ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!
Team Udayavani, Mar 4, 2021, 10:04 AM IST
ಎರಡು ತಿಂಗಳು ಕಳೆದೇ ಹೋಗಿದೆ. ಈ ಎರಡು ತಿಂಗಳಲ್ಲಿ ನಿಧಾನವಾಗಿ ಕನ್ನಡ ಚಿತ್ರರಂಗ ಕೂಡಾ ಸಹಜ ಸ್ಥಿತಿಗೆ ಮರಳಿದೆ. ಈ ವರ್ಷ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಕರೆಸಿದ ಖ್ಯಾತಿ “ಪೊಗರು’ ಚಿತ್ರಕ್ಕೆ ಸಲ್ಲುತ್ತದೆ. ಎಲ್ಲಾ ಓಕೆ, ಈ ಎರಡು ತಿಂಗಳಲ್ಲಿ ಎಷ್ಟು ಸಿನಿಮಾಗಳು ತೆರೆಕಂಡಿರಬಹುದು ಎಂಬ ಕುತೂಹಲ ಸಹಜ. ಏಕೆಂದರೆ ಈಗಷ್ಟೇ ಚೇತರಿಕೆಯ ಹಾದಿಯಲ್ಲಿರುವ ಚಿತ್ರರಂಗದಲ್ಲಿ ಯಾರೆಲ್ಲಾ ಸಿನಿಮಾ ಬಿಡುಗಡೆ ಮಾಡುವ ಧೈರ್ಯ ಮಾಡಿದ್ದಾರೆಂಬುದು ಕೂಡಾ ಮುಖ್ಯವಾಗುತ್ತದೆ.
ಜನವರಿ ಹಾಗೂ ಫೆಬ್ರವರಿಯಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಲೆಕ್ಕ ಹಾಕಿ ಹೇಳ್ಳೋದಾದರೆ 30 ಸಿನಿಮಾಗಳು. ಹೌದು, ಇಲ್ಲಿವರೆಗೆ ಈ ವರ್ಷ ಬಿಡುಗಡೆಯಾಗಿರೋದು 30 ಸಿನಿಮಾಗಳು. ಜನವರಿಯಲ್ಲಿ 12 ಹಾಗೂ ಫೆಬ್ರವರಿಯಲ್ಲಿ 18 ಸಿನಿಮಾಗಳು ತೆರೆಕಂಡಿವೆ.
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಜನವರಿಗಿಂತ ಫೆಬ್ರವರಿಯಲ್ಲಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗಿವೆ. ಇದು ಚಿತ್ರರಂಗ ಚೇತರಿಕೆಯ ಹಾದಿಯಲ್ಲಿರೋದನ್ನು ತೋರಿಸುತ್ತದೆ.
ಇದನ್ನೂ ಓದಿ:ರಾಜಕೀಯ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್ : ತಮಿಳುನಾಡು ರಾಜಕೀಯದಲ್ಲಿ ಬಿಗ್ ಟ್ವಿಸ್ಟ್
ಆದರೆ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಕಡಿಮೆಯೇ. ಕಳೆದ ಆರಂಭದ ಎರಡು ತಿಂಗಳಲ್ಲಿ (ಜನವರಿ-ಫೆಬ್ರವರಿ) ಬರೋಬ್ಬರಿ 51 ಸಿನಿಮಾಗಳು ತೆರೆಕಂಡಿದ್ದವು. ಈ ವರ್ಷ ಅದರ ದುಪ್ಪಟ್ಟಾಗುವ ನಿರೀಕ್ಷೆ ಇತ್ತು. ಆದರೆ, ಕೊರೊನಾದಿಂದಾಗಿ ಸಿನಿಮಾಗಳು ತಮ್ಮ ಬಿಡುಗಡೆ ಯನ್ನು ಮುಂದಕ್ಕೆ ಹಾಕಿವೆ. ಇದು ಒಂದು ಕಾರಣವಾದರೆ ಸ್ಟಾರ್ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿ ದ್ದರಿಂದ ಒಂದಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯ ಲೆಕ್ಕಾಚಾರದಲ್ಲೇ ತೊಡಗಿವೆ.
ಈ ವಾರ ಮೂರು
ಕಳೆದ ವಾರ ಬರೋಬ್ಬರಿ ಎಂಟು ಚಿತ್ರಗಳು ತೆರಕಂಡಿದ್ದವು. ಆದರೆ, ಈ ವಾರ ಕೇವಲ ಮೂರು ಚಿತ್ರಗಳಷ್ಟೇ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ರಿಷಭ್ ಶೆಟ್ಟಿ ಅಭಿನಯದ “ಹೀರೋ’ ಜೊತೆಗೆ ಹೊಸಬರ “ರಕ್ತ ಗುಲಾಬಿ’ ಹಾಗೂ “ಧೀರಂ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಮುಂದಿನ ವಾರ ಮತ್ತೆ ಬಿಡುಗಡೆಯಲ್ಲಿ ಕುಸಿತ ಕಾಣಲಿದೆ. ಅದಕ್ಕೆ ಕಾರಣ “ರಾಬರ್ಟ್’. ದರ್ಶನ್ ಅವರ “ರಾಬರ್ಟ್’ ಚಿತ್ರ ತೆರೆ ಕಾಣುತ್ತಿದ್ದು, ಆ ಚಿತ್ರದ ಮುಂದೆ ಬೇರೆ ಯಾವ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.