ಚಿತ್ರರೂಪದಲ್ಲಿ ಆಚಾರ್ಯ ಶ್ರೀಶಂಕರ
ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ನಿರ್ಮಾಣ
Team Udayavani, Dec 29, 2020, 1:06 PM IST
ಆದಿ ಶಂಕರಾಚಾರ್ಯರ ಜೀವನ -ಸಾಧನೆಗಳನ್ನು ಕುರಿತು ಹಲವುಕೃತಿಗಳು, ಸಾಕ್ಷ್ಯಚಿತ್ರಗಳು, ಸಿನಿಮಾಗಳುಈಗಾಗಲೇ ಬಂದಿವೆ. ಈಗ ಶಂಕರಾಚಾರ್ಯ ಜೀವನದ ಇನ್ನಷ್ಟುಅಂಶಗಳನ್ನು ತೆರೆಮೇಲೆ ಹೇಳುವಂಥ ಮತ್ತೂಂದು ಹೊಸಚಿತ್ರ ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಆಚಾರ್ಯ ಶ್ರೀಶಂಕರ’.
ಭಾರತದ ಸನಾತನ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿಹೇಳಿದವರು ಶಂಕರಾಚಾರ್ಯರು.ಕೇವಲ 32 ವಯಸ್ಸಿಗೆ ಭಾರತದ ಮೂಲೆ ಮೂಲೆಗಳಿಗೆ ಸಂಚರಿಸಿ ಅದ್ವೆ„ತಸಿದ್ಧಾಂತವನ್ನು ಪ್ರತಿಪಾದಿಸಿ, ಅದನ್ನು ಜಗತ್ತಿಗೆ ಸಾರಿದ ಆದಿ ಶಂಕರರ ಜೀವನಬಾಲ್ಯ, ಯೌವ್ವನ ಮತ್ತು ನಿರ್ಗಮನದ ಅಪರೂಪದ ಸಂಗತಿಗಳು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿದೆಯಂತೆ. ಈ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿಚಿತ್ರಕ್ಕೆ “ಯು’ ಪ್ರಮಾಣ ಪತ್ರ ನೀಡಿದ್ದಾರೆ.
ಚಿತ್ರ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ “ಆಚಾರ್ಯ ಶ್ರೀಶಂಕರ’ ಚಿತ್ರಕ್ಕೆ ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ವೈ.ಎನ್. ಶರ್ಮಾಮತ್ತು ವಿಜಯಲಕ್ಷ್ಮೀ “ಎಮ್ಮನೂರು ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿನಿರ್ಮಿಸುತ್ತಿದ್ದಾರೆ. ಈ ಹಿಂದೆ ರಿಯಲ್‌ಸ್ಟಾರ್ ಉಪೇಂದ್ರ ಅಭಿನಯದ “ಶ್ರೀಮತಿ’, “ಭಗವದ್ ಶ್ರೀರಾಮಾನುಜ’, “ಅಷ್ಟಾವಕ್ರ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಾಜಾ ರವಿಶಂಕರ್, “ಆಚಾರ್ಯ ಶ್ರೀ ಶಂಕರ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ : ರಾಜಕೀಯ ಪಕ್ಷ ಸ್ಥಾಪನೆಯಿಲ್ಲ ಎಂದ ಸೂಪರ್ ಸ್ಟಾರ್: ಮಹತ್ವದ ನಿರ್ಧಾರ ಪ್ರಕಟಿಸಿದ ರಜಿನಿ
ಇನ್ನೊಂದು ವಿಶೇಷವೆಂದರೆ, ಶೃಂಗೇರಿ ದಕ್ಷಿಣಾಮ್ಯಾಯ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು”ಆಚಾರ್ಯ ಶ್ರೀ ಶಂಕರ’ ಚಿತ್ರದ ಕಥೆ, ಚಿತ್ರಕತೆ ಮತ್ತು ಸಂಭಾಷಣೆಯನ್ನುಪರಾಮರ್ಶಿಸಿ, ಸಮ್ಮತಿಸಿದನಂತರವಷ್ಟೇ ಚಿತ್ರೀಕರಣ ಆರಂಭಿಸಲಾಗಿತ್ತು.
ಇನ್ನು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿ ಶಂಕರಾಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟರಾದ ರಾಮಕೃಷ್ಣ, ರಮೇಶಭಟ್, ಮಾ. ಲಿಖೀತ ಶರ್ಮಾ, ಮಾ. ಬಿ.ಪಿ. ರೋಹಿತ್ ಶರ್ಮಾಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆಸಿ. ನಾರಾಯಣಛಾಯಾಗ್ರಹಣ, ಆರ್.ದೊರೆರಾಜ್ (ಆರ್.ಡಿರವಿ) ಸಂಕಲನವಿದೆ.ಚಿತ್ರದ ಹಾಡುಗಳಿಗೆಅರ್ಜುನ್ ಜನ್ಯಸಂಗೀತ ಸಂಯೋಜಿಸಿದ್ದಾರೆ.
ಇದೇ ಜನವರಿ ತಿಂಗಳಲ್ಲಿ ಶೃಂಗೇರಿಯಲ್ಲಿ ಸೆಟ್ಟೇರಿದ್ದ “ಆಚಾರ್ಯ ಶ್ರೀ ಶಂಕರ’ ಚಿತ್ರದ ಚಿತ್ರೀಕರಣವನ್ನು ತೀರ್ಥಹಳ್ಳಿ, ಕುಂದಾಪುರ, ದೇವರಾಯನ ದುರ್ಗ ಮೊದಲಾದ ಕಡೆಗಳಲ್ಲಿ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.