3000 ಹಾರರ್ ಸಿನಿಮಾ
Team Udayavani, Aug 28, 2017, 10:44 AM IST
ಕನ್ನಡದಲ್ಲಿ ಹಾರರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅವುಗಳ ಸಾಲಿಗೆ ಈಗ “3000′ ಎಂಬ ಸಿನಿಮಾವೂ ಒಂದು. ಇದು ಹೇಳಿ ಕೇಳಿ ಹೊಸಬರ ಚಿತ್ರ. ಬಹುತೇಕ ಹೊಸಬರೇ ಹಾರರ್ ಸಿನಿಮಾಗಳ ಹಿಂದೆ ಬಂದು ಗೆಲುವು ಕಂಡಿದ್ದೂ ಉಂಟು. ಈಗ ಅಂಥದ್ದೇ ಒಂದು ತಂಡ, ಹಾರರ್ ಸಿನಿಮಾ ಹಿಂದೆ ನಿಂತಿದೆ. “3000′ ಸಿನಿಮಾ ಮೂಲಕ ಕೀರ್ತಿ ಎಂಬ ಹೊಸ ಪ್ರತಿಭೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರಾಗುತ್ತಿದ್ದಾರೆ.
ಪ್ರಸಾದ್ ಎಂಬ ಹೊಸ ಪ್ರತಿಭೆ ಕೂಡ ಈ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಇಲ್ಲಿ ನಿರ್ದೇಶಕ ಕೀರ್ತಿ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊದಲೇ ಹೇಳಿದಂತೆ ಇದೊಂದು ಹಾರರ್ ಫೀಲ್ ಇರುವ ಸಿನಿಮಾ. ಗೆಳೆಯರೆಲ್ಲರೂ ಪ್ರವಾಸಕ್ಕೆ ಹೊರಟಾಗ, ಒಂದು ಘಟನೆ ಎದುರಾಗುತ್ತದೆ. ಅಲ್ಲಿ ವಿಚಿತ್ರ ಅನುಭವಗಳು ಆಗುತ್ತವೆ. ಆ ಕೆಟ್ಟ ಶಕ್ತಿಗಳಿಂದ ಅವರೆಲ್ಲರೂ ಹೇಗೆ ಹೊರಬರುತ್ತಾರೆ ಅನ್ನೋದು “3000′ ಕಥೆ.
ಇಲ್ಲಿ ಚಿತ್ರಕ್ಕೆ “3000′ ಎಂದು ನಾಮಕರಣ ಮಾಡುವುದಕ್ಕೂ ಕಾರಣವಿದೆ. ಅದಕ್ಕೊಂದು ವಿಶೇಷತೆಯೂ ಇದೆ. ಅದನ್ನು ತಿಳಿದುಕೊಳ್ಳಬೇಕಾದರೆ, ಸಿನಿಮಾ ಬರುವವರೆಗೂ ಕಾಯಬೇಕು ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ಪ್ರಸಾದ್, ಕೀರ್ತಿ ಜತೆಯಲ್ಲಿ ಪ್ರಮುಖವಾಗಿ ಫಾದರ್ ಪಾತ್ರವೂ ಇದೆ. ಆ ಪಾತ್ರದಲ್ಲಿ ಸುಹಾನ್ ಎಂಬ ಹೊಸ ಪ್ರತಿಭೆ ನಟಿಸಿದ್ದಾರೆ. ಇವರೊಂದಿಗೆ ಸ್ವಾತಿ, ಉಜಾಲ, ಕಾವ್ಯಾ ಸೇರಿದಂತೆ ಇತರರು ಅಭಿನಯಿಸಿದ್ದಾರೆ. ಇನ್ನು, ಬಹುತೇಕ ಹೊಸತಂಡವನ್ನು ಕಟ್ಟಿಕೊಂಡು ಹಾರರ್ ಚಿತ್ರಕ್ಕೆ ಹಣ ಹಾಕುವ ಮೂಲಕ ನಿರ್ಮಾಪಕರಾಗಿರೋದು, ಶಂಕರ್.
ತಮ್ಮ ಶಂಕರ್ ಅಸೋಸಿಯೇಟ್ಸ್ ಬ್ಯಾನರ್‌ನಲ್ಲಿ “3000′ ಚಿತ್ರ ನಿರ್ಮಿಸಿದ್ದಾರೆ. ಅಲೆನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮನು ಕ್ಯಾಮೆರಾ ಹಿಡಿದಿದ್ದಾರೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ. ಎರಡನೇ ಹಂತದ ಚಿತ್ರೀಕರಣ ಕನಕಪುರದಲ್ಲಿ ಹಾಕಲಾಗಿರುವ ಸೆಟ್‌ನಲ್ಲಿ ನಡೆಯಲಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಂತೂ ಹೊಸಬರ ತಂಡವೊಂದು ಹಾರರ್ ಚಿತ್ರದ ಹಿಂದೆ ನಿಂತು, ಗೆಲುವಿನ ನಿರೀಕ್ಷೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.