ರಿಯಲ್ ‘ದುನಿಯಾ’:ಅಗಲಿದ ಅಮ್ಮನ ಮೂರ್ತಿ ಪ್ರತಿಷ್ಠಾಪಿಸಿದ ನಟ ವಿಜಯ್
Team Udayavani, Jul 17, 2021, 3:19 PM IST
ಬೆಂಗಳೂರು : ನಟ ದುನಿಯಾ ವಿಜಯ್ ಅವರು ಅಗಲಿದ ತಮ್ಮ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಈ ಮೂಲಕ ಅಮ್ಮನನ್ನು ಕಳೆದುಕೊಂಡ ನೋವನ್ನು ಮರೆಯಲು ಪ್ರಯತ್ನಿಸಿದ್ದಾರೆ.
ಕೋವಿಡ್ ಸೋಂಕಿನ ವಿರುದ್ಧ ಹೋರಾಡಿ ತಾಯಿಯನ್ನು ಬದುಕಿಸಿಕೊಂಡಿದ್ದ ದುನಿಯಾ ವಿಜಿ ಕೊನೆಗೂ ವಿಧಿಯಾಟದ ಮುಂದೆ ಸೋಲಬೇಕಾಯಿತು. ಕರೊನಾದಿಂದ ಗುಣಮುಖರಾಗಿದ್ದ ವಿಜಿ ಅವರ ತಾಯಿ ನಾರಾಯಣಮ್ಮ ಜುಲೈ 8ರಂದು ಕೊನೆಯುಸಿರೆಳೆದರು. ಇದೀಗ ತಮ್ಮನ್ನು ಅಗಲಿದ ಅಮ್ಮನಿಗಾಗಿ ಸಮಾಧಿ ಕಟ್ಟಿಸಿರುವ ವಿಜಿ, ಅಲ್ಲಿ ತಾಯಿಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.
ಇನ್ನು ವಿಜಯ್`ಗೆ ಸ್ಟಾರ್ ಪಟ್ಟ ಕೊಟ್ಟ ‘ದುನಿಯಾ’ ಚಿತ್ರದಲ್ಲಿ ಪ್ರೇಕ್ಷಕರನ್ನು ಕಾಡುವ ದೃಶ್ಯಗಳಲ್ಲಿ ಅದೂ ಒಂದು. ಚಿತ್ರದಲ್ಲಿ ತಾಯಿಗೆ ಸಮಾಧಿ ಕಟ್ಟಿಸುವ ಆಸೆ ಹೊತ್ತ ಹುಡುಗನ ಪಾತ್ರವದು. ಅದು ಸಿನಿಮಾದಲ್ಲಿ ಈಡೇರದೇ ಹೋದರೂ.. ನಿಜ ಜೀವನದಲ್ಲಿ ತಾಯಿಗೆ ಸಮಾಧಿ ಕಟ್ಟಿಸಿ, ಪ್ರತಿಮೆ ಸ್ಥಾಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.