ನನ್ನದೇ ನಿರ್ಲಕ್ಷ್ಯದಿಂದ ಹಾಗಾಯ್ತು; ಹೊಟ್ಟೆ-ಬಟ್ಟೆ ಬಗ್ಗೆ ಅನಂತ್‌

Team Udayavani, Jul 31, 2018, 5:01 PM IST

ananth-nag-4.jpg

“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕೊಡುಗೈ ರಾಮಣ್ಣ ರೈ’ ಚಿತ್ರ ಆಗಸ್ಟ್‌ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಅನಂತ್‌ ನಾಗ್‌, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದ ಕಳಕಳಿ.

ಇತ್ತೀಚೆಗೆ ನಡೆದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕೊಡುಗೈ ರಾಮಣ್ಣ ರೈ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದ ನಂತರ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ, “ಇದೊಂದು ಮನರಂಜನಾತ್ಮಕ ಚಿತ್ರ. ಮನರಂಜನೆ ಜೊತೆಗೆ ಕನ್ನಡದ ಬಗೆಗಿನ ಕಳಕಳಿ ಈ ಚಿತ್ರದಲ್ಲಿ. ಗಡಿ ಪ್ರದೇಶ ಮತ್ತು ಅಲ್ಲಿನ ಸಮಸ್ಯೆಗಳೇನು ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾನು ಸಹ ಅದೇ ಪ್ರಾಂತ್ಯದಲ್ಲಿ ಬಾಲ್ಯವನ್ನು ಕಳೆದವನು. 

ಕಾಸರಗೋಡು, ಕೇರಳಕ್ಕೆ ಸೇರ್ಪಡೆಯಾದಾಗ ನನಗೆ ಏಳೆಂಟು ವರ್ಷವಿರಬಹುದು. ಇವತ್ತು ಕನ್ನಡ ಬೋರ್ಡ್‌ ಇದ್ದಿದ್ದು, ನಾಳೆ ಇಲ್ಲ ಅಂದರೇನರ್ಥ? ಈ ಬಗ್ಗೆ ಹಿರಿಯರನ್ನು ಕೇಳಿದಾಗ, “ನಿಂಗೆ ಗೊತ್ತಾಗಲ್ಲಪ್ಪ’ ಎಂಬ ಉತ್ತರ ಬಂದಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಅನಂತ್‌ ನಾಗ್‌.

ಇನ್ನು ಅನಂತ್‌ ನಾಗ್‌ ಅವರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ನೆಲಕಚ್ಚಿತು. ಅದರ ಜೊತೆಗೆ ಅದು “ದಿ ಇಂಟರ್ನಿ’ ಎಂಬ ಹಾಲಿವುಡ್‌ ಚಿತ್ರದ ನಕಲು ಎಂಬ ವಿಷಯ ಎಲ್ಲರ ನಿರೀಕ್ಷೆಗಳಿಗೂ ತಣ್ಣೀರೆರಚಿದಂತಾಗಿತ್ತು. ಈ ಕುರಿತು ಮಾತನಾಡುವ ಅವರು, ಆ ಕುರಿತು ಸ್ವಲ್ಪ ಲಕ್ಷ್ಯ ವಹಿಸಬೇಕಿತ್ತು ಎನ್ನುತ್ತಾರೆ. “ನನ್ನದೇ ನಿರ್ಲಕ್ಷ್ಯದಿಂದ ಹಾಗಾಯ್ತು. ಸಾಮಾನ್ಯವಾಗಿ ರೀಮೇಕ್‌ ಅಂತ ಬಂದರೆ ನಾನು ಒಪ್ಪುವುದಿಲ್ಲ. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ತಂಡದವರು ತಾವು ಇಂಗ್ಲೀಷ್‌ ಚಿತ್ರದಿಂದ ಸ್ಫೂರ್ತಿ ಪಡೆದು ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದರು. ಸಿಡಿಯನ್ನೂ ತಂದಿದ್ದರು. ನಾನೊಮ್ಮೆ ಆ ಚಿತ್ರವನ್ನು ನೋಡಬೇಕಿತ್ತು. 

ನೋಡಿದರೆ ಅದೇ ಮನಸ್ಸಿನಲ್ಲುಳಿಯುತ್ತದೆ ಎನ್ನುವ ಕಾರಣಕ್ಕೆ ನಾನು ಚಿತ್ರ ನೋಡುವುದಕ್ಕೇ ಹೋಗಲಿಲ್ಲ. ಚಿತ್ರ ಬಿಡುಗಡೆಯಾಗಿ ವಿಮರ್ಶೆ ನೋಡಿದ ಮೇಲೆಯೇ ಅದು ಫ್ರೆàಮ್‌ ಟು ಫ್ರೆàಮ್‌ ರೀಮೇಕ್‌ ಅಂತ ಗೊತ್ತಾಗಿದ್ದು. ಬಹುಶಃ ಫ್ರೆàಮ್‌ ಟು ಫ್ರೆàಮ್‌ ಅಂತ ಗೊತ್ತಿದ್ದರೆ ಮಾಡುತ್ತಿರಲಿಲ್ಲ. ಅವರು ಸಿಡಿ ತಂದಾಗ ನಾನು ನೋಡಬೇಕಿತ್ತು. ನಾನು ನನ್ನ ಹಠದಲ್ಲಿ ಆ ಚಿತ್ರ ನೋಡಲಿಲ್ಲ. ರಾಬರ್ಟ್‌ ಡಿ ನೀರೋ ಮಾಡಿದ ಪಾತ್ರ ಮನಸ್ಸಿನಲ್ಲಿ ಕೂತರೆ, ಅದು ಸಬ್‌ಕಾನ್ಶಿಯಸ್‌ ಆಗಿ ಕಾಡುತ್ತಿರುತ್ತದೆ ಅಂತ ನೋಡಲಿಲ್ಲ. ಸ್ವಲ್ಪ ಆಸಕ್ತಿ ವಹಿಸಿ ನೋಡಬೇಕಿತ್ತು’ ಎನ್ನುತ್ತಾರೆ ಅನಂತ್‌ ನಾಗ್‌.

“ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕೊಡುಗೈ ರಾಮಣ್ಣ ರೈ’ ಅಲ್ಲದೆ “ಕವಲು ದಾರಿ’ ಚಿತ್ರವೂ ಮುಗಿಯುವ ಹಂತಕ್ಕೆ ಬಂದಿದೆಯಂತೆ. ಈ ಮಧ್ಯೆ ಒಂದಿಷ್ಟು ಸಿನಿಮಾಗಳ ಆಫ‌ರ್‌ ಬರುತ್ತಿದ್ದು, ಇತ್ತೀಚೆಗೆ ಯಾರೋ ಮಲಯಾಳಂ ಸಿಡಿ ತೆಗೆದುಕೊಂಡು ಬಂದಿದ್ದರಂತೆ. ಆದರೆ, ಅನಂತ್‌ ನಾಗ್‌ ಅವರು ಚಿತ್ರದಲ್ಲಿ ನಟಿಸುವುದಕ್ಕೆ ನಿರಾಕರಿಸಿದ್ದಾರೆ. “ತಗೊಂಡು ಹೋಗಿ ಅಂತ ಕಳಿಸಿದೆ. ಇಷ್ಟಕ್ಕೂ ರೀಮೇಕ್‌ ಮಾಡುವ ಅವಶ್ಯಕತೆಯಾದರೂ ಏನಿದೆ’ ಎಂಬುದು ಅವರ ಪ್ರಶ್ನೆ.

ಟಾಪ್ ನ್ಯೂಸ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

Sandalwood: ಸ್ಯಾಂಡಲ್‌ವುಡ್‌ಗೆ ಪ್ರಿಯಾಂಕಾ ಸೋದರ ಎಂಟ್ರಿ

Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ

Ranjani Raghavan: ನಟಿ ರಂಜನಿ ಈಗ ನಿರ್ದೇಶಕಿ

Sandalwood: ಮತ್ತೆ ಬಂದ ಪ್ರಿಯಾ ಆನಂದ

Sandalwood: ಮತ್ತೆ ಬಂದ ಪ್ರಿಯಾ ಆನಂದ

Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ

Bhuvanam Gaganam Movie: ಪ್ರೇಮಿಗಳ ದಿನಕ್ಕೆ ಭುವನಂ ಗಗನಂ ತೆರೆಗೆ

KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್‌ ನಗು 

KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್‌ ನಗು 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

complaint

Manipal: ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ; ದೂರು ದಾಖಲು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.