ಕಾಯ್ದೆ-74 ಚಿತ್ರ ಪ್ರಯೋಗ
Team Udayavani, Jan 12, 2022, 10:04 AM IST
“ಭೂ ಸುಧಾರಣಾ ಕಾಯ್ದೆ’ಯ ಬಗ್ಗೆ ಮತ್ತು ಅದರಲ್ಲಿ ಬರುವ “ಉಳುವವನೇ ಭೂಮಿಯ ಒಡೆಯ’ ಹಕ್ಕುಗಳ ಬಗ್ಗೆ ನೀವು ಕೇಳಿರುತ್ತೀರಿ. ಭೂ ಸುಧಾರಣೆ ನೀತಿಯ ಕ್ರಾಂತಿಕಾರಿ ಕ್ರಮ ಎಂದೇ ರಾಜಕೀಯ ಇತಿಹಾಸದಲ್ಲಿ ವಿಶ್ಲೇಷಿಸಲಾಗುವ ಈ ಸಂಗತಿಯನ್ನು ಇಟ್ಟುಕೊಂಡು, ಈಗ “ಕಾಯ್ದೆ-74′ ಹೆಸರಿನಲ್ಲಿಸಿನಿಮಾವೊಂದು ತೆರೆಗೆ ಬರುತ್ತಿದೆ.
ಭೂಮಿಯ ಒಡೆತನ, ಹೋರಾಟ, ಜಾತಿ ಸಾಮರಸ್ಯ, ಸೌಹಾರ್ದತೆ, ಮಾನವೀಯ ಮೌಲ್ಯ ಮತ್ತುಸಂಬಂಧಗಳ ಸುತ್ತ ನಡೆಯುವ ಕಥಾನಕ ಹೊಂದಿದೆ. ಸುಮಾರು ನಾಲ್ಕು ದಶಕಗಳಿಂದ ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿರುವ, ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟನಾಗಿ ಗುರುತಿಸಿಕೊಂಡಿರುವ ನಾಗರಾಜ ಶಾಂಡಿಲ್ಯ “ಕಾಯ್ದೆ-74′ ಚಿತ್ರದಲ್ಲಿ ಹರಿಜನ ವ್ಯಕ್ತಿಯಾಗಿ ಪ್ರಧಾನಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ನಾಗೇಂದ್ರ ಶರ್ಮ, ಅಪೂರ್ವಾ ಶೆಟ್ಟಿ, ಲೋಕೇಶ್, ಕಲಾವತಿ, ಮಮತಾ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಕುಕ್ಕೆಶ್ರೀ ಪಿಕ್ಚರ್’ ಬ್ಯಾನರ್‌ನಲ್ಲಿ “ಕಾಯ್ದೆ-74′ ಚಿತ್ರ ನಿರ್ಮಾಣವಾಗಿದೆ.
“ಕಾಯ್ದೆ-74′ ಚಿತ್ರದ ಕಥಾಹಂದರ ಬಗ್ಗೆ ಮಾತನಾಡುವ ನಟ ಮತ್ತು ನಿರ್ಮಾಪಕ ನಾಗರಾಜ ಶಾಂಡಿಲ್ಯ, “ಇಡೀ ಚಿತ್ರ 1960ರ ಕಾಲಘಟ್ಟದಲ್ಲಿ ನಡೆಯುತ್ತದೆ. ಹಳ್ಳಿಯಲ್ಲಿಬಹಿಷ್ಕಾರಗೊಂಡ ಹರಿಜನವ್ಯಕ್ತಿಯೊಬ್ಬ ಅಲೆಮಾರಿಯಾಗಿ ಊರಿಂದ ಊರಿಗೆ ಅಲೆಯುತ್ತಿದ್ದಾಗ, ಬ್ರಾಹ್ಮಣ ಜಮೀನ್ದಾರನೊಬ್ಬನ ಆತನಿಗೆ ಆಶ್ರಯ ನೀಡಿ ತನ್ನಜಮೀನನ್ನು ಆತನಿಗೆ ಉಳುಮೆಗೆ ನೀಡುತ್ತಾನೆ. ಅದೇ ಭೂಮಿಯಲ್ಲಿ ಉಳುಮೆಮಾಡಿಕೊಳ್ಳುತ್ತ ಆ ಹರಿಜನ ವ್ಯಕ್ತಿ ತನ್ನ ಸಂಸಾರ, ಬದುಕು ಕಟ್ಟಿಕೊಳ್ಳುತ್ತಾನೆ. ಮುಂದೆಜಾರಿಯಾಗುವ “ಭೂ ಸುಧಾರಣೆ ಕಾಯ್ದೆ’ಯಲ್ಲಿ ಆ ಹರಿಜನ ವ್ಯಕ್ತಿಯ ಮಗ ತನ್ನ ತಂದೆ ಒಕ್ಕಲು ಮಾಡುತ್ತಿದ್ದಭೂಮಿಯ ಒಡೆತನದ ಹಕ್ಕು ಚಲಾಯಿಸಲುಮುಂದಾಗುತ್ತಾನೆ. ಆ ನಂತರ ಆ ಹರಿಜನ ವ್ಯಕ್ತಿ ಮತ್ತು ಬ್ರಾಹ್ಮಣನ ಬದುಕಿನಲ್ಲಿ ಏನೇನು ನಡೆಯುತ್ತದೆ ಅನ್ನೋದು ಕಥೆಯ ಎಳೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ
Thalapathy69: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆ
Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್ ಆರತಿ
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
MUST WATCH
ಹೊಸ ಸೇರ್ಪಡೆ
Udupi: ಕಾರ್ಕಳದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು… ಸುನಿಲ್ ಆರೋಪ
ಮಂಗಳೂರು: ಭಾರತ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪರಿಣಾಮಕಾರಿ ನಾಯಕತ್ವ ಕಾರಣ: ನಿರ್ಮಲಾ
Udupi: ಸಂಭ್ರಮದ ಲಕ್ಷದೀಪೋತ್ಸವ ಆರಂಭ
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.