ಆ್ಯಕ್ಷನ್‌ನಿಂದ ಕಾಮಿಡಿಯತ್ತ ಸಂತೋಷದ ಪಯಣ
Team Udayavani, Apr 3, 2018, 11:42 AM IST
ಕನ್ನಡ ಚಿತ್ರರಂಗದ ಕೆಲವು ನಾಯಕರು ಒಂದು ಸಿನಿಮಾ ಮಾಡಿ, ಆ ಚಿತ್ರ ಬಿಡುಗಡೆಯಾದ ನಂತರ ಆ ನಟರು ಏನು ಮಾಡುತ್ತಿರುತ್ತಾರೆಂಬ ಸುಳಿವೇ ಇರೋದಿಲ್ಲ. ಆ ಸಾಲಿಗೆ ಸೇರುವ ನಾಯಕ ನಟರಲ್ಲಿ ಸಂತೋಷ್ ಕೂಡಾ ಒಬ್ಬರು. ಯಾವ ಸಂತೋಷ್ ಎಂದರೆ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಮಗ ಎನ್ನುವ ಜೊತೆಗೆ “ಕೆಂಪ’, “ಜನ್ಮ’, “ಗಣಪ’, “ಕರಿಯಾ-2′ ಚಿತ್ರಗಳ ನಾಯಕ ಎನ್ನಬೇಕು.
ಸಂತೋಷ್ ಕೂಡಾ ಗಾಂಧಿನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರಲ್ಲ. ತಮ್ಮ ಸಿನಿಮಾ ಬಿಡುಗಡೆಯ ಸಮಯದಲ್ಲಷ್ಟೇ ಕಾಣಿಸಿಕೊಳ್ಳುವ ಸಂತೋಷ್ ಈಗ “ಕಾಜಲ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದಿನ ನಾಲ್ಕು ಸಿನಿಮಾಗಳಲ್ಲಿ ಔಟ್ ಅಂಡ್ ಔಟ್ ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಸಂತೋಷ್ ಮೊದಲ ಬಾರಿಗೆ ಆ ಇಮೇಜ್‌ನಿಂದ ಹೊರಬರಲು ಮುಂದಾಗಿದ್ದಾರೆ. ಅದೇ ಕಾರಣದಿಂದ “ಕಾಜಲ್’ ಸಿನಿಮಾ ಮಾಡುತ್ತಿದ್ದಾರೆ.
ಇದೊಂದು ಮ್ಯೂಸಿಕಲ್ ಕಾಮಿಡಿ ಜರ್ನಿ. ಈ ಹಿಂದಿನ ಸಿನಿಮಾಗಳಲ್ಲಿ ಹೊಡೆದಾಡಿದ್ದ ಸಂತೋಷ್ ಇಲ್ಲಿ ನಗಿಸಲು ಹೊರಟಿದ್ದಾರೆ. ಯಾಕಾಗಿ ಈ ಬದಲಾವಣೆ ಎಂದು ಕೇಳಿದರೆ, ಹೊಸದೇನೋ ಮಾಡಬೇಕೆನಿಸಿತು ಎಂಬ ಉತ್ತರ ಸಂತೋಷ್‌ರಿಂದ ಬರುತ್ತದೆ. “ಸತತವಾಗಿ ಆ್ಯಕ್ಷನ್ ಸಿನಿಮಾಗಳನ್ನೇ ಮಾಡಿಕೊಂಡು ಬಂದೆ. ಈಗ ಬೇರೇನೋ ಮಾಡಬೇಕೆನಿಸಿತು. ಅದಕ್ಕಾಗಿ ಎದುರು ನೋಡುತ್ತಿದ್ದಾಗ ಸಿಕ್ಕಿದ್ದು “ಕಾಜಲ್’. ಕತೆ ತುಂಬಾ ಇಷ್ಟವಾಯಿತು.
ನನಗೂ ಈ ಪಾತ್ರ ಹೊಸದೆನಿಸಿ ಒಪ್ಪಿಕೊಂಡೆ’ ಎನ್ನುವ ಸಂತೋಷ್ ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಳ್ಳುತ್ತಿದ್ದಾರಂತೆ. ಸಂತೋಷ್ ಚಿತ್ರರಂಗಕ್ಕೆ ಬಂದು 11 ವರ್ಷವಾಗಿದೆ. ಈ 11 ವರ್ಷದಲ್ಲಿ ಅವರು ನಟಿಸಿದ್ದು ಕೇವಲ ಐದು ಸಿನಿಮಾಗಳಲ್ಲಿ. ಇಷ್ಟೊಂದು ನಿಧಾನಗತಿಯ ಪಯಣ ಯಾಕೆ ಎಂದರೆ ಅದಕ್ಕೆ ನಾನಾ ಕಾರಣಗಳಿವೆ ಎಂಬ ಉತ್ತರ ಸಂತೋಷ್‌ರಿಂದ ಬರುತ್ತದೆ.
“ಕೆಂಪ ಚಿತ್ರದಿಂದಲೇ ನನ್ನ ಪ್ರತಿಯೊಂದು ಚಿತ್ರಗಳು ಕಾರಣಾಂತರಗಳಿಂದ ತಡವಾಗುತ್ತಾ ಹೋದುವು. ಈ ಮಧ್ಯೆ ನಾನು ಕೂಡಾ ಒಂದು ಸಿನಿಮಾ ಬಿಡುಗಡೆಯಾಗಿ ಎರಡೂರು ವರ್ಷ ಗ್ಯಾಪ್ ತೆಗೆದುಕೊಂಡೆ. ಬಿಝಿನೆಸ್‌ಗಾಗಿ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದೆ. ಆ ಕಾರಣದಿಂದ ತಡವಾಯಿತು. ಮುಂದೆ ಆ ತರಹ ಆಗಲ್ಲ. ವರ್ಷಕ್ಕೆರಡು ಸಿನಿಮಾ ಮಾಡಬೇಕೆಂದಿದ್ದೇನೆ.
ಈಗಾಗಲೇ ಒಂದೆರಡು ಸಿನಿಮಾಗಳ ಮಾತುಕತೆಯಾಗಿದೆ. ಎಂ.ಡಿ.ಶ್ರೀಧರ್ ಅವರ ಜೊತೆಗೊಂದು ಸಿನಿಮಾ ಮಾಡುತ್ತೇನೆ’ ಎನ್ನುವುದು ಸಂತೋಷ್ ಮಾತು. ಬಹುತೇಕ ತಮ್ಮದೇ ಬ್ಯಾನರ್‌ನಲ್ಲಿ ನಟಿಸುತ್ತಿದ್ದ ಸಂತೋಷ್ ಮುಂದಿನ ದಿನಗಳಲ್ಲಿ ಬೇರೆ ಬ್ಯಾನರ್‌ನ ಸಿನಿಮಾಗಳಲ್ಲೂ ನಟಿಸಲಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.