Bad manners: ಅಭಿ ಖುಷಿ ಸೂರಿ ಗರಡಿಯಲ್ಲಿ ಜೂ. ರೆಬೆಲ್
Team Udayavani, Nov 24, 2023, 6:24 PM IST
ಸೂರಿ ನಿರ್ದೇಶನದ “ಬ್ಯಾಡ್ ಮ್ಯಾನರ್ಸ್’ ಚಿತ್ರ ಇಂದು ತೆರೆಕಂಡಿದೆ. ಈ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಪಕ್ಕಾ ಮಾಸ್ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈಗಾಗಲೇ ಟ್ರೇಲರ್, ಹಾಡುಗಳು ಹಿಟ್ ಆಗುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಅಭಿ ಕೂಡಾ ಇದೇ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ “ಬ್ಯಾಡ್ ಮ್ಯಾನರ್ಸ್’ ಬಗ್ಗೆ ಮಾತನಾಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿ…
ನಮ್ಮೊಳಗಿನ “ಬ್ಯಾಡ್ ಮ್ಯಾನರ್ಸ್’ …
– ಪ್ರತಿಯೊಬ್ಬ ಮನುಷ್ಯನೊಳಗೂ ಒಂದು ಗುಡ್ ಮ್ಯಾನರ್ಸ್ ಮತ್ತೂಂದು ಬ್ಯಾಡ್ ಮ್ಯಾನರ್ಸ್ ಇದ್ದೇ ಇರುತ್ತಾನೆ. ಅವನು ಆಯಾಯ ಸಂದರ್ಭ, ಸನ್ನಿವೇಶಕ್ಕೆ ಅದು ಅವನ ರೂಪದಲ್ಲಿ ಹೊರಗೆ ಬರುತ್ತದೆ. ಈ ಸಿನಿಮಾದಲ್ಲೂ ಕಥೆ ಮತ್ತು ಒಂದಷ್ಟು ಪಾತ್ರಗಳಲ್ಲಿರುವ ಅಂಥ ಗುಣಗಳನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್‌ನ ಬೇಸ್ ಮಾಡಿ ಈ ಟೈಟಲ್ ಇಡಲಾಗಿದೆ. ಸಿನಿಮಾ ನೋಡಿದಾಗ ಆ ಟೈಟಲ್ ಯಾಕೆ ಇಟ್ಟಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. “ಬ್ಯಾಡ್ ಮ್ಯಾನರ್ಸ್’ ಟೈಟಲ್ ಯಾಕೆ ಅಂಥ ಗೊತ್ತಾಗಬೇಕಾದ್ರೆ ಸಿನಿಮಾ ನೋಡಲೇಬೇಕು.
ಸಿನಿಮಾ ನೋಡಿ ಕಲಿಯಬೇಕು…
ನಮ್ಮ ದೇಶದಲ್ಲಿ ಸಾಕಷ್ಟು ಸಿನಿಮಾ ತರಬೇತಿ ಕೊಡುವ ಸಂಸ್ಥೆಗಳಿವೆ. ಅಲ್ಲಿಂದ ಬಂದು ಸ್ಟಾರ್ ಆದವರಿಗಿಂತ ಸಿನಿಮಾ ಮಾಡಿ ಅನುಭವದಿಂದ ಸ್ಟಾರ್ ಆದವರ ಸಂಖ್ಯೆ ದೊಡ್ಡದಿದೆ. ಯಾಕೆಂದರೆ, ಸಿನಿಮಾ ಶುರುವಾದ ನಂತರ ಸಾಕಷ್ಟು ವಿಷಯಗಳನ್ನು ಕಲಿಯಬೇಕಾಗುತ್ತದೆ. ನಾವು ಬೇಡ ಅಂದ್ರೂ ಸಿನಿಮಾ ಸಾಕಷ್ಟು ವಿಷಯಗಳನ್ನು ಕಲಿಸುತ್ತದೆ. ಕ್ಲಾಸ್ ರೂಮ್‌ಗಳಲ್ಲಿ ಸಿನಿಮಾ ಬಗ್ಗೆ ಹೇಳಿಕೊಡುವ ಪಾಠಗಳಿಗಿಂತ, ಸಿನಿಮಾ ಮೇಕಿಂಗ್‌ನಲ್ಲಿ ಕಲಿಯುವ ಅನುಭವಗಳು ಬೇರೆಯದ್ದೇ ಆಗಿರುತ್ತದೆ.
“ಅಮರ್’ ನಂತರ ಗ್ಯಾಪ್ ಯಾಕ್ ಗೊತ್ತಾ…
– 2019ರಲ್ಲಿ ನನ್ನ ಮೊದಲ ಸಿನಿಮಾ “ಅಮರ್’ ರಿಲೀಸ್ ಆಯ್ತು. ಅದಾದ ನಂತರ ಅಂಥದ್ದೇ ಒಂದಷ್ಟು ಕಥೆಗಳು ಬಂದಿದ್ದವು. ಆದರೆ ನಾನು ಬೇರೆ ಥರದ ಕಥೆಗಳನ್ನು ನಿರೀಕ್ಷಿಸುತ್ತಿದ್ದೆ. ಒಂದಷ್ಟು ಸಮಯದ ನಂತರ ನನಗೆ ಇಷ್ಟವಾಗುವಂಥ ಸಬ್ಜೆಕ್ಟ್ ಸಿಕ್ಕಿತು. ಅದರ ಮೇಲೆ ಕೆಲಸ ಶುರುವಾಗುತ್ತಿದ್ದಂತೆ, ಕೋವಿಡ್ ಬಂತು. ಎರಡು ಬಾರಿ ಲಾಕ್ ಡೌನ್ ಅನೌನ್ಸ್ ಆಯ್ತು. ಶೂಟಿಂಗ್ ಕೂಡ ಗ್ಯಾಪ್ ತೆಗೆದುಕೊಂಡಿತು. ಆನಂತರ ಸಿನಿಮಾದಲ್ಲಿ ಸಾಕಷ್ಟು ಸೂಕ್ಷ್ಮ ಕೆಲಸಗಳಿದ್ದರಿಂದ, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಿಗೆ ಸಾಕಷ್ಟು ಸಮಯ ಹಿಡಿಯಿತು. ಹೀಗಾಗಿ ಸ್ವಲ್ಪ ಗ್ಯಾಪ್ ಅನಿಸಿದ್ದರೂ, “ಬ್ಯಾಡ್ ಮ್ಯಾನರ್ಸ್’ ಎಷ್ಟು ಟೈಮ್ ಬೇಕೋ ಅಷ್ಟನ್ನು ತೆಗೆದುಕೊಂಡಿದೆ.
ಪ್ರತಿಭೆ ಗುರುತಿಸುವ ಗುಣ ಸೂರಿ ಅವರದು…
ಒಮ್ಮೆ ನಿರ್ಮಾಪಕ ಸುಧೀರ್ ಬಂದು ನಿರ್ದೇಶಕ ಸೂರಿ ಅವರೊಂದಿಗೆ ಸಿನಿಮಾ ಮಾಡುವ ಯೋಚನೆ ಹೇಳಿದರು. ಅದಾದ ನಂತರ ಸೂರಿ ಅವರೊಂದಿಗೂ ಮಾತುಕಥೆಯಾಯಿತು. ಸೂರಿಯವರಿಗೆ ದೊಡ್ಡ ಬ್ಯಾನರ್, ದೊಡ್ಡ ಸ್ಟಾರ್, ದೊಡ್ಡ ಆಫರ್ಗಳಿದ್ದರೂ, ಅವರು “ಬ್ಯಾಡ್ ಮ್ಯಾನರ್ಸ್’ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡರು. ಯಾರೂ ನೋಡದ ಪ್ರತಿಭೆಗಳನ್ನು ಸೂರಿ ಗುರುತಿಸುತ್ತಾರೆ. ಅಂಥದ್ದೊಂದು ಟ್ಯಾಲೆಂಟ್ ಸೂರಿ ಅವರಿಗಿದೆ. ಅವರ ಜೊತೆ ಕೆಲಸ ಮಾಡಿದ್ದು, ಕಲಿತುಕೊಂಡಿದ್ದು ಸಾಕಷ್ಟಿದೆ.
ಕೆಮಿಸ್ಟ್ರಿ ವರ್ಕೌಟ್ ಆಗಿದೆ:
ನಿರ್ದೇಶಕ ಸೂರಿ ಮೊದಲು ನಮ್ಮ ತಲೆಯಲ್ಲಿ ಸಿನಿಮಾದ ಪಾತ್ರವನ್ನು ಅದರ ವ್ಯಕ್ತಿತ್ವನ್ನು ತುಂಬಿಸುತ್ತಾರೆ. ನಮಗೇ ಗೊತ್ತಿಲ್ಲದಂತೆ ಆ ಕೆಲಸವನ್ನು ತುಂಬ ಸುಲಭವಾಗಿ ಮಾಡಿ ಬಿಡುತ್ತಾರೆ. ನಮ್ಮ ಬಾಡಿ ಲಾಂಗ್ವೇಜ್ ಅನ್ನು ಅವರಿಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. “ಬ್ಯಾಡ್ ಮ್ಯಾನರ್ಸ್’ ಶುರುವಾದ ನಂತರ ಕೋವಿಡ್‌ನಿಂದಾಗಿ ಮಧ್ಯದಲ್ಲಿ ಸಾಕಷ್ಟು ಗ್ಯಾಪ್ ಆಗುತ್ತಿತ್ತು. ಈ ವೇಳೆ ನಾವಿಬ್ಬರೂ ಸಾಕಷ್ಟು ಮಾತನಾಡುತ್ತಿದ್ದೆವು. ನನ್ನ ಬಗ್ಗೆ ಸೂರಿ ಅವರಿಗೆ, ಅವರ ಬಗ್ಗೆ ನನಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಅಂತಿಮವಾಗಿ ಶೂಟಿಂಗ್‌ಗೆ ಹೋಗುವ ವೇಳೆಗೆ ನಮ್ಮಿಬ್ಬರ ನಡುವೆ ಒಂದು ಒಳ್ಳೆಯ ಬಾಂಧವ್ಯ ಏರ್ಪಟ್ಟಿತ್ತು. ನಮ್ಮಿಬ್ಬರ ಕೆಮಿಸ್ಟ್ರಿ ಸಿನಿಮಾದಲ್ಲಿ ವಕೌìಟ್ ಆಗಿದೆ.
ಸ್ಟಾರ್ ಮಕ್ಕಳ ಜರ್ನಿಯಲ್ಲೂ ಸವಾಲಿದೆ…
ಸಿನಿಮಾಕ್ಕೆ ಬರುವ ಹೊಸಬರಿಗೆ ಒಂಥರಾ ಸವಾಲುಗಳಿದ್ದರೆ, ಸ್ಟಾರ್ ಮಕ್ಕಳಿಗೆ ಮತ್ತೂಂದು ಥರದ ಸವಾಲುಗಳಿರುತ್ತದೆ. ಹೊಸಬರು ಒಮ್ಮೆ ಸೋತರೂ, ಅವರಿಗೆ ಕಲಿಯಲು ಸಾಕಷ್ಟು ಅವಕಾಶಗಳಿರುತ್ತವೆ. ಅವರ ವ್ಯಾಪ್ತಿ ವಿಶಾಲವಾಗಿರುತ್ತದೆ. ಜನ ಇನ್ನೊಂದು ಛಾನ್ಸ್ ಕೊಡೋಣ ಅಂತಾರೆ. ಆದರೆ ಸ್ಟಾರ್ ಮಕ್ಕಳಿಗೆ ಆ ಛಾನ್ಸ್ ಕಡಿಮೆ. ದೇವರು ಎಲ್ಲ ಕೊಟ್ಟಿದ್ರೂ ಇವರ್ಯಾಕೆ ಸರಿಯಾಗಿ ಮಾಡಿಲ್ಲ ಅಂತಾರೆ. ಒಮ್ಮೆ ಸೋತರೂ ಮತ್ತೂಂದು ಚಾನ್ಸ್ ಸಿಗುತ್ತದೆ ಅಂಥ ಹೇಳಲಾಗುವುದಿಲ್ಲ. ನನ್ನ ಪ್ರಕಾರ ಯಾವುದೇ ಸಿನಿಮಾ, ಬಿಝಿನೆಸ್, ಪಾಲಿಟಿಕ್ಸ್, ನ್ಪೋರ್ಟ್ಸ್ ಹೀಗೆ ಯಾವುದೇ ಕ್ಷೇತ್ರವಿರಲಿ ಅಲ್ಲಿ ದೊಡ್ಡ ಹೆಸರು ಮಾಡಿದವರ, ಸ್ಟಾರ್ ಎನಿಸಿಕೊಂಡವರ ಮಕ್ಕಳಿಗೆ ಇಂಥದ್ದೊಂದು ಚಾಲೆಂಜ್ ಇದ್ದೇ ಇರುತ್ತದೆ. ಎರಡನೇ ತಲೆಮಾರು, ಮೂರನೇ ತಲೆಮಾರು ಸಕ್ಸಸ್ ಆಗೋದು ಕಷ್ಟ
-ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.