ಪ್ರಭಾಸ್ ರೇಂಜ್‌ಗೆ ಅಭಿಷೇಕ್
Team Udayavani, May 9, 2018, 9:00 PM IST
ಅಂಬರೀಶ್ ಪುತ್ರ ಅಭಿಷೇಕ್ ಚಿತ್ರ “ಅಮರ್’ಗೆ ಹಸಿರು ನಿಶಾನೆ ಸಿಕ್ಕಾಗಿದೆ. ಕಳೆದ ಒಂದು ವಾರದ ಹಿಂದಷ್ಟೇ ಅಭಿಷೇಕ್ ಅವರ ಫೋಟೋ ಶೂಟ್ ಕೂಡ ನಡೆದಿದೆ. ಛಾಯಾಗ್ರಾಹಕ ಮೋಹನ್‌ಗೌಡ ಅವರು ಅಭಿಷೇಕ್ ಅವರ ಚೆಂದದ ಫೋಟೋಗಳನ್ನು ತೆಗೆದಿದ್ದಾರೆ. ಔಟ್‌ಡೋರ್, ಇನ್‌ಡೋರ್‌ನಲ್ಲೂ ಫೋಟೋ ಶೂಟ್ ಮಾಡಿರುವುದು ವಿಶೇಷ.
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ, ನಾಗಶೇಖರ್ ಹೆಣೆದಿರುವ ಕಥೆ ಅಂತಿಮವಾಗಿದ್ದು, ಚುನಾವಣೆ ನಂತರ ಅದಕ್ಕೊಂದು ಸ್ಪಷ್ಟತೆ ಸಿಗಲಿದೆ. ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬರ್ತ್‌ಡೇ ದಿನ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಟàಸರ್ ಬಿಡುಗಡೆ ಮಾಡುವ ಯೋಚನೆಯೂ ಚಿತ್ರತಂಡಕ್ಕಿದೆ. ನಿರ್ದೇಶಕ ನಾಗಶೇಖರ್ ಅವರು ಸ್ಕ್ರಿಪ್ಟ್ನಲ್ಲಿ ಬಿಜಿಯಾಗಿದ್ದಾರೆ.
ನಿರ್ಮಾಪಕ ಸಂದೇಶ್ ನಾಗರಾಜ್ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ಎಲೆಕ್ಷನ್ ನಂತರ ಸ್ಕ್ರಿಪ್ಟ್ ಬಗ್ಗೆ ಮತ್ತಷ್ಟು ಚರ್ಚಿಸಿ, ಅಂತಿಮಗೊಳಿಸಿದ ಬಳಿಕ ಎಲ್ಲಾ ಕೆಲಸ ಕಾರ್ಯಗಳು ನಡೆಯಲಿವೆ. ಎಲ್ಲಾ ಸರಿ, ಫೋಟೋ ಶೂಟ್‌ನಲ್ಲಿ ಅಭಿಷೇಕ್ ಹೇಗೆ ಕಾಣಾ¤ರೆ? ಇದಕ್ಕೆ ಉತ್ತರ, ಅಂಬರೀಶ್ ಬರ್ತ್‌ಡೇ ಬರುವವರೆಗೂ ಕಾಯಬೇಕು ಎಂಬುದು ನಾಗಶೇಖರ್ ಮಾತು.
ಆದರೆ, ನಾಗಶೇಖರ್ ಕಂಡಂತೆ, ಫೋಟೋ ಶೂಟ್‌ನಲ್ಲಿ ಅಭಿಷೇಕ್ ಅಂಬರೀಶ್ ಅವರು ಪ್ರಭಾಸ್ ರೇಂಜ್‌ನಲ್ಲೇ ಕಾಣಾ¤ರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ನಾಗಶೇಖರ್. “ಇಷ್ಟರಲ್ಲೇ ಫೋಟೋಶೂಟ್‌ನ ಮೇಕಿಂಗ್ ಜೊತೆಗೆ ಸಣ್ಣದ್ದೊಂದು ಟೀಸರ್ ಸಿದ್ಧಗೊಳಿಸಿ, ಪತ್ರಿಕಾಗೋಷ್ಠಿಯಲ್ಲೇ ಅನಾವರಣಗೊಳಿಸಬೇಕೆಂಬ ಕಟ್ಟಪ್ಪಣೆ ಅಂಬರೀಶ್ ಅವರಿಂದ ಆಗಿರುವುದರಿಂದ, ಯಾವುದೇ ಫೋಟೋವಾಗಲಿ, ಮೇಕಿಂಗ್ ವಿಡೀಯೋವಾಗಲಿ ಬಿಡುಗಡೆ ಮಾಡುವಂತಿಲ್ಲ’ ಎನ್ನುತ್ತಾರೆ ನಾಗಶೇಖರ್.
ಹೋಗಲಿ, ಕಥೆ ಹೇಗಿದೆ? “ಇದೊಂದು ಬ್ಯೂಟಿಫುಲ್ ಲವ್‌ಸ್ಟೋರಿ. ಇದುವರೆಗೆ ನಾನು ಮಾಡಿದ ಚಿತ್ರಗಳಿಗಿಂತಲೂ ತುಂಬಾನೇ ಇಷ್ಟವಾಗಿರುವ ಕಥೆ ಅದು. “ಸಂಜು ವೆಡ್ಸ್ ಗೀತಾ’, “ಮೈನಾ’ ಚಿತ್ರಗಳನ್ನು ಮೀರಿಸುವಂತಹ ಸಿನಿಮಾ ಅದಾಗಲಿದೆ ಎಂಬ ಗ್ಯಾರಂಟಿ ಕೊಡ್ತೀನಿ. ಅದಕ್ಕಾಗಿಯೇ, ರಾತ್ರಿ-ಹಗಲು ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. “ಅಮರ್’ ಒಂದು ಅದ್ಭುತ ಪ್ರೇಮದೃಶ್ಯ ಕಾವ್ಯ ಆಗಲಿದೆ. ಎಂದಿನಂತೆ ನನ್ನ ಚಿತ್ರದಲ್ಲಿ ಸತ್ಯ ಹೆಗಡೆ ಛಾಯಾಗ್ರಹಣ ಮಾಡಲಿದ್ದಾರೆ. ಅರ್ಜುನ್ ಜನ್ಯಾ ಅವರ ಸಂಗೀತ ಇರಲಿದೆ.
ದೀಪು ಎಸ್ ಕುಮಾರ್ ಸಂಕಲನ ಇದ್ದರೆ, ಮೋಹನ್ ಬಿ.ಕೆರೆ ಕಲಾನಿರ್ದೇಶನವಿದೆ’ ಎಂದು ವಿವರ ಕೊಡುತ್ತಾರೆ ನಾಗಶೇಖರ್. ಅಂಬರೀಶ್ ಪುತ್ರನ ಮೊದಲ ಚಿತ್ರ ಆಗಿರುವುದರಿಂದ ಚಿತ್ರದಲ್ಲಿ ದೊಡ್ಡ ತಾರಾಬಳಗವೂ ಇರಲಿದೆ. ಸದ್ಯಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಕನ್ನಡದ ಹುಡುಗಿಯೇ ನಾಯಕಿಯಾಗಿರುತ್ತಾರಂತೆ. ಚಿತ್ರದಲ್ಲಿ ಸುಹಾಸಿನಿ, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ಇತರರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ನಾಗಶೇಖರ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.