ಸುಧಾರಾಣಿ ಸಿನಿಪಯಣಕ್ಕೆ 35ರ ಸಂಭ್ರಮ
Team Udayavani, Feb 22, 2021, 2:23 PM IST
ನಟಿ ಸುಧಾರಾಣಿ ಪುತ್ರಿ ಕನ್ನಡ ಚಿತ್ರದಲ್ಲಿ ನಟಿಸುತ್ತಾರೆ, ಶೀಘ್ರವೇ ಲಾಂಚ್ ಆಗಲಿದ್ದಾರೆ ಎಂಬ ಸುದ್ದಿ ಆಗಾಗ ಕೇಳಿಬರುತ್ತಲೇ ಇದೆ. ಆದರೆ, ಇದು ವರೆಗೆ ಅವರು ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ. ಹಾಗಾದರೆ, ಚಿತ್ರರಂಗಕ್ಕೆ ಸುಧಾರಾಣಿ ಪುತ್ರಿ ಬರಲ್ವಾ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಗೆ ಸ್ವತಃ ಸುಧಾರಾಣಿಯವರೇ ಉತ್ತರಿಸಿದ್ದಾರೆ.
“ಅವಳಿಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಹಾಗಂತ ಇನ್ನೂ ಚಿತ್ರರಂಗಕ್ಕೆ ಬರುವ ಬಗ್ಗೆ ನಿರ್ಧರಿಸಿಲ್ಲ. ಏಕೆಂದರೆ ಆ ನಿರ್ಧಾರ ಅವಳದು. ಆಕೆ ನಿರ್ಧಾರ ತೆಗೆದುಕೊಳ್ಳುವಷ್ಟು ಬೆಳೆದಿದ್ದಾಳೆ. ಸದ್ಯ ಆಕೆ ಲಾ ಓದುತ್ತಿದ್ದಾಳೆ. ನಟನೆ ಅನ್ನೋದು ಅವರವರ ಆಸಕ್ತಿ. ಆ ಮೂಲಕವೇ ಬರಬೇಕೇ ಹೊರತು ಯಾರಧ್ದೋ ಒತ್ತಾಯಕ್ಕೆ ಬರೋಕ್ಕಾಗಲ್ಲ. ಮುಂದೆ ಅವಳಿಗೆ ಸಿನಿಮಾ ಆಸಕ್ತಿ ಬಂದು ಬರುವುದಾದರೆ ನನ್ನ ಅಭ್ಯಂತರವಿಲ್ಲ’ ಎನ್ನುತ್ತಾರೆ.
ಸಿನಿಪಯಣಕ್ಕೆ 35
ಇನ್ನು, ಸುಧಾರಾಣಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 35 ವರ್ಷವಾಗಿದೆ. ಶಿವರಾಜ್‌ಕುಮಾರ್ ಅವರ “ಆನಂದ್’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ಸುಧಾರಾಣಿ ಆ ನಂತರ ಬೇಡಿಕೆಯ ನಟಿಯಾಗಿ ವಿವಿಧ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದಾರೆ.
ಈ ಜರ್ನಿಯ ಬಗ್ಗೆ ಮಾತನಾಡುವ ಅವರು, “ಇದೊಂದು ಸುಂದರವಾದ ಪಯಣ. ಸಾಕಷ್ಟು ಪ್ಲಸ್-ಮೈನಸ್‌ನೊಂದಿಗೆ ಸಾಗಿದೆ. ಪರಭಾಷೆಯಿಂದ ಅವಕಾಶ ಸಿಕ್ಕರೂ ನನಗೆ ತುಂಬಾ ತೃಪ್ತಿ ಕೊಟ್ಟಿದ್ದು ನಮ್ಮ ಕನ್ನಡ ಚಿತ್ರರಂಗ. ನನಗೆ ಪರಭಾಷೆಗಳಲ್ಲಿ ಕೇವಲ ರೊಮ್ಯಾಂಟಿಕ್, ಗ್ಲಾಮರಸ್ ಹೀರೋಯಿನ್ ಆಗಿರಲು ಇಷ್ಟವಿರಲಿಲ್ಲ. ಕನ್ನಡದಲ್ಲಿ ನನಗೆ ವಿಭಿನ್ನ ಪಾತ್ರಗಳನ್ನು ಮಾಡಿದ್ದೇನೆ. ಮಾಡಿದ್ದೇನೆ ಅನ್ನೋದಕ್ಕಿಂತ ನನ್ನ ಮೇಲೆ ನಂಬಿಕೆ ಇಟ್ಟು ಮಾಡಿಸಿದ್ದಾರೆ ಎನ್ನಬಹುದು.
ಇದನ್ನೂ ಓದಿ:65ರ ಹರೆಯದಲ್ಲೂ ಕಟ್ಟುಮಸ್ತಾದ ದೇಹ… ‘still I Am Fit’ ಎಂದ ಈ ಹಿರಿಯ ನಟ ಯಾರು ?
ಒಂದರ್ಥ ದಲ್ಲಿ ಚಿತ್ರರಂಗ ನನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡು ಬಂದಿದೆ. ಈಗಲೂ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಅಲ್ಲಿ ನಮ್ಮ ಪಾತ್ರಕ್ಕೊಂದು ಪ್ರಾಮುಖ್ಯತೆ, ಅರ್ಥವಿರಬೇಕು. ಅದು ಒಂದೇ ದೃಶ್ಯವಾದರೂ ಸರಿ, ಒಪ್ಪಿಕೊಂಡ ನಂತರ ಕೆಲಸವಿರಬೇಕು. ಆ ತರಹದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಕಮರ್ಷಿಯಲ್ ದೃಷ್ಟಿಗಿಂತ ಹೆಚ್ಚಾಗಿ ಸಿನಿಮಾವನ್ನು ಪ್ಯಾಶನ್‌ನಿಂದ ಒಪ್ಪಿಕೊಳ್ಳುತ್ತಿದ್ದೇನೆ’ ಎನ್ನುವುದು ಸುಧಾರಾಣಿ ಮಾತು.
ಸದ್ಯ ಸುಧಾರಾಣಿ “ಬೆಳಕು’ ಎಂಬ ಸಿನಿಮಾ ಒಪ್ಪಿಕೊಂಡಿದ್ದು, ರಾಘವೇಂದ್ರ ರಾಜ್‌ಕುಮಾರ್ ಕಾಂಬಿನೇಶನ್‌ನಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್ 2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.