ಶೂಟಿಂಗ್‍ಗೆ ಹೊರಟ ಮರಿ ರೆಬೆಲ್
Team Udayavani, Dec 12, 2018, 5:00 PM IST
ಸ್ಯಾಂಡಲ್‍ವುಡ್‍ನ ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ಅತೀವ ದುಃಖದಲ್ಲಿದ್ದ ಪುತ್ರ ಅಭಿಷೇಕ್ ಇಂದಿನಿಂದ ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ. ಹೌದು, ಅಭಿಷೇಕ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಅಪ್ಪನ ಫೋಟೋ ಹಿಡಿದುಕೊಂಡಿರೋ ತನ್ನ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಆ ಫೋಟೋದ ಮೇಲೆ ಮತ್ತೆ ಕೆಲಸಕ್ಕೆ ತೆರಳುತ್ತಿದ್ದು, ಇದನ್ನೆಲ್ಲಾ ನನ್ನಪ್ಪ ರೆಬೆಲ್ ನೋಡುತ್ತಿದ್ದಾರೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
ಅಪ್ಪನ ಫೋಟೋ ಹಿಡಿದು ಮತ್ತೆ ಕೆಲಸಕ್ಕೆ ಹೋಗುತ್ತಿರುವೆ ಎಂದು ಬರೆದಿರುವ ಮರಿ ರೆಬೆಲ್‍ಗೆ ಅಭಿಮಾನಿಗಳು, ತಂದೆಯವರು ನಿಮಗೆ ಸದಾ ಹಾರೈಸುತ್ತಿರುತ್ತಾರೆ. ಹಾಗೆಯೇ ನಿಮ್ಮ ಸಿನಿ ಜೀವನ ಚೆನ್ನಾಗಿರಲಿ ಎಂದು ಎಲ್ಲರೂ ಶುಭ ಹಾರೈಸಿದ್ದಾರೆ.
ಇನ್ನು ಅಂಬರೀಶ್ ಅವರು ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದಾಗಿ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಇದನ್ನೆಲ್ಲ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ನಿಧನಕ್ಕೆ ಚಿತ್ರರಂಗ, ರಾಜಕೀಯದ ಗಣ್ಯರು ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.