ಪಂಚಭಾಷೆಗಳಲ್ಲಿ 666
Team Udayavani, Oct 11, 2022, 7:05 PM IST
ಕನ್ನಡದಲ್ಲಿ ನಿಧಾನವಾಗಿ ವೆಬ್ ಸಿರೀಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ವೆಬ್ ಸಿರೀಸ್ “666′.
ಕನ್ನಡದಲ್ಲಿ ಈಗಾಗಲೇ “ಡೋಂಟ್ ವಿಸ್ಪರ್’, “ನಿಹಾರಿಕ’ ಸೇರಿದಂತೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡಿರುವ ರಂಗಸ್ವಾಮಿ ಮೊದಲ ಬಾರಿಗೆ “666′ ವೆಬ್ ಸಿರೀಸ್ ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.
ಈಗಾಗಲೇ “666′ ವೆಬ್ ಸಿರೀಸ್‌ನ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚಿಗೆ ತಂಡ “666′ ವೆಬ್ ಸಿರೀಸ್‌ನ ಮೋಷನ್ ಟೀಸರ್ ಬಿಡುಗಡೆ ಮಾಡಿದೆ. ಕೋಡೆಕ್ಸ್ ಗಿಗಾಸ್ ಆಧರಿಸಿದ ಕಥೆ “666′ ವೆಬ್ ಸಿರೀಸ್‌ನಲ್ಲಿದ್ದು, ಹಾರಾರ್-ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ಬರಲಿದೆ. ಒಟ್ಟು ಏಳು ಎಪಿಸೋಡ್‌ಗಳಲ್ಲಿ ಮತ್ತು ಐಧು ಭಾಷೆಗಳಲ್ಲಿ “666′ ವೆಬ್ ಸಿರೀಸ್ ನಿರ್ಮಾಣವಾಗಿದೆ. ದರ್ಶಿನಿ ಒಡೆಯರ್, ಶಿವಾನಿ, ಗಣೇಶ್ ನಾಯಕ್, ಕೀರ್ತಿ, ಮಂಜುನಾಥ್, ವಿವೇಕ್ ವೀಣಾ ಮೊದಲಾದವರು “666′ ವೆಬ್ ಸಿರೀಸ್‌ನ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಸಿನಿಮಾ ರಂಗ’ ಬ್ಯಾನರ್‌ನಡಿ ನಿರ್ಮಾಣವಾಗಿರು “666′ ವೆಬ್ ಸಿರೀಸ್‌ಗೆ ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದು, ಅರುಣ್ ಭಾಗವತ್ ಛಾಯಾಗ್ರಹಣ ಹಾಗೂ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.