ಗ್ರಾಮ ಪಂಚಾಯಿತಿ ಸುತ್ತ ಹೊಸ ಚಿತ್ರ
Team Udayavani, Dec 3, 2019, 1:16 PM IST
ಕನ್ನಡದಲ್ಲಿ ಈಗಾಗಲೇ ಹಾಸ್ಯ ಕಲಾವಿದರು ಲೀಡ್ ಪಾತ್ರ ಮಾಡುವ ಮೂಲಕ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಈಗ ಮತ್ತೂಬ್ಬ ಹಿರಿಯ ಹಾಸ್ಯ ಕಲಾವಿದರೊಬ್ಬರು ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಹೌದು, ಅದು ಬೇರಾರೂಅಲ್ಲ, ಅರಸೀಕೆರೆ ರಾಜು. ಕಳೆದ ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿರುವ ಅವರು, ಅನೇಕ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಗಮನಸೆಳೆದವರು. ಈಗ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಗ್ರಾಮ ಪಂಚಾಯಿತಿ‘. ಚಿತ್ರದಶೀರ್ಷಿಕೆ ಕೇಳಿದಾಕ್ಷಣ, ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವ ರಾಜಕೀಯ ವಿಷಯಗಳ ಚಿತ್ರ ಅನ್ನುವುದು ಗೊತ್ತಾಗುತ್ತೆ. ಇದೊಂದು ಹಳ್ಳಿಯ ಕಥೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ತಯಾರಾಗುತ್ತಿದೆ. ಈ ಚಿತ್ರವನ್ನು ಬಿ.ಲವ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂನಿರ್ದೇಶಕರದ್ದೇ. ಗಂಗಣ್ಣ ಜಿ.ಎನ್. ಚಿತ್ರ ನಿರ್ಮಾಪಕರು. ಇವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಎಲ್ಲಾ ಸರಿ, “ಗ್ರಾಮ ಪಂಚಾಯಿತಿ‘ ಕಥೆ ಏನು? ಈ ಕುರಿತು ಹೇಳುವ ನಿರ್ದೇಶಕ ಬಿ.ಲವ,”ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಒಬ್ಬ ಅವಿದ್ಯಾವಂತನನ್ನು ಗ್ರಾಮಪಂಚಾಯಿ ಚುನಾವಣೆಯಲ್ಲಿ ಗೆಲ್ಲಿಸಿ, ಅವನನ್ನು ಅಧ್ಯಕ್ಷನನ್ನಾಗಿಸಿ ಮಾಡುವ ಕೆಲವರು, ಉದ್ಯೋಗ ಖಾತ್ರಿ ಯೋಜನೆಯಡಿ ಬರುವ ಕಾರ್ಯಕ್ರಮಗಳನ್ನು ದುರುಪಯೋಗ
ಮಾಡಿಕೊಂಡು ಕೋಟ್ಯಂತರ ರುಪಾಯಿದೋಚುತ್ತಾರೆ. ಆ ಒಂದು ಎಳೆ ಇಟ್ಟುಕೊಂಡು ಚಿತ್ರ ಮಾಡಲಾಗಿದೆ. ಅನಕ್ಷರಸ್ಥ ಅಧ್ಯಕ್ಷನಿಗೆ ಹಣದುರುಪಯೋಗದ ಬಗ್ಗೆ ತಿಳಿದಾಗ ಅವನ ಸ್ಥಿತಿ ಏನಾಗುತ್ತೆ ಎಂಬುದೇ ಕ್ಲೈಮ್ಯಾಕ್ಸ್.
ಒಂದು ನೈಜಘಟನೆ ಇಟ್ಟುಕೊಂಡೇ ಚಿತ್ರ ಮಾಡಲಾಗಿದೆ‘ ಎಂದು ವಿವರ ಕೊಡುತ್ತಾರೆ ಲವ.ಸುಮಾರು 42 ದಿನಗಳ ಕಾಲ ಕುಣಿಗಲ್ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಇಲ್ಲಿಕಥೆಯೇ ಹೀರೋ. ಅರಸೀಕೆರೆ ರಾಜು ಅವರಿಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.ಉಳಿದಂತೆ ಹರೀಶ್, ಸೂರ್ಯಕಿರಣ್, ತೀರ್ಥ, ಸಂಧ್ಯಾ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಕಾಣಿಸಿಕೊಂಡಿವೆ. ಚಿತ್ರಕ್ಕೆ ಸತೀಶ್‌ಬಾಬು ಸಂಗೀತ ನೀಡಿದ್ದಾರೆ. ಚಿತ್ರಲ್ಲಿ ಒಂದು ಹಾಡು ಇದ್ದು, ಕನಕದಾಸರ ಕೀರ್ತನೆಯನ್ನು ಬಳಸಿಕೊಳ್ಳಲಾಗಿದೆ. ರುದ್ರಮುನಿ ಅವರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.