Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
Team Udayavani, Nov 7, 2024, 4:37 PM IST
ಇತ್ತೀಚಿನ ದಿನಗಳಲ್ಲಿ ಚಿತ್ರತಂಡಗಳು ಭಿನ್ನವಾಗಿ ಸಿನಿಮಾ ಮಾಡುವುದಲ್ಲದೇ ವಿಭಿನ್ನವಾಗಿ ಪ್ರಚಾರವನ್ನೂ ಮಾಡುತ್ತಿವೆ. ಪ್ರೇಕ್ಷಕರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕೆಂಬ ಸದುದ್ದೇಶದಿಂದ ಅನೇಕ ರೀತಿಯ ಸೃಜನಾತ್ಮಕ ಪ್ರಚಾರಗಳಲ್ಲಿ ಚಿತ್ರತಂಡಗಳು ತೊಡಗಿಕೊಂಡಿವೆ. ಈಗ ಅಂಥದ್ದೇ ಒಂದು ಹೊಸ ಪ್ರಯೋಗವೊಂದನ್ನು “ಆರಾಮ್ ಅರವಿಂದ ಸ್ವಾಮಿ’ ಚಿತ್ರತಂಡ ಮಾಡುತ್ತಿದೆ.
ಚಿತ್ರದ ಟಿಕೆಟ್ ದರ ಸರಾಸರಿ 150 ರೂ. ಇರುವಾಗ “ಆರಾಮ್ ಅರವಿಂದಸ್ವಾಮಿ’ ಚಿತ್ರತಂಡದವರು 99 ರೂ. ಗೆ ಚಿತ್ರದ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ಸಿನಿ ಪ್ರೇಕ್ಷಕರಿಗೆ ಭರ್ಜರಿ ಆಫರ್ ನೀಡಿದಂತಾಗಿದೆ. ನವೆಂಬರ್ 22ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಬಿಡುಗಡೆಯಾಗಿ ಮೊದಲ ಮೂರು ದಿನಗಳ ಕಾಲ ಮಾತ್ರ ಚಿತ್ರದ ಟಿಕೆಟ್ ದರ 99 ರೂ. ಇರಲಿದೆ. ಈಗಾಗಲೇ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಕಾರ್ತಿಕ್ ಗೌಡ, ಯೋಗಿ ಜಿ. ರಾವ್, ನಿರ್ದೇಶಕ ತರುಣ್ ಸುಧೀರ್, ನಟ ಯುವರಾಜ್ ಕುಮಾರ್ 99 ರೂ. ನೀಡಿ ಸಿನಿಮಾದ ಟಿಕೆಟ್ ಖರೀದಿಸಿದ್ದಾರೆ.
ಚಿತ್ರಮಂದಿರಗಳಿಗೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬರಬೇಕು, ಅದಕ್ಕಾಗಿ ಈ ವಿನೂತನ ಪ್ರಯತ್ನ ಯಶಸ್ವಿಯಾಗಬೇಕೆಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ. ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ “ಆರಾಮ್ ಅರವಿಂದ ಸ್ವಾಮಿ’ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ಹಾಗೂ ಮಿಲನಾ ನಾಗರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಭರ್ಜರಿ ಓಪನಿಂಗ್ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್ ಚಿತ್ರದಲ್ಲಿ ದರ್ಶನ್ ಹವಾ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು
Shwetha Srivatsav: ಶ್ವೇತಾ ಕಲರ್ಫುಲ್ ಫೋಟೋಶೂಟ್
Dance Music Video: ಆಲ್ಬಂನಲ್ಲಿ ನಿಲ್ಲಬೇಡ!: ಯುವ ಪ್ರತಿಭೆ ಕನಸಿದು
MUST WATCH
ಹೊಸ ಸೇರ್ಪಡೆ
Ranji Trophy: ಶ್ರೇಯಸ್ ಅಯ್ಯರ್ ದ್ವಿಶತಕ; ಬೃಹತ್ ಮೊತ್ತದತ್ತ ಮುಂಬಯಿ
WI vs ENG: ಕಿಂಗ್, ಕಾರ್ಟಿ ಶತಕ ವಿಂಡೀಸ್ಗೆ ಏಕದಿನ ಸರಣಿ
WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
Udupi: ಮುನಿಯಾಲ್ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್
ಜೀವನ ಪರ್ಯಂತ ವೀಲ್ ಚೇರ್ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.