ಆ ಒಂದು ನೋಟು ಚಿತ್ರದಲ್ಲಿ ಬೇಂದ್ರೆ ಹಾಡು
Team Udayavani, Jan 31, 2019, 6:51 AM IST
ಕನ್ನಡದ ಅನೇಕ ಕವಿಗಳ ಕವನಗಳು ಭಾವಗೀತೆಗಳಾಗಿವೆ, ಚಲನಚಿತ್ರಗಳಲ್ಲೂ ಬಳಕೆಯಾಗಿವೆ. ಹಾಗೆ ನೋಡಿದರೆ, ವರಕವಿ ದ.ರಾ.ಬೇಂದ್ರೆ ಅವರ ‘ನೀ ಹಿಂಗ ನೋಡ ಬ್ಯಾಡ ನನ್ನ…’, ‘ಇಳಿದು ಬಾ ತಾಯೇ ಇಳಿದು ಬಾ..’ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕು…’ ಎಂಬ ಗೀತೆಗಳು ಹಲವು ಚಿತ್ರಗಳಲ್ಲಿ ಬಳಕೆಯಾಗಿ ಸಾಕಷ್ಟು ಜನಪ್ರಿಯತೆಗೊಂಡಿವೆ.
ಈಗ ಅವರ ಮತ್ತೂಂದು ಹಾಡನ್ನು ಹೊಸಬರ ‘ಆ ಒಂದು ನೋಟು’ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ‘ಕುರುಡು ಕಾಂಚಾಣ..’ ಎಂಬ ಹಾಡನ್ನು ಬಳಸಿಕೊಳ್ಳಲಾಗಿದ್ದು, ಅದನ್ನು ಜ.31 (ಇಂದು) ದ.ರಾ.ಬೇಂದ್ರೆ ಅವರ 122 ನೇ ಜನ್ಮದಿನದ ಅಂಗವಾಗಿ ಚಿತ್ರತಂಡ ಮರುಸೃಷ್ಟಿಸಿರುವ ‘ಕುರುಡು ಕಾಂಚಾಣ..’ ಗೀತೆಯ ಲಿರಿಕಲ್ ವಿಡಿಯೋವನ್ನು ಲಹರಿ ಆಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
1932 ರಲ್ಲಿ ‘ನಾದಲೀಲೆ’ ಕವನಸಂಕಲನದಲ್ಲಿ ಪ್ರಕಟಗೊಂಡ ಈ ಕವನ ನಂತರದ ದಿನಗಳಲ್ಲಿ ಸಿ.ಅಶ್ವತ್ಥ್ ಅವರ ಸಂಗೀತ ಸಂಯೋಜನೆಯಲ್ಲಿ ಹೊರಬಂದಿತ್ತು. ಈಗ ಅದೇ ಹಾಡನ್ನು ಕಲಾವತಿ ಪುತ್ರನ್ ಹಾಡಿದ್ದಾರೆ. ಹಣದ ಗುಣದ ಕುರಿತು ಬರೆದಿರುವ ಈ ಗೀತೆ ‘ಆ ಒಂದು ನೋಟು’ ಚಿತ್ರದ ಕಥೆಗೆ ಪೂರಕವಾಗಿದ್ದು, ಅದನ್ನು ಬಳಸಿಕೊಳ್ಳಲಾಗಿದೆ.
ಚಿತ್ರದಲ್ಲಿ 2000 ನೋಟಿನ ಕಥೆ ಇದೆ. ಮುಖ್ಯವಾದ ಭಾಗವೇ 2000 ನೋಟು. ಚಿತ್ರದಲ್ಲಿರುವ ಪ್ರತಿಯೊಂದು ಪಾತ್ರ ಕೂಡ ಆ ನೋಟಿನ ಸುತ್ತವೇ ಸುತ್ತುತ್ತವೆ. ಇದೊಂದು ಪ್ರಯೋಗಾತ್ಮಕ ಕಥೆ. ಅದಕ್ಕೊಂದಷ್ಟು ಕಮರ್ಷಿಯಲ್ ಅಂಶ ಬೆರೆಸಿ, ಹೊಸತನದೊಂದಿಗೆ ನಿರೂಪಣೆ ಮಾಡಿ ಚಿತ್ರ ಮಾಡಲಾಗಿದೆ. ಫ್ರೆಂಡ್ಸ್ ಫಿಲ್ಮ್ ಫ್ಯಾಕ್ಟರಿ ಸಂಸ್ಥೆಯಡಿ ಎಮ್.ಕೆ.ಜಗದೀಶ್ ಮತ್ತು ಜಿ. ಪ್ರೇಮನಾಥ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರತ್ನಾ ತನಯ್ ನಿರ್ದೇಶನ ಮಾಡಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ರವಿವರ್ಮ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ. ವೀರ್‌ಸಮರ್ಥ್ ಹಿನ್ನಲೆ ಸಂಗೀತವಿದೆ. ಕೌಶಿಕ್ ಸಂಗೀತ ಚಿತ್ರಕ್ಕಿದ್ದು, ಕೆ.ಕಲ್ಯಾಣ್, ಹರೀಶ್ ಕೆ.ಗೌಡ ಗೀತೆ ರಚಿಸಿದ್ದಾರೆ.
ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಬಲರಾಜವಾಡಿ, ಗೌತಮ್, ಜಗದೀಶ್ ಎಂ.ಕೆ., ಅಕ್ಷತಾ ಪಾಂಡವಪುರ, ಆದಿತ್ಯ ಶೆಟ್ಟಿ, ಮೇಘಾ, ರವಿಶಂಕರ್, ಸಿಲ್ಲಿ ಲಲ್ಲಿ ಆನಂದ, ಜಯರಾಮ್, ಕಾಂತರಾಜ್ ನಟಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಇದೀಗ ಹಿನ್ನಲೆ ಸಂಗೀತ ಹಾಗು ಡಿಐ ಕೆಲಸಗಳು ನಡೆಯುತ್ತಿವೆ. ಫೆಬ್ರ್ರವರಿಯಲ್ಲಿ ಆಡಿಯೋ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.