಪ್‌ ಅವರ ಮೂರು ಸಿನಿಮಾಗಳ ವಿಭಿನ್ನ ಗೆಟಪ್‌ಗ್ಳನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ. ಹಾಗಾಗಿ, ಹುಟ್ಟುಹಬ್ಬ ದಿನ ದಿನ ಸುದೀಪ್‌ ಮನೆ ಬಳ ಸಿಗದೇ ಹೋದರೂ ಅವರ ಸಿನಿಮಾಗಳ ಅಪ್‌ಡೇಟ್‌ ಅಭಿಮಾನಿಗಳಿಗೆ ಸಿಗಲಿದೆ. 

ಟಾಪ್ ನ್ಯೂಸ್

14

Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ

JDS

ಇಂದು ಜೆಡಿಎಸ್‌ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು

Ashok-1

Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್‌.ಅಶೋಕ್‌

Milk Price: ರೈತರಿಂದ ಖರೀದಿಸುವ ಹಾಲಿದ ದರ ಜೂನ್‌ಗೆ ಏರಿಕೆ; ಸಚಿವ

Milk Price: ರೈತರಿಂದ ಖರೀದಿಸುವ ಹಾಲಿನ ದರ ಜೂನ್‌ಗೆ ಏರಿಕೆ: ಪಶುಸಂಗೋಪನೆ ಸಚಿವ

1-elon

Neuralink; ಮತ್ತೊಬ್ಬನ ಮೆದುಳಿಗೆ ಚಿಪ್‌ : ಏನಿದು ತಂತ್ರಜ್ಞಾನ?

BGV-Gandhi-bharatha

Congress Session: ಬೆಳಗಾವಿ ರ‍್ಯಾಲಿ ಯಶಸ್ಸಿಗೆ 56 ಶಾಸಕರಿಗೆ ಜವಾಬ್ದಾರಿ

kejriwal 2

AAP ಅಬಕಾರಿ ನೀತಿಯಿಂದ ದಿಲ್ಲಿಗೆ 2026 ಕೋಟಿ ನಷ್ಟ: ಸಿಎಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ನಟ ದರ್ಶನ್‌ ಮೈಸೂರಿಗೆ ಇಂದು ಆಗಮನ

Actor Darshan: ಇಂದು ನಟ ದರ್ಶನ್‌ ಮೈಸೂರಿಗೆ ಆಗಮನ

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

Chandan Shetty: ಕಾಟನ್‌ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು

allu arjun

Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ

venkatesaya namaha kannada movie

Venkatesaya Namaha: ವೆಂಕಟೇಶನ ನಂಬಿ ಬಂದವರು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ

Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ

14

Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ

JDS

ಇಂದು ಜೆಡಿಎಸ್‌ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು

Ashok-1

Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್‌.ಅಶೋಕ್‌

Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.