ಖಾಸಗಿ ಸುದ್ದಿ ವಾಹಿನಿ ವಿರುದ್ಧ ಸಮರ : ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತ ನಟ ಅನಿಶ್
Team Udayavani, Jul 2, 2021, 1:09 PM IST
ಬೆಂಗಳೂರು : ನಟ ಅನಿಶ್ ತೇಜೇಶ್ವರ ತಮ್ಮ ಸ್ನೇಹಿತ ನಟ ರಕ್ಷಿತ್ ಶೆಟ್ಟಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ತನ್ನ ಹಾಗೂ ರಕ್ಷಿತ್ ನಡುವಿನ ಸ್ನೇಹ ಸಂಬಂಧ ಎಂತಹದು ಎಂಬುದರ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿರುದ್ಧ ಕನ್ನಡದ ಖಾಸಗಿ ವಾಹಿನಿಯೊಂದು ಮಾನಹಾನಿ ಮಾಡುವಂತಹ ಕಾರ್ಯಕ್ರಮ ಪ್ರಸಾರ ಮಾಡಿದೆ. ಇದರ ವಿರುದ್ಧ ಆಕ್ರೋಶ ಗೊಂಡ ರಕ್ಷಿತ್ ನಿನ್ನೆಯಷ್ಟೆ ( ಜುಲೈ 1) ಬಹಿರಂಗ ಸವಾಲು ಹಾಕಿದ್ದಾರೆ. ಜೊತೆಗೆ ನನ್ನ ಜೊತೆ ಕೆಲಸ ಮಾಡಿದವರು ನನ್ನ ಬಗ್ಗೆ ಹೇಳಿಕೊಳ್ಳುತ್ತಾರೆ ಎಂದು ನುಡಿದಿದ್ದರು. ಅದರಂತೆ ಇಂದು ಅನಿಶ್ ತಮ್ಮ ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿಯವರ ವ್ಯಕ್ತಿತ್ವ ಹಾಗೂ ಚಿತ್ರರಂಗದ ಬಗ್ಗೆ ಅವರಲ್ಲಿರುವ ಆಸಕ್ತಿ ಬಗ್ಗೆ ಬರೆದುಕೊಂಡಿದ್ದಾರೆ.
ಅನಿಶ್ ಅವರ ಫೇಸ್ ಬುಕ್ ಪೋಸ್ಟ್ ಇಲ್ಲಿದೆ ನೋಡಿ :
‘ನನ್ನ ಹನ್ನೊಂದು ವರ್ಷಗಳ ಸಿನಿಮಾ ಜೀವನದ ಪಯಣದಲ್ಲಿ ನಾನು ರಕ್ಷಿತ್ ನ ಕಂಡಂತೆ,ತನಗೆ ಕೆಲಸ ಕೊಟ್ಟವರಿಗೆ,ಕಷ್ಟದಲ್ಲಿ ಇರುವ ತನ್ನ ಸುತ್ತಮುತ್ತಲಿನ ಸ್ನೇಹ ಬಳಗಕ್ಕೆ ಮತ್ತು ನಿರ್ಮಾಪಕರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ನಾನು ಕಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ರು,ಆತ ಮೊದಲ ದಿನ ಹೇಗೆ ಇದ್ದ ಇಂದಿಗೂ ಹಾಗೆಯೇ ಇದ್ದಾನೆ, ಸರಳ ಸಜ್ಜನ ಮತ್ತು ಕೆಲಸ ಅಂದ್ರೆ ದೇವರ ಸಮಾನವಾಗಿ ಕಾಣುತ್ತಾನೆ.. ತುಂಬಾ ಜನ ನನ್ನ ಗೆಳೆಯರು ನನ್ನ ಜೊತೆ ಸಿನಿ ಬದುಕು ಶುರು ಮಾಡಿ ಇಂದು ಸ್ಟಾರ್ ಗಳಾಗಿದ್ದಾರೆ ಆದರೆ ಮೊದಲ ದಿನ ಇದ್ದ ಹಾಗೆ ಇಂದಿಗೂ ತನ್ನ ವ್ಯಕ್ತಿತ್ವದಲ್ಲಿ ಒಂದು ಎಳ್ಳಿನಷ್ಟು ಬದಲಾವಣೆ ಆಗದ ವ್ಯಕ್ತಿ ಅಂದ್ರೆ ರಕ್ಷಿತ್ ಶೆಟ್ಟಿ. ಆತನಿಗೆ ಸಿಂಪಲ್ ಸ್ಟಾರ್ ಎಂದು ಸುಮ್ಮನೇ ಬಂದ ಪಟ್ಟವಲ್ಲ..He Is Simple Star
ಒಬ್ಬ ಸಾಮಾನ್ಯ ನಟ,ಸ್ಟಾರ್ ಆಗಿ ಮಾರ್ಪಾಡು ಆಗುವ ಪ್ರಕ್ರಿಯೆಯಲ್ಲಿ ತನ್ನ ಶ್ರಮ,ಕೆಲಸದ ಮೇಲಿನ ಶ್ರದ್ಧೆ ಮತ್ತು ಅಭಿಮಾನಗಳ ಬೆಂಬಲದ ಜೊತೆಗೆ ಮಾಧ್ಯಮಗಳ ಕೊಡುಗೆ ಕೂಡ ಇರುತ್ತದೆ. ಆದರೆ ಯಾವುದೋ ಒಂದು ಗಾಳಿ ಸುದ್ದಿಯನ್ನ ನಂಬಿ ಅದನ್ನ ಪರಿಶೀಲಿಸದೆ ಈ ರೀತಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ತೇಜೋವಧೆ ಮಾಡುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ… ರಕ್ಷಿತ್ ಶೆಟ್ಟಿಯಿಂದ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗೆ ಬದುಕು ಕಟ್ಟಿಕೊಂಡಿರುವವರ ಸಂಖ್ಯೆ ಬಹಳ ದೊಡ್ಡ ಮಟ್ಟದಲ್ಲಿ ಇದೆ,ಅಂಥವರ ಬಗ್ಗೆ ಇಲ್ಲ ಸಲ್ಲದ ಆರೋಪ ಸಹಿಸುವಂತದಲ್ಲ
ಉದಾಹರಣೆ: ಮಾಧ್ಯಮ ಲೋಕದಲ್ಲಿ ನಿಮಗೆ ತುಂಬಾ ಬೇರೆ ಚಾನಲ್ ನವರು ಪ್ರತಿಸ್ಪರ್ಧಿಗಳಿರುತ್ತಾರೆ ನಿಮ್ಮನ್ನ ಹಿಂದಿಕ್ಕಿ ಮುನ್ನುಗಲು ಆಗದೆ ನಿಮ್ಮ ಚಾನಲ್ ಮತ್ತು ಅಲ್ಲಿ ಕೆಲಸ ಮಾಡುವ ಪ್ರಮುಖರ ಬಗ್ಗೆ ಇಲ್ಲದ ಸಲ್ಲದ ಆರೋಪ ಮಾಡುತ್ತಾ ಗಾಳಿ ಸುದ್ದಿ ಹಬ್ಬಿಸುತ್ತಾರೆ, ಅದನ್ನ ಪರಿಶೀಲಿಸದೆ ಜನರು ನಂಬಿ ನಿಮ್ಮ ಬಗ್ಗೆ ನಿಮ್ಮ ಪ್ರತಿಷ್ಠಿತ ಸಂಸ್ಥೆಯ ಬಗ್ಗೆ ಅಲ್ಲಿಯ ಪ್ರಮುಖರ ಬಗ್ಗೆ ಕಟುವಾಗಿ ಟೀಕಿಸಿದರೆ ನಿಮಗೆ ಹೇಗೆ ಆಗ ಬೇಡ ಹೇಳಿ… ತಪ್ಪು ಮಾಡದೆ ತಪ್ಪಿನ ಹೊರೆಯನ್ನ ಹೊರುವ ನೋವು ಆ ಹೊರೆಯನ್ನ ಹೊತ್ತವರಿಗೆ ಗೊತ್ತಿರುತ್ತದೆ…
ನಿಮ್ಮ ನಿಮ್ಮ ಸಂಸ್ಥೆ ಮತ್ತು ಅಲ್ಲಿ ಕೆಲಸ ಮಾಡುವವರ ಬಗ್ಗೆ ಹೇಗೆ ನಿಮಗೆ ಸತ್ಯ ಗೊತ್ತಿರುತದ್ದೆಯೋ ಹಾಗೆ ನನ್ನ ಗೆಳಯನ ಬಗ್ಗೆ ನನಗೆ ಸಂಪೂರ್ಣವಾಗಿ ಗೊತ್ತಿದೆ.. ತಿಳಿಯದಯೆ ಮಾಡಿರುವ ಅಥವ ಸರಿಯಾದ ಮಾಹಿತಿ ಇಲ್ಲದೆ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಿ?
ರಕ್ಷಿತ್ ಶೆಟ್ಟಿ ಮೇಲೆ ನೀವು ಮಾಡಿರುವ ಅಷ್ಟು ಆರೋಪಗಳಿಗೆ ಅವರೆ ಜುಲೈ 11ರಂದು ಉತ್ತರ ಕೊಡಲಿದ್ದಾರೆ.
ರಕ್ಷಿತ್ ಎಂದಿಗೂ ಯಾರಿಗೂ ಅನ್ಯಾಯ ಮಾಡಿದವನಲ್ಲ ಎಲ್ಲರೂ ಒಟ್ಟಾಗಿ ಗೆಲ್ಲಬೇಕು ಎನ್ನುವ ಮನಸ್ಥಿತಿಯ ಮನುಷ್ಯ. “ಒಂದು ಒಳ್ಳೆಯ ವ್ಯಕ್ತಿತ್ವಕ್ಕೆ,ಕಾಗೆಯ ಮಾತು ಕೇಳಿ ಕುಕ್ಕುವ ಕೆಲಸ ಮಾಡಬೇಡಿ” ನಿಮ್ಮ ಅನಿಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.