ಒಂದು ಕಾಡುವ ಕಥೆ


Team Udayavani, Jul 9, 2017, 5:59 PM IST

motte.jpg

“ಆಕೆಗೆ ಬಾಯಿ ಬರುವುದಿಲ್ಲ. ಆದರೆ, ಅವಳೇ ನನ್ನ ಜೀವ. ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಕೇವಲ ಅವಳ ಒಳ್ಳೆಯ ಗುಣವನ್ನಷ್ಟೇ ಅಲ್ಲ, ಆಕೆಯ ಉದಾಸೀನ, ಸೋಮಾರಿತನ ಎಲ್ಲವನ್ನೂ …’ – ಪುಟ್ಟ ಮನೆಯಲ್ಲಿ ಕುಳಿತು ಊಟ
ಮಾಡುತ್ತಿದ್ದಾಗ ಅಟೆಂಡರ್‌ ಶ್ರೀನಿವಾಸ್‌ ತನ್ನ ಪತ್ನಿಯ ಬಗ್ಗೆ ಹೀಗೆ ಹೇಳುತ್ತಾನೆ. ಜನಾರ್ಧನನಿಗೆ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ತಟ್ಟೆಯಲ್ಲಿದ್ದ ಪಾಯಸ ಕಹಿಯಾದಂತಹ ಅನುಭವ. ಇಷ್ಟು ದಿನ ತಾನು ವರ್ತಿಸಿದ ರೀತಿಯ ಬಗ್ಗೆ ಜನಾರ್ಧನನಲ್ಲಿ ಜಿಗುಪ್ಸೆ ಮೂಡುತ್ತದೆ. ಕನ್ನಡ ಲೆಕ್ಚರರ್‌ ಜನಾರ್ಧನ ಮಂಕಾಗಿ ಮೇಲೇಳುತ್ತಾನೆ. ಚಿತ್ರಮಂದಿರಲ್ಲಿ
ಮೌನ ಆವರಿಸುತ್ತದೆ. ಕಣ್ಣಂಚಲಿ ಒಂದನಿ ಜಿನುಗಿರುತ್ತದೆ.

“ಒಂದು ಮೊಟ್ಟೆಯ ಕಥೆ’ ನಿಮಗೆ ಇಷ್ಟವಾಗುವುದೇ ಇಂತಹ ಸೂಕ್ಷ್ಮ ಸಂಗತಿಗಳಿಂದ. ಯಾವುದೇ ಅಬ್ಬರವಿಲ್ಲದೇ, “ಕಮರ್ಷಿಯಲ್‌ ಅಂಶಗಳನ್ನು’ ಸಿನಿಮಾ ತುಂಬಾ ಮೆತ್ತಿಕೊಳ್ಳದೇ ಮಾಡಿದ ಒಂದು ನೀಟಾದ ಹಾಗೂ ಅಷ್ಟೇ ಸೂಕ್ಷ್ಮವಾದ ಸಿನಿಮಾ “ಒಂದು ಮೊಟ್ಟೆಯ ಕಥೆ’. ಇಲ್ಲಿ ಕಾಮಿಡಿ ಇದೆ, ಬದುಕಿನ ವ್ಯಂಗ್ಯವಿದೆ, ತನ್ನದಲ್ಲದ ತಪ್ಪಿಗೆ ಅನುಭವಿಸುವ ಯಾತನೆ ಇದೆ, ಖುಷಿ-ದುಃಖದ ಸಮ್ಮಿಲನವಿದೆ. ಆ ಮಟ್ಟಿಗೆ “ಒಂದು ಮೊಟ್ಟೆಯ ಕಥೆ’ ತುಂಬಾ ಮೆಚೂÂರ್‌x ಸಿನಿಮಾ.

ಬೋಳು ತಲೆಯ ವ್ಯಕ್ತಿಯೊಬ್ಬ ಮದುವೆಗೆ ಹುಡುಗಿ ಹುಡುಕಲು ಹೊರಟಾಗ ಎದುರಾಗುವ ಸಮಸ್ಯೆಗಳು, ನೋವು, ಯಾತನೆ, ಅವಮಾನಗಳನ್ನಿಟ್ಟುಕೊಂಡು ಇಲ್ಲಿ ಕಥೆ ಮಾಡಲಾಗಿದೆ. ಇಡೀ ಸಿನಿಮಾ ಬೋಳು ತಲೆಯ ಜನಾರ್ಧನನ ಸುತ್ತ ಸುತ್ತುತ್ತದೆ. ಬೋಳುತಲೆಯ ವ್ಯಕ್ತಿ ಒಂದು ಸಾಂಕೇತಿಕ ಪಾತ್ರ. ಆದರೆ, ಮನುಷ್ಯನ ದೇಹದಲ್ಲಿರುವ ಏನಾದರೂ ಒಂದು ಸಣ್ಣ ಲೋಪ ಕೂಡಾ ಆತನನ್ನು ಯಾವ ರೀತಿ ಕುಗ್ಗಿಸುತ್ತಾ ಹೋಗುತ್ತದೆ, ಆ ಲೋಪದ ಮುಂದೆ, ಆತನ ಕೆಲಸ, ಒಳ್ಳೆತನ, ಕುಟುಂಬ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದನ್ನು ಜನಾರ್ಧನನ ಪಾತ್ರದ ಮೂಲಕ ತುಂಬಾ ಸೂಕ್ಷ್ಮವಾಗಿ ಹಾಗೂ ಅಷ್ಟೇ ಗಾಢವಾಗಿ ಹೇಳಿದ್ದಾರೆ ನಿರ್ದೇಶಕ ರಾಜ್‌ ಶೆಟ್ಟಿ. ಇಡೀ ಸಿನಿಮಾ ನಿಮಗೆ ಇಷ್ಟವಾಗಲು
ಕಾರಣ ಅದನ್ನು ಕಟ್ಟಿಕೊಟ್ಟ ರೀತಿ. ನಿಮ್ಮ ಮನೆ ಪಕ್ಕದಲ್ಲೇ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುವ ಮಟ್ಟಕ್ಕೆ ಸಿನಿಮಾವನ್ನು ತುಂಬಾ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಗಾಂಧಿನಗರದ ಸಿನಿಮಾ ಗ್ರಾಮರ್‌ ಅನ್ನು ಬದಿಗೊತ್ತಿ, ಕಥೆ
ಏನು ಬಯಸುತ್ತೋ ಅಷ್ಟನ್ನೇ ಆ ಪರಿಸರಕ್ಕೆ ಹೊಂದುವಂತೆ ನೀಡಿರುವುದು ಕೂಡಾ ಸಿನಿಮಾದ ಪ್ಲಸ್‌. ದೇಹ ಸೌಂದರ್ಯಕ್ಕಿಂತ ಹೃದಯ ಸೌಂದರ್ಯ ಮುಖ್ಯ ಎಂಬ ಮೂಲ ಸಂದೇಶದ ಜೊತೆಗೆ ಕನ್ನಡ, ಕನ್ನಡ ಪ್ರಾಧ್ಯಾಪಕರ ಬಗೆಗಿನ ತಾತ್ಸಾರ, ಕೆಲ ಜ್ಯೋತಿಷಿಗಳ ಸುಳ್ಳು ಸೇರಿದಂತೆ ಇನ್ನೂ ಅನೇಕ ವಿಷಯಗಳು ಅಲ್ಲಲ್ಲಿ ಬಂದು ಹೋಗುತ್ತವೆ.

ಇಡೀ ಚಿತ್ರ ಕೆಲವೇ ಕೆಲವು ಪಾತ್ರಗಳ ಸುತ್ತ ಸುತ್ತುತ್ತದೆ. ಜನಾರ್ಧನನ ಫ್ಯಾಮಿಲಿ, ಆತನ ಲೈಫ‌ನಲ್ಲಿ ಬರುವ ಮೂವರು ಹುಡುಗಿಯರು ಹಾಗೂ ಅಟೆಂಡರ್‌ ಶ್ರೀನಿವಾಸ್‌. ಇಷ್ಟು ಪಾತ್ರಗಳನ್ನಿಟ್ಟುಕೊಂಡು ಇಡೀ ಸಿನಿಮಾ ಕಟ್ಟಿಕೊಡಲಾಗಿದೆ. ಇಲ್ಲಿ ಜನಾರ್ಧನ ಹೀರೋ. ಆದರೆ, ಹೀರೋಯಿಸಂ ಇಲ್ಲ. ಆತನ ಭಾವನೆಗಳೇ ಈ ಸಿನಿಮಾದಲ್ಲಿ ಹೀರೋಯಿಸಂ
ಮೆರೆದಿವೆ. ಚಿತ್ರದಲ್ಲಿ ಬರುವ ಕೆಲವು ಸಂಭಾಷಣೆಗಳು, ಸನ್ನಿವೇಶಗಳು ನಿಮಗೆ ಆಗಾಗ ನಗುತರಿಸುತ್ತಿರುತ್ತದೆ. ಒಂದು ಕ್ಷಣ ಜನಾರ್ದನನ ಪಾತ್ರದಲ್ಲಿ ನಿಮ್ಮನ್ನ ಊಹಿಸಿಕೊಂಡರೆ ಖಂಡಿತಾ, ನಿಮಗೆ ಈ ಚಿತ್ರ ಕಾಡುತ್ತದೆ. ಆ ಮಟ್ಟಿಗೆ ಇದು
ನೈಜತೆಗೆ ಹಿಡಿದ ಕನ್ನಡಿಯಂತಿದೆ.

ಇದು ಮಂಗಳೂರು ಹಿನ್ನೆಲೆಯ ಸಿನಿಮಾ. ಹಾಗಾಗಿ, ಪಕ್ಕಾ ಮಂಗಳೂರು ಕನ್ನಡವನ್ನೇ ಬಳಸಲಾಗಿದೆ. ಕೆಲವು ಸಿನಿಮಾಗಳಲ್ಲಿ ಮಂಗಳೂರು ಕನ್ನಡವನ್ನು ಕೆಟ್ಟ ಕಾಮಿಡಿಗೆ ಬಳಸುವವರ ನಡುವೆ ಮಂಗಳೂರು ಕನ್ನಡದಲ್ಲೇ ಇಡೀ ಸಿನಿಮಾವನ್ನು ಎಷ್ಟು ನೀಟಾಗಿ ಕಟ್ಟಿಕೊಡಬಹುದೆಂಬುದನ್ನು ರಾಜ್‌ ಶೆಟ್ಟಿ ತೋರಿಸಿದ್ದಾರೆ. ಸಿನಿಮಾಕ್ಕೊಂದು ಹೊಸ
μàಲ್‌ ಕೊಟ್ಟಿರೋದು ಹಿನ್ನೆಲೆ ಸಂಗೀತ. ಯಾವುದೇ ಅಬ್ಬರವಿಲ್ಲದ ಮತ್ತು ಕಥೆಯ ತೂಕವನ್ನು ಹೆಚ್ಚಿಸುವಂತೆ ಹಿನ್ನೆಲೆ ಸಂಗೀತ ನೀಡಿದ್ದಾರೆ ಸಂಗೀತ ನಿರ್ದೇಶಕ ಮಿದುನ್‌ ಮುಕುಂದನ್‌. ಚಿತ್ರದ ನಿರೂಪಣೆ ಕೆಲವೊಮ್ಮೆ
ನಿಧಾನವಾಯಿತೇನೋ ಎಂಬ ಭಾವನೆ ಮೂಡುವಷ್ಟರಲ್ಲಿ ಮತ್ತೂಂದು ದೃಶ್ಯ ಅದನ್ನು ಮರೆಮಾಚುತ್ತದೆ.

ಚಿತ್ರದ ಕಥೆ ಎಷ್ಟೇ ಚೆನ್ನಾಗಿದ್ದರೂ ಅದಕ್ಕೆ ನ್ಯಾಯ ಒದಗಿಸೋದು ಕಲಾವಿದರು. ಆ ಮಟ್ಟಿಗೆ ಮೊದಲ ಬಾರಿಗೆ ನಟಿಸಿದ ರಾಜ್‌ ಶೆಟ್ಟಿಯವರನ್ನು ಮೆಚ್ಚಲೇಬೇಕು. ನಿರ್ದೇಶಕ ಹಾಗೂ ನಟನೆಯನ್ನು ಅವರು ಹೆಗಲ ಮೇಲೆ ಹೊತ್ತುಕೊಂಡಿದ್ದು, ಎರಡಕ್ಕೂ ನ್ಯಾಯ ಸಲ್ಲಿಸಿದ್ದಾರೆ.

ಬೋಳು ತಲೆಯ ಜನಾರ್ಧನ ಅನುಭವಿಸುವ ನೋವು, ಅವಮಾನ, ಸಣ್ಣ ಸಣ್ಣ ಖುಷಿಯನ್ನು ಅವರು ಹಿಡಿದಿಟ್ಟ ಪರಿ
ಅದ್ಭುತ. ಇಡೀ ಪಾತ್ರವನ್ನು ಅವರು ಆವರಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬರುವ ಪ್ರತಿ ಪಾತ್ರಗಳು ನ್ಯಾಯ ಒದಗಿಸಿವೆ. ಚಿತ್ರದಲ್ಲಿ ಬರುವ ಹಾಡಿನ ತುಣುಕುಗಳು ಕೂಡಾ ಇಷ್ಟವಾಗುತ್ತವೆ.

– ರವಿಪ್ರಕಾಶ್‌ ರೈ 

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.