ಜುಲೈ 13 ರಂದು ಕರಾಳ ರಾತ್ರಿ!


Team Udayavani, Jul 5, 2018, 4:55 PM IST

karala-rathri.jpg

ಒಂದು ಸಿನಿಮಾ ಮಾಡಿ, ಅದನ್ನು ತೆರೆಗೆ ತರುವುದು ಎಷ್ಟು ಕಷ್ಟ ಎಂಬುದು ಸಿನಿಮಾ ಮಂದಿಗಷ್ಟೇ ಗೊತ್ತು. ದಯಾಳ್‌ ವಿಚಾರದಲ್ಲೂ ಅದು ಹಾಗೇ ಆಗಿದೆ. ಹೌದು, “ಆ ಕರಾಳ ರಾತ್ರಿ’ ಚಿತ್ರ ಶುರುವಾಗಿದ್ದು, ಚಿತ್ರೀಕರಣಗೊಂಡಿದ್ದು, ಮುಗಿದಿದ್ದು, ಬಿಡುಗಡೆಯ ಕೆಲಸಗಳು ಜೋರಾಗಿ ನಡೆದದ್ದು, ಮೊದಲ ಪ್ರತಿಯನ್ನೂ ಪಡೆದದ್ದು ಎಲ್ಲವೂ ವೇಗವಾಗಿಯೇ ನಡೆದಿದೆ. ಆದರೆ, ಅದೇಕೋ ಏನೋ, ಬಿಡುಗಡೆ ಆಗಬೇಕಿದ್ದ ಚಿತ್ರ ಎರಡು ವಾರ ಮುಂದಕ್ಕೆ ಹೋಗಿಬಿಟ್ಟಿದೆ. 

ಇಷ್ಟರಲ್ಲಾಗಲೇ ಚಿತ್ರ ಬಿಡುಗಡೆ ಮಾಡುವುದಕ್ಕೆ ದಯಾಳ್‌ ಯೋಚಿಸಿದ್ದರು. ಆದರೆ, ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದ್ದು, ಮುಂದಿನ ವಾರ ಅಂದರೆ ಜುಲೈ 13ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.  ಎಲ್ಲಾ ಸರಿ, ಚಿತ್ರ ವಿಳಂಬವಾಗಿದ್ದು ಏಕೆ ಎಂದರೆ, ಪ್ರಾಣಿದಯಾ ಮಂಡಳಿ ಎಂಬುದು ದಯಾಳ್‌ ಮಾತು. ಪ್ರಾಣಿ ದಯಾ ಮಂಡಳಿಯವರು ಚಿತ್ರಕ್ಕೆ ಪ್ರಮಾಣ ಪತ್ರ ಕೊಡುವುದರ ಜೊತೆಗೆ, ನಿರ್ಮಾಪಕರಿಗೆ ಸ್ವಲ್ಪ ಹಣದ ಸಮಸ್ಯೆಯೂ ಎದುರಾಯಿತಂತೆ. 

ಆದರೆ, ಕೆಲ ಸಿನಿಮಾಸಕ್ತ ಟೆಕ್ಕಿಗಳು ಕಥೆಯ ಸಾರಾಂಶ ಚೆನ್ನಾಗಿದೆ ಅಂತ ಪರಿಚಿತರೊಬ್ಬರಿಗೆ ಚಿತ್ರ ತೋರಿಸಿದ್ದೇ ತಡ, ಕೆಲವರು ನೋಡಿ, ನಿರ್ದೇಶಕ ದಯಾಳ್‌ಗೆ ತಮ್ಮ ಮುಂದಿನ ಚಿತ್ರ ನಿರ್ದೇಶಿಸಿ ಅಂತ ಅಡ್ವಾನ್ಸ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನೊಬ್ಬರು ಚಿತ್ರ ಬಿಡುಗಡೆಗೆ ಸಹಾಯವನ್ನೂ ಮಾಡಿದ್ದಾರೆ. ಇಷ್ಟೆಲ್ಲಾ ನಡೆದ ಹಿನ್ನೆಲೆಯಲ್ಲಿ ದಯಾಳ್‌ ಚಿತ್ರ ಬಿಡುಗಡೆಗೆ ಅಣಿಯಾಗಿದ್ದಾರೆ. ಜ್ಞಾನೇಶ್ವರ್‌ ಐತಾಳ್‌ ಚಿತ್ರ ಬಿಡುಗಡೆ ಮಾಡಿಕೊಡಲು ಒಪ್ಪಿದ್ದಾರೆ. ಅಲ್ಲಿಗೆ “ಆ ಕರಾಳ ರಾತ್ರಿ’ ಅನುಭವ ಹಂಚಿಕೊಳ್ಳಲು ಪ್ರೇಕ್ಷಕರು ಸಜ್ಜಾಗಬೇಕಷ್ಟೇ.

ಚಿತ್ರಕ್ಕೆ ಜೆಕೆ ನಾಯಕ. ಅವರಿಗೆ ಅನುಪಮಾ ಗೌಡ ನಾಯಕಿ. ಚಿತ್ರದಲ್ಲಿ ರಂಗಾಯಣ ರಘು, ವೀಣಾ ಸುಂದರ್‌, ನವರಸನ್‌ ನಟಿಸಿದ್ದಾರೆ. ನವೀನ್‌ಕೃಷ್ಣ  ಬುಡಬುಡಕೆ ಪಾತ್ರದ ಜೊತಗೆ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಮೋಹನ್‌ಹಬ್ಬು  ಕಥೆ ಇದೆ. ಗಣೇಶ್‌ನಾರಾಯಣ್‌ ಸಂಗೀತವಿದೆ. ಪಿ.ಕೆ.ಹೆಚ್‌.ದಾಸ್‌ ಛಾಯಾಗ್ರಹಣವಿದೆ. ತಂಗಾಳಿ ನಾಗರಾಜ್‌ ಸಾಹಿತ್ಯವಿದೆ. ಮೂಡಿಗೆರೆ ಸಮೀಪದ ಬಾಳೂರು ಗ್ರಾಮದ ಪುರಾತನ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಒಂದು ಮುಕ್ಕಾಲು ಗಂಟೆಯ ಈ ಚಿತ್ರ ಜುಲೈ 13ರಂದು  ತೆರೆ ಕಾಣುತ್ತಿದೆ.

ಟಾಪ್ ನ್ಯೂಸ್

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.