ಚಿಂದಿ ಆಯುವ ಹುಡುಗಿಯೊಬ್ಬಳ ಸಾಧನೆ ಕಥೆ
ಹೊಸಬರೇ ಸೇರಿ ಮಾಡಿದ ಪಾರು
Team Udayavani, Feb 5, 2020, 7:00 AM IST
ದಿನ ಕಳೆದಂತೆ ಮಕ್ಕಳ ಸಿನಿಮಾಗಳ ಸಂಖ್ಯೆ ಕೂಡ ಮೆಲ್ಲನೆ ಹೆಚ್ಚುತ್ತಲೇ ಹೋಗುತ್ತೆ. ಅಂತಹ ಮಕ್ಕಳ ಚಿತ್ರಗಳ ಸಾಲಿಗೆ ಈಗ “ಪಾರು’ ಎಂಬ ಸಿನಿಮಾ ಕೂಡ ಸೇರಿದೆ. ಇದು ಬಹುತೇಕ ಹೊಸಬರೇ ಸೇರಿ ಮಾಡಿದ ಚಿತ್ರ. ಈ ಚಿತ್ರದ ಮೂಲಕ ಹನ್ಮಂತ್ ಪೂಜಾರ್ ನಿರ್ದೇಶಕರಾಗಿದ್ದಾರೆ. “ಪಾರು’ ಚಿತ್ರದಲ್ಲಿ “ಬದುಕು ನಾವು ಅಂದುಕೊಂಡಂತೆ ನಡೆಯಲ್ಲ. ನಾವೇ ಅದಕ್ಕೆ ಹೊಂದಿಕೊಂಡು ಹೋಗಬೇಕು.
ಪ್ರಯತ್ನ ಪಟ್ಟರೆ, ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ’ ಎಂಬ ಒನ್‌ಲೈನ್ ಕಥೆ ಇಲ್ಲಿದೆ. ಚಿತ್ರದ ಬಾಲಕಿಯೊಬ್ಬಳು ಸಾಧನೆ ಮಾಡಬೇಕು ಅಂತ ಹೊರಟಾಗ, ಆಕೆಗೆ ಏನೆಲ್ಲಾ ಅಡೆತಡೆಗಳು ಎದುರಾಗುತ್ತವೆ. ಆ ನಂತರ, ಅದನ್ನೆಲ್ಲಾ ಮೀರಿ ಆಕೆ ಹೇಗೆ ಬೆಳೆಯುತ್ತಾಳೆ ಎಂಬುದು ಚಿತ್ರದ ಕಥೆಯ ಸಾರಾಂಶ. ಚಿಂದಿ ಆಯುವ ಬಾಲಿಯೊಬ್ಬಳು ಹೇಗೆ ವಿದ್ಯಾಭ್ಯಾಸ ಮಾಡಿ, ಉನ್ನತ ಮಟ್ಟದ ಅಧಿಕಾರಿ ಆಗುತ್ತಾಳೆ ಅನ್ನೋದೇ ಚಿತ್ರದ ಕಥಾವಸ್ತು.
ಪ್ರಸ್ತುತ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸುವ ಆಸೆ ಇಟ್ಟುಕೊಳ್ಳುತ್ತಾರೆ. ಅಂತಹ ಪೋಷಕರಿಗೆ ಇಲ್ಲೊಂದು ಸಂದೇಶವೂ ಇದೆ. ಬದುಕಿನಲ್ಲಿ ಎಲ್ಲವೂ ಮುಗಿದು ಹೋಯ್ತು ಅಂದುಕೊಳ್ಳುವ ಜನರಿಗೂ ಇಲ್ಲೊಂದು ಪ್ರೇರಣೆ ಆಗುವಂತಹ ವಿಷಯವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕೆಂಬುದು ನಿರ್ದೇಶಕ ಹನ್ಮಂತ್ ಪೂಜಾರ್ ಮಾತು.
ಬಹುತೇಕ ದಾವಣಗೆರೆ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಬೇಬಿ ಹಿತೈಷಿ ಪೂಜಾರ್, ಮಾ. ಮೈಲಾರಿ ಪೂಜಾರ್, ಮಾ.ಅಚ್ಯುತ್, ಮಾ.ಪ್ರಸಾದ್ ಹಾಗು ಪೋಷಕ ಕಲಾವಿದರಾದ ಪ್ರೇಮ್ ಕುಮಾರ್, ಶಿವಕಾರ್ತಿಕ್ ನಿಜಗುಣ ಶಿವಯೋಗಿ, ಹಾಲೇಶ್, ಮಾದಪ್ಪ, ಗುರು ನೇಸೂರ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತವಿದೆ. ಶಿವಕುಮಾರ ಸ್ವಾಮಿ ಸಂಕಲನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.