ಜಗ್ಗೇಶ್ ಅಭಿಮಾನಿಗಳಿಗೆ ರಾಜ್ಯೋತ್ಸವ ಕೊಡುಗೆ
Team Udayavani, Nov 1, 2018, 3:47 PM IST
ಕನ್ನಡ ಅಂದರೆ ನಟ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ ಈ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ನಾಡು, ನುಡಿ, ನೆಲ, ಜಲ ಭಾಷೆ ವಿಷಯಕ್ಕೆ ಬಂದರೆ ಜಗ್ಗೇಶ್ ಸದಾ ಮುಂದು. ಅವರೀಗ ಡಬ್ಬಲ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ, ಅವರು ಅಭಿನಯಿಸಿರುವ “8ಎಂಎಂ’ ಚಿತ್ರ ನವೆಂಬರ್ 16 ರಂದು ಬಿಡುಗಡೆಯಾಗುತ್ತಿರುವ ಸಂತಸ ಒಂದು ಕಡೆ. ಕನ್ನಡ ರಾಜ್ಯೋತ್ಸವ ಆಚರಣೆಯ ತಿಂಗಳಲ್ಲೇ ಬಿಡುಗಡೆಯಾಗುತ್ತಿದೆ ಎಂಬುದು ಇನ್ನೊಂದು ಖುಷಿ. ಹಾಗಾಗಿ, ಕನ್ನಡ ರಾಜ್ಯೋತ್ಸವಕ್ಕೆ ಜಗ್ಗೇಶ್ ಅವರ “8 ಎಂಎಂ’ ಚಿತ್ರ ಅವರ ಅಭಿಮಾನಿಗಳಿಗೆ ಕೊಡುಗೆಯಾಗಲಿದೆ ಎಂಬುದು ಕೂಡ ಚಿತ್ರತಂಡದ ಹೆಮ್ಮೆ.
ವೈಯಕ್ತಿಕವಾಗಿ ಜಗ್ಗೇಶ್ ಅವರಿಗೆ “8 ಎಂಎಂ’ ಮೇಲೆ ಹೆಚ್ಚು ನಿರೀಕ್ಷೆ. ಕಾರಣ, ಇದುವರೆಗೆ ಅವರು ಕಾಣಿಸಿಕೊಳ್ಳದ ಪಾತ್ರದಲ್ಲಿ ನಟಿಸಿದ್ದಾರೆ. ಕಥೆಯಾಗಲಿ, ಮೇಕಿಂಗ್ ವಿಚಾರದಲ್ಲಾಗಲಿ ಅವರ ಗೆಟಪ್ ಆಗಲಿ ವಿಭಿನ್ನವಾಗಿದೆ ಎಂಬುದು ವಿಶೇಷ. “8 ಎಂಎಂ’ ಅವರಿಗೆ ಇನ್ನೊಂದು
ಹೊಸ ಇಮೇಜ್ ಕೊಡುವಂತಹ ಚಿತ್ರ ಎಂಬ ಖುಷಿಯೂ ಅವರಲ್ಲಿದೆ.
ಅದಕ್ಕೆ ಕಾರಣ, ಈಗಾಗಲೇ ಅವರ ಪತ್ನಿ ಪರಿಮಳ ಅವರು ಜಗ್ಗೇಶ್ ಅವರ ಭಾಗದ ಕೆಲ ದೃಶ್ಯಗಳನ್ನು ನೋಡಿ ಕಣ್ತುಂಬಿಕೊಂಡಿರುವುದು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ. ಜಗ್ಗೇಶ್ ಈವರೆಗೆ ಸುಮಾರು 130 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯದ ಬಗ್ಗೆ ಯಾರೂ
ಮಾತಾಡುವಂತಿಲ್ಲ. ಆದರೆ, ಅವರ ಪತ್ನಿ ಪರಿಮಳ ಅವರಿಗೆ ಮಾತ್ರ ಅದೇಕೋ “8 ಎಂಎಂ’ ಚಿತ್ರದ ಪಾತ್ರ ತುಂಬಾನೇ ಹಿಡಿಸಿಬಿಟ್ಟಿದೆ.
ಅಂದಹಾಗೆ, ಜಗ್ಗೇಶ್ ಈ ಚಿತ್ರದಲ್ಲಿ ಒಬ್ಬ ನೊಂದ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಕಾಲದಲ್ಲಿ ಹಣವಿಲ್ಲದಾಗ ಏನೆಲ್ಲಾ ಪರಿಸ್ಥಿತಿಯನ್ನ ಅವರು ಎದುರಿಸುತ್ತಾರೆ ಎಂಬುದೇ ಕಥೆ. ಜಗ್ಗೇಶ್ ಅಂದಾಕ್ಷಣ ಹಾಸ್ಯ ನೆನಪಾಗುತ್ತೆ. ಆದರೆ, ಈ ಚಿತ್ರ ನೋಡಿದವರಿಗೆ ಜಗ್ಗೇಶ್ ಬೇರೆ ರೀತಿ ಕಾಣುತ್ತಾರೆ.
ನಿರ್ದೇಶಕ ಹರಿಕೃಷ್ಣ ಅವರು ಜಗ್ಗೇಶ್ ಅವರನ್ನಿಲ್ಲಿ ಹೊಸದಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾದರೆ ಜಗ್ಗೇಶ್ ಅವರ ಗೆಟಪ್ ಮತ್ತು ಕೆಲ ಪೋಸ್ಟರ್ ನೋಡಿದರೆ, ಅವರಿಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ. ಆ ಪಾತ್ರಕ್ಕೆ ಸ್ವಲ್ಪ ನೆಗೆಟಿವ್ ಶೇಡ್ ಕೂಡ ಇದೆ. ಆದರೆ, ಅದು ಹೇಗಿರುತ್ತೆ ಎಂಬುದನ್ನು ಚಿತ್ರದಲ್ಲೇ ಕಾಣಬೇಕೆಂಬುದು ಚಿತ್ರತಂಡದ ಮಾತು. ಅಂದಹಾಗೆ, ಈ ಚಿತ್ರದಲ್ಲಿ ವಸಿಷ್ಠ ಸಿಂಹ, ರಾಕ್‌ಲೈನ್ ವೆಂಕಟೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಕಾಂಬಿನೇಷನ್‌ನಲ್ಲಿ ಜಗ್ಗೇಶ್ ಕೂಡ ಇದ್ದಾರೆ.
ಅಲ್ಲಿಗೆ ಇಡೀ ಸಿನಿಮಾ ಹೊಸ ಬಗೆಯ ಹೂರಣ ಬಡಿಸಲಿದೆ ಎಂಬ ನಂಬಿಕೆ ಅಭಿಮಾನಿಗಳದ್ದು. ಇಲ್ಲಿ ಜಗ್ಗೇಶ್ ಅವರು ನಟನೆಯ ಜೊತೆಗೆ ಗೀತೆರಚನೆ ಕೂಡ ಮಾಡಿದ್ದಾರೆ. “ಜಗವೇ ಘೋರ’ ಎಂಬ ಹಾಡಿಗೆ ನಟ ವಸಿಷ್ಠ ಸಿಂಹ ಧ್ವನಿಯಾಗಿದ್ದಾರೆ. ಆ ಹಾಡು ಈಗಾಗಲೇ ಮೆಚ್ಚುಗೆ ಪಡೆದಿದೆ. ಚಿತ್ರಕ್ಕೆ ಮಯೂರಿ ನಾಯಕಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತವಿದೆ. ಪ್ರದೀಪ್ ಚಿತ್ರ ನಿರ್ಮಾಪಕರು. ಸಲೀಂ
ಹಾಗು ನಾರಾಯಣ್ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.