‘800’ First Look ಬಿಡುಗಡೆ: “ಸೇತುಪತಿ” ಲುಕ್‌ಗೆ ಸಿನಿ ಪ್ರಿಯರು ಫಿದಾ
Team Udayavani, Oct 13, 2020, 10:18 PM IST
ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಶ್ರೀಲಂಕನ್ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಚಿತ್ರ “800’ಗೆ ಬಣ್ಣ ಹಚ್ಚಲಿದ್ದು , ಅದರ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡಗಡೆ ಮಾಡಿದೆ. ಲೆಂಜೆಡರಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನದ ಒಂದು ಮಿನುಗು ನೋಟವನ್ನು ಈ ಪೋಸ್ಟರ್ ಮೂಲಕ ಕಾಣಬಹುದು. ಟೆಸ್ಟ್ ಕ್ರಿಕೆಟ್‌ನ ಬಿಳಿ ಉಡುಪಿನಲ್ಲಿರುವ ವಿಜಯ್ ಸೇತುಪತಿ ಮುತ್ತಯ್ಯ ಅವರ ತದ್ರೂಪದಂತಿದ್ದಾರೆ. ಮುರಳಿಧರನ್ ಅವರ ಬಯೋಪಿಕ್‌ಗಾಗಿ ತಮ್ಮ ಚಹರೆಯನ್ನು ಬದಲಿಸಿಕೊಂಡಿರುವ ಸೇತುಪತಿ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ.
ನಿರ್ದೇಶಕ ಶ್ರೀಪತಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀಲಂಕಾದ ಕ್ರಿಕೇಟ್ ತಂಡದ ಲೆಂಜೆಂಡರಿ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಜೀವನ, ಅವರು ಪಟ್ಟ ಶ್ರಮವನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ.
ಮುತ್ತಯ್ಯ ಮುರಳೀಧರನ್ ಮತ್ತು ವಿಜಯ್ ಸೇತುಪತಿ ಅವರು ಇಂದು ಸ್ಟಾರ್ ನ್ಪೋರ್ಟ್ಸ್ 1 ಮತ್ತು ಸ್ಟಾರ್ ನ್ಪೋರ್ಟ್ಸ್ 1 ತಮಿಳ್‌ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ ಹೈದರಾಬಾದ್ ತಂಡಗಳ ಹಣಾಹಣಿಗೂ ಮೊದಲು ಇದನ್ನು ಬಿಡುಗಡೆ ಮಾಡಲಾಯಿತು.
“ಸ್ಕ್ರಿಪ್ಟ್ ತಯಾರದ ಬಳಿಕ ವಿಜಯ ಸೇತುಪತಿ ಅವರನ್ನು ಹೊರತು ಪಡಿಸಿ ಬೆರಾರು ಈ ಪಾತ್ರಕ್ಕೆ ಹೊಂದಾಣಿಕೆ ಆಗಲಿಕ್ಕಿಲ್ಲ ಎಂದು ಭಾವಿಸಿದ್ದೇನೆ. ಸೇತುಪತಿ ಅವರು ಓರ್ವ ಪ್ರತಿಭಾವಂತ ನಟ. ಬೌಲಿಂಗ್ ಮಾಡುವ ರೀತಿಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ವಿಜಯ್ ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ಖಂಡಿತವಾಗಿ ಪಾತ್ರಕ್ಕೆ ಜೀವ ತುಂಬಬಲ್ಲರು ಎಂಬ ನಂಬಿಕೆ ನನ್ನಲ್ಲಿದೆ’ ಎಂದು ಮುತ್ತಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸೇತುಪತಿ ಅಭಿಪ್ರಾಯ ಹಂಚಿಕೊಂಡಿದ್ದು, “ಮುರಳೀಧರನ್ ಅವರ ಕಥೆ ಎಲ್ಲರೂ ತಿಳಿದುಕೊಳ್ಳಬೇಕಾದ ಕಥೆಯಾಗಿದೆ. ಅವರೊಂದಿಗೆ ಸಮಯ ಕಳೆಯಲು ಮತ್ತು ಅವರ ಕಥೆ ಕೇಳಲು ತುಂಬಾ ಸಂತೋಷವಾಗುತ್ತದೆ. ಮುತ್ತಯ್ಯ ಅವರು ಎಲ್ಲಿಯೇ ಹೋದರು ಅವರ ಆಕರ್ಷಕ ವ್ಯಕ್ತಿತ್ವ ಅವರನ್ನು ಗುರುತಿಸುವಂತೆ ಮಾಡುತ್ತದೆ. ಅವರ ನಿಜ ಜೀವನವನ್ನು ನಾನು ತುಂಬ ಇಷ್ಟಪಡುತ್ತೇನೆ. ಹೆಚ್ಚಿನ ಜನ ಮೈದಾನದಲ್ಲಿ ಅವರ ಆಟವನ್ನು ಮಾತ್ರ ನೋಡಿದ್ದು, ಕೆಲವೇ ಜನರಿಗೆ ಮಾತ್ರ ಮೈದಾನದ ಹೊರಗೆ ಅವರ ವ್ಯಕ್ತಿತ್ವ ದರ್ಶನವಾಗಿದೆ. ಅವರೋಬ್ಬ ಹೃದಯವಂತ. ಅವರ ಸುಂದರ ವ್ಯಕ್ತಿತ್ವ ಮತ್ತು ಜೀವನಗಾಥೆಯನ್ನು ಎಲ್ಲರಿಗೂ ತಿಳಿಸಬೇಕಾದದಂಥದ್ದು’ ಎಂದಿದ್ದಾರೆ.
ಚಿತ್ರದ ಪ್ರಮುಖ ದೃಶ್ಯಗಳನ್ನು ಶ್ರೀಲಂಕಾ, ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ. 2021ರಿಂದ ಚಿತ್ರೀಕರಣ ಆರಂಭವಾಗಲಿದ್ದು, 2021ರ ಕೊನೆಗೆ ಚಿತ್ರ ತೆರ ಕಾಣುವ ನಿರೀಕ್ಷೆ ಇದೆ. ಸ್ಯಾಮ್ ಸಿಎಸ್ ಅವರ ಸಂಗೀತ ಸಂಯೋಜನೆ ಇರಲಿದೆ. ಮಲಯಾಳದ ನಟಿ ರಜಿಶಾ ವಿಜಯನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಚಿತ್ರ ಹಿಂದಿ, ಬೆಂಗಾಲಿ, ಸಿಂಹಳಿಯ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳಿಗೆ ಡಬ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.