ತಪ್ಪಿತಸ್ಥರು ಯಾರೆಂದು ತಿಳಿದರೆ ಅವರನ್ನ ಮಾತ್ರ ನಾನು ಸುಮ್ಮನೇ ಬಿಡೋದಿಲ್ಲ
Team Udayavani, Jul 12, 2021, 3:45 PM IST
ಮೈಸೂರು: ತಮ್ಮ ಹೆಸರಿನಲ್ಲಿ ವಂಚನೆಗೆ ಯತ್ನ ನಡೆದಿರುವ ಕುರಿತು ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ದರ್ಶನ್, ಪ್ರಕರಣದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಇದು ಆರಂಭವಾಗಿದ್ದು ಕಳೆದ ಏಪ್ರಿಲ್ 9 ರಂದು. ಆದರೆ ಕೊರೊನಾ ಲಾಕ್‌ಡೌನ್ ಇದ್ದ ಕಾರಣ ತೋಟದಲ್ಲಿದ್ದೆ. ನಿರ್ಮಾಪಕ ಉಮಾಪತಿ ಜೂನ್ 13ರಂದು ನನಗೆ ಕರೆ ಮಾಡಿದ್ದರು. ಕರೆ ಮಾಡಿ 25 ಕೋಟಿ ಲೋನ್ಗೆ ನಾನು ಶ್ಯೂರಿಟಿ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದರು. ಅವರೇ ನನ್ನ ಹಾಗೂ ಅರುಣಾ ಕುಮಾರಿ ಜೊತೆ ಕಾನ್ಫರೆನ್ಸ್ ಕರೆ ಹಾಕಿದ್ದರು.
ಹರ್ಷ ನನಗೆ ಹಳೆಯ ಪರಿಚಯ. ಉಮಾಪತಿಯೇ ಅರುಣಾ ಕುಮಾರಿಯನ್ನ ನನ್ನ ಬಳಿಗೆ ಕರೆದುಕೊಂಡು ಬಂದಿದ್ರು. ಈ ಅರುಣಾ ಕುಮಾರಿ ಪ್ರತಿಯೊಂದು ವಿಚಾರವನ್ನ ಸತ್ಯ ಎಂಬಂತೆ ನನ್ನ ಮುಂದೆ ವಿವರಣೆ ನೀಡಿದ್ದರು. ನಾನು ರಾಕೇಶ್ ಕುಮಾರ್ಗೆ ಕರೆ ಮಾಡಿ ಅರುಣಾ ಕುಮಾರಿ ಜೊತೆ ಮಾತನಾಡುವಂತೆ ಹೇಳಿದೆ. ಆಕೆ ಅವರಿಗೂ ಸಂಪೂರ್ಣ ವಿವರಣೆ ನೀಡಿದರು. ತೋಟ ನನ್ನ ಪತ್ನಿಯ ಹೆಸರಲ್ಲಿ ಇರೋದ್ರಿಂದ ನಾನು ಹೇಗೆ ಶ್ಯೂರಿಟಿ ನೀಡಲು ಸಾಧ್ಯ ಎಂದು ಅರುಣಾ ಕುಮಾರಿಯಲ್ಲಿ ಹೇಳಿದ್ದೆ. ಆದರೆ ಆಕೆ ತಾನು ತೋಟ ನೋಡಲೇಬೇಕೆಂದು ಹೇಳಿದರು.
ಆಕೆ ಹರ್ಷ, ಪತ್ನಿ ಊರ್ವಶಿ ಹೆಸರನ್ನೂ ಹೇಳಿದ್ದಳು. ಅರುಣಾ ಕುಮಾರಿ ಎಲ್ಲರ ಹೆಸರನ್ನ ಸಾರಾ ಸಾಗಾಟಾಗಿ ಹೇಳಿದ್ದರಿಂದ ನಾನೂ ಮೊದಲು ಆಕೆಯನ್ನ ನಂಬಿದ್ದೆ. ಆಕೆಯ ಜೊತೆ ಇನ್ನಿಬ್ಬರೂ ಹುಡುಗರು ಸಹ ಇದ್ದರು. ರಾಕೇಶ್ ಹಾಗೂ ಹರ್ಷ ತೋಟಕ್ಕೆ ಬಂದಿದ್ದರು. ಹರ್ಷರನ್ನ ತೋಟದಲ್ಲಿ ನೋಡಿದ ಅರುಣಾ ಕುಮಾರಿ ಶಾಕ್ ಆಗಿದ್ದರು.
ಈ ಮೊದಲು ಹರ್ಷ ಸಾಲಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದರು ಎಂದು ಹೇಳಿದ್ದ ಅರುಣಾ ಬಳಿಕ ಹರ್ಷ ಯಾರೆಂದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ಹರ್ಷಾರ ಹಳೆಯ ಫೋಟೋವನ್ನ ಮಾತ್ರ ಅರುಣಾ ಕುಮಾರಿ ಗುರುತಿಸುತ್ತಿದ್ದರು. ಆಕೆಯ ಬಳಿ 2 ಸಿಮ್ ಇತ್ತು. ಇದರಲ್ಲಿ ಆಕೆಯ ಪತಿ ಕುಮಾರ್ ಎಂದು ತಿಳಿದಿದೆ. ಕುಮಾರ್ ಹಾಗೂ ಅರುಣಾ ಕುಮಾರಿ ಕಳೆದ 8 ವರ್ಷಗಳಿಂದ ದೂರವೇ ಇದ್ದಾರೆ. ಆಕೆಯ ದ್ವಿತೀಯ ಪಿಯುಸಿ ಕೂಡ ಪಾಸ್ ಆಗಿಲ್ಲ. ಇನ್ನು ಮ್ಯಾನೇಜರ್ ಆಗೋಕೆ ಹೇಗೆ ಸಾಧ್ಯ ಎಂದು ಆಕೆಯ ಪತಿ ಕುಮಾರ್ ಹೇಳಿದ್ದಾರೆ.
ಸಂಪೂರ್ಣ ಘಟನೆ ಗೊಂದಲಮಯವಾಗಿತ್ತು. ಈಕೆ ಧೀರಜ್ ಪ್ರಸಾದ್ರಿಂದ ಒತ್ತಡ ಇದೆ ಎಂದು ನನ್ನ ಬಳಿ ಹೇಳಿದ್ದಳು. ಈಕೆ ಫೇಸ್ಬುಕ್ನಲ್ಲಿ ರಾಕೇಶ್ ಶರ್ಮಾ ಫೋಟೋ ಡೌನ್ಲೋಡ್ ಮಾಡಿದ್ದಳು. ಬ್ಯಾಂಕ್ನಲ್ಲಿ ವಿಚಾರಿಸಿದ ವೇಳೆ ಈಕೆ ಫೇಕ್ ಎಂದು ತಿಳಿದಿದೆ.
ಕೂಡಲೇ ನಾವು ಉಮಾಪತಿ ಭೇಟಿ ಮಾಡಲು ಮುಂದಾದೆವು. ಅವರೇ ಅರುಣಾ ಕುಮಾರಿ ಭೇಟಿ ಮಾಡಿಸಿದ್ದರಿಂದ ನಮಗೂ ಸ್ಪಷ್ಟನೆ ಬೇಕಿತ್ತು. ಈ ಪ್ರಕರಣದಲ್ಲಿ ನಾನು ಯಾರನ್ನೂ ದೂಷಿಸುತ್ತಿಲ್ಲ. ನಾನೇ ಉಮಾಪತಿಗೆ ಪ್ರಕರಣ ಸಂಬಂಧ ದೂರನ್ನ ನೀಡಲು ಹೇಳಿದ್ದೆ. ದೂರು ನೀಡಿದ ಬಳಿಕ ಅರುಣಾ ಕುಮಾರಿ ತಾವು ಸತ್ಯ ಹೇಳೋದಾಗಿ ಹೇಳಿದ್ದರು. ಅಲ್ಲದೇ ಆಕೆ ಈ ಎಲ್ಲಾ ಪ್ರಕರಣಕ್ಕೆ ಉಮಾಪತಿಯೇ ಕಾರಣ ಎಂದು ಆಕೆ ಹೇಳಿದ್ದಾಳೆ ಎಂದು ದರ್ಶನ್ ಹೇಳಿದ್ದಾರೆ.
ಆಕೆ ಉಮಾಪತಿ ಹೆಸರನ್ನ ಹೇಳುತ್ತಿದ್ದಾಳೆ. ಉಮಾಪತಿ ಇನ್ನೊಂದು ರೀತಿ ಹೇಳುತ್ತಿದ್ದಾರೆ. ಇದು ಏನು ಗೊಂದಲ ಎಂದು ನಮಗೆ ತಿಳಿಯುತ್ತಿಲ್ಲ. ಇದನ್ನ ಅರುಣಾ ಕುಮಾರಿಯೇ ಸ್ಪಷ್ಟ ಪಡಿಸಬೇಕು ಎಂದು ದರ್ಶನ್ ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಹರ್ಷ, ನನ್ನನ್ನ ನೋಡುತ್ತಿದ್ದಂತೆ ಆಕೆ ಶಾಕ್ ಆಗಿದ್ದಳು. ಕೋವಿಡ್ ಟೈಂನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಆಕೆ ಬಂದಿದ್ದಳು. ಆಕೆ ಬಳಿ ಐಡಿ ಕಾರ್ಡ್ ಕೂಡ ಇರಲಿಲ್ಲ ಎಂದು ಹೇಳಿದ್ದಾರೆ.
ನಾನು ಈ ಪ್ರಕರಣದಲ್ಲಿ ಯಾರನ್ನೂ ದೂಷಿಸುತ್ತಿಲ್ಲ. ನಾನು ಅರುಣಾ ಕುಮಾರಿ ಹಾಗೂ ಉಮಾಪತಿಯನ್ನೇ ಮುಖಾಮುಖಿ ಮಾಡಿ ನಿಲ್ಲಿಸಿದ್ದೇನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತಪ್ಪಿತಸ್ಥರು ಯಾರೆಂದು ತಿಳಿದರೆ ಅವರನ್ನ ಮಾತ್ರ ನಾನು ಸುಮ್ಮನೇ ಬಿಡೋದಿಲ್ಲ ಎಂದು ಹೇಳಿದ್ರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.