ಗ್ಯಾಪ್‌ನಲ್ಲೊಂದ್ ಸಿನಿಮಾ!
Team Udayavani, Oct 20, 2017, 6:06 PM IST
“ಆ ದಿನಗಳು’ ಚೇತನ್ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದರು ಪಿ.ಸಿ. ಶೇಖರ್. ಇಷ್ಟರಲ್ಲಿ ಚಿತ್ರ ಶುರುವಾಗಿರಬೇಕಿತ್ತು. ಆದರೆ, ಕಾರಣಾಂತರಗಳಿಮದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಜನವರಿ 15ರಂದು ಆ ಚಿತ್ರ ಪ್ರಾರಂಭವಾಗಲಿದೆ. ಈ ಮಧ್ಯೆ ಗ್ಯಾಪ್‌ನಲ್ಲಿ ಇನ್ನೊಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ಶೇಖರ್. ಆ ಚಿತ್ರ ನವೆಂಬರ್‌ನಲ್ಲಿ ಶುರುವಾಗಿ ಜನವರಿ ಹೊತ್ತಿಗೆ ಮುಗಿಯಲಿದೆ.
ಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಹೀರೋ ಯಾರೂ ಇಲ್ಲ. ಏಕೆಂದರೆ, ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ರಾಗಿಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಶೇಖರ್ ನಿರ್ದೇಶನದ “ನಾಯಕ’ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದರು. ಈಗ ನಾಯಕಿ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಚಲಿತ ಸಮಸ್ಯೆಗಳನ್ನಿಟ್ಟುಕೊಂಡು, ಈ ಕಥೆ ಮಾಡಿದ್ದಾರೆ ಪಿ.ಸಿ. ಶೇಖರ್
“ದಿನ ಬೆಳಗಾದರೆ ಚಾನಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಭಯೋತ್ಪಾದನೆ ಕುರಿತ ಸುದ್ದಿಗಳನ್ನು ಓದುತ್ತಿರುತ್ತೀವಿ. ಇಂಥದ್ದಕ್ಕೆಲ್ಲಾ ಕೊನೆಯೇ ಇಲ್ಲವಾ? ಪರಿಹಾರವೇನು ಎಂಬಂತಹ ಪ್ರಶ್ನೆಗಳು ಎಲ್ಲರಿಗೂ ಬರುವುದು ಸಹಜ. ಈ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಎರಡು ದಿನಗಳ ಕಾಲ ಸುದ್ದಿಯಾಗುತ್ತದೆ. ಆ ನಂತರ ಏನಾಗುತ್ತದೆ ಎಂದು ಯಾರೂ ಯೋಚಿಸುವುದಿಲ್ಲ.
ಒಂದು ಭಯೋತ್ಪಾದನೆ ಚಟುವಟಿಕೆ ಹೇಗೆ ರಾಜಕೀಯವಾಗಿ, ಧಾರ್ಮಿಕವಾಗಿ ಏನೆಲ್ಲಾ ಸಮಸ್ಯೆಗಳಾಗುತ್ತದೆ ಮತ್ತು ಒಬ್ಬ ಮಹಿಳೆಗೆ ಇದರಿಂದ ಸಮಸ್ಯೆಯಾದರೆ, ಏನು ಮಾಡುತ್ತಾಳೆ ಎನ್ನುವುದು ಈ ಚಿತ್ರದ ಕಥೆ. ಚಿತ್ರಕ್ಕೆ ಹೆಸರು ಫಿಕ್ಸ್ ಆಗಿಲ್ಲ. ನವೆಂಬರ್ 15ರಿಂದ ಚಿತ್ರ ಶುರುವಾಗಲಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ ಶೇಖರ್.
ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಹಾಂಗ್‌ಕಾಂಗ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಅಲಂಕಾರ್ ಸಂತಾನಂ ಎನ್ನುವವರು ಚಿತ್ರ ನಿರ್ಮಿಸಲಿದ್ದಾರೆ. ಚಿತ್ರದಲ್ಲಿ ಹಾಡುಗಳು ಇರುವುದಿಲ್ಲವಂತೆ. ಕಾರಣ, ಇದೊಂದು ನೈಜ ಸಿನಿಮಾ ಆಗಿರುವುದರಿಂದ ಹಾಡುಗಳು ಇರುವುದಿಲ್ಲವಂತೆ. ಅದರ ಬದಲು ಹಿನ್ನೆಲೆ ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ಇನ್ನು ಛಾಯಾಗ್ರಹಣದ ವಿಷಯಕ್ಕೆ ಬಂದರೆ ಛಾಯಾಗ್ರಾಹಕ ವೈದಿ ಅವರ ಸಹಾಯಕ ಅಶೋಕ್ ಎನ್ನುವವರು ಮಾಡಲಿದ್ದು, ಯಾವುದೇ ಟ್ರಾಲಿ ಅಥವಾ ಇತರೆ ಉಪಕರಣಗಳನ್ನು ಬಳಸದೆ, ಹೆಗಲ ಮೇಲಿಟ್ಟುಕೊಂಡು ಛಾಯಾಗ್ರಹಣ ಮಾಡುತ್ತಿರುವುದು ಈ ಚಿತ್ರದ ವಿಶೇಷ. ಇನ್ನು “ರಾಗ’ ಚಿತ್ರಕ್ಕೆ ಸಂಭಾಷಣೆ ಬರೆದ ಸಚಿನ್ ಈ ಚಿತ್ರಕ್ಕೂ ಸಂಭಾಷಣೆ ರಚಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal; ಶಿವಣ್ಣ ಡ್ರೀಮ್ ಪ್ರಾಜೆಕ್ಟ್ ಭೈರತಿ ಮೈಲುಗಲ್!
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
Darshan; ಭರ್ಜರಿ ಓಪನಿಂಗ್ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್ ಚಿತ್ರದಲ್ಲಿ ದರ್ಶನ್ ಹವಾ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.