ನಾಯಕ ನಟನಾಗುವತ್ತ ಅಭಯ್ ಚಿತ್ತ
ವಿಭಿನ್ನ ಪಾತ್ರಗಳಲ್ಲಿ ಗಮನ ಸೆಳೆಯುತ್ತಿರುವ ನವ ಪ್ರತಿಭೆ
Team Udayavani, Apr 9, 2019, 3:00 AM IST
ಕಳೆದ ಒಂದೆರಡು ವರ್ಷಗಳಲ್ಲಿ ತೆರೆಗೆ ಬಂದಿರುವ ಬಹುತೇಕ ಹೊಸ ಪ್ರತಿಭೆಗಳ “ಸನಿಹ’, “ಅಮರೇಶ್ವರ ಮಹಾತ್ಮೆ’, “ಸವಾಲ್’, “ಚಾಣಾಕ್ಷ’ ಚಿತ್ರಗಳನ್ನು ನೋಡಿದ್ದರೆ, ಖಂಡಿತಾ ಈ ಹುಡುಗನ ಅಭಿನಯವನ್ನೂ ಗುರುತಿಸಿರುತ್ತೀರಿ. ಹೀಗೆ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಪ್ರತಿಭೆ ಅಭಯ್.
ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ “ಚಾಣಾಕ್ಷ’ ಚಿತ್ರದ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಭಯ್ ಅಭಿನಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ “ರೈತರಾಜ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಅಭಯ್, ಆ ಚಿತ್ರ ಪೂರ್ಣಗೊಳ್ಳುವ ಮೊದಲೇ ಮತ್ತೂಂದು ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕ ನಾಗರಾಜ್ ಕಂದಗಲ್ ಆ್ಯಕ್ಷನ್-ಕಟ್ ಹೇಳಲಿರುವ “ಬ್ರಹ್ಮಪುತ್ರ’ ಚಿತ್ರದಲ್ಲಿ ಅಭಯ್ ನಾಯಕನಾಗಿ ಅಭಿನಯಿಸುತ್ತಿದ್ದು, ಪಕ್ಕಾ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು “ಬ್ರಹ್ಮಪುತ್ರ’ ಚಿತ್ರ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರದ ಚಿತ್ರವಾಗಿದ್ದು, ಚಿತ್ರದ ಬಹುತೇಕ ಆ್ಯಕ್ಷನ್ ದೃಶ್ಯಗಳನ್ನು ಅಭಯ್ ಡ್ಯೂಪ್ ಇಲ್ಲದೇ ಯೋಚನೆಯಲ್ಲಿದ್ದಾರೆ.
ಅಭಿನಯಿಸುವ ಸದ್ಯ “ಬ್ರಹ್ಮಪುತ್ರ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರ ಇದೇ ಏಪ್ರಿಲ್ 11ರಂದು ಸೆಟ್ಟೇರಲಿದೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಯುವನಟರು ನಾಯಕ ನಟರಾಗಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದು, ಆ ಸಾಲಿಗೆ ಅಭಯ್ ಹೆಸರು ಈಗ ಹೊಸ ಸೇರ್ಪಡೆ. ಅದೇನೆಯಿರಲಿ, ನಾಯಕ ನಟನಾಗಲು ಹೊರಟಿರುವ ಅಭಯ್ ಅವರನ್ನು ಪ್ರೇಕ್ಷಕ ಪ್ರಭುಗಳು ಹೇಗೆ ಸ್ವಾಗತಿಸಿ, ಸ್ವೀಕರಿಸುತ್ತಾರೆ ಅನ್ನೋದು ಮಾತ್ರ “ಬ್ರಹ್ಮಪುತ್ರ’ ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.