‘ಪ್ರೇಮಂ’ ನಿರ್ದೇಶಕರೊಂದಿಗೆ ಫಾ ಫಾಸಿಲ್ ಹೊಸ ಚಿತ್ರ ‘ಪಾಟ್ಟು’
Team Udayavani, Sep 7, 2020, 5:51 PM IST
ಚೆನ್ನೈ: 2015ರ ಸೂಪರ್ ಹಿಟ್ ಚಿತ್ರ ‘ಪ್ರೇಮಂ’ ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಅವರು ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.
ಸಂಗೀತದ ಕಥೆಯ ಹಿನ್ನಲೆಯನ್ನು ಹೊಂದಿರುವ ಈ ಚಿತ್ರಕ್ಕೆ ‘ಪಾಟ್ಟು’ (ಹಾಡು) ಎಂದು ಹೆಸರಿಡಲಾಗಿದೆ ಮತ್ತು ಈ ಚಿತ್ರದಲ್ಲಿ ಮಳಯಾಲಂನ ವರ್ಸಟೈಲ್ ಆ್ಯಕ್ಟರ್ ಫಹಾದ್ ಫಾಸಿಲ್ (ಫಾ ಫಾಸಿಲ್) ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರೇಮಂನಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ಬಳಿಕವೂ ಆಲ್ಫೋನ್ಸ್ ಅವರು ಸುಮಾರು 5 ವರ್ಷಗಳ ಕಾಲ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ.
ಈ ಗ್ಯಾಪಿನಲ್ಲಿ ಆಲ್ಫೋನ್ಸ್ ಅವರು ‘ಪಾಟ್ಟು’ ಕಥೆಯನ್ನು ಫೈನಲ್ ಮಾಡಿದ್ದು, ಈ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಸಹ ಆಲ್ಫೋನ್ಸ್ ಅವರೇ ಮಾಡಲಿದ್ದಾರೆ. ಹಾಗಾಗಿ ಸಂಗೀತದ ಎಬಿಸಿಡಿ ಕಲಿಯಲು ಇಷ್ಟು ಸಮಯ ವ್ಯಯಿಸಿದ್ದಾಗಿ ಆಲ್ಫೋನ್ಸ್ ಅವರು ತಮ್ಮ ಫೇಸ್ಬಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ.
ಈ ಚಿತ್ರವನ್ನು ಯುಜಿಎಂ ಎಂಟೆರಟೈನ್ ಮೆಂಟ್ಸ್ ನವರು ನಿರ್ಮಾಣ ಮಾಡಲಿದ್ದಾರೆ.
ಪ್ರೇಮಂ ಬಳಿಕ ನಟ ಸಿಂಬು ಅಭಿನಯದಲ್ಲಿ ತಮಿಳು ಆ್ಯಕ್ಷನ್ ಸಿನೆಮಾ ಒಂದನ್ನು ಆಲ್ಫೋನ್ಸ್ ಅವರು ಅನೌನ್ಸ್ ಮಾಡಿದ್ದರು. ಆದರೆ ಬಳಿಕ ಆ ಪ್ರಾಜೆಕ್ಟ್ ಟೇಕಾಫ್ ಆಗಿರಲಿಲ್ಲ. ಬಳಿಕ 2017ರಲ್ಲಿ ತನ್ನ ಮುಂದಿನ ಚಿತ್ರ ಸಂಗೀತದ ಹಿನ್ನಲೆಯ ಕಥೆಯನ್ನು ಹೊಂದಿರಲಿದೆ ಎಂಬ ಸುಳಿವನ್ನು ಆಲ್ಫೋನ್ಸ್ ಅವರು ನೀಡಿದ್ದರು.
ಇನ್ನೆರಡು ತಿಂಗಳುಗಳಲ್ಲಿ ‘ಪಾಟ್ಟು’ ಚಿತ್ರ ಪ್ರಾರಂಭವಾಗುವ ನಿರೀಕ್ಷೆಯನ್ನು ನಿರ್ದೇಶಕರು ಇದೇ ಸಂದರ್ಭದಲ್ಲಿ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಮೋಲಿವುಡ್ ನ ವರ್ಸಟೈಲ್ ಆ್ಯಕ್ಟರ್ ಫಾ ಫಾಸಿಲ್ ಮತ್ತು ಸೂಪರ್ ಹಿಟ್ ಚಿತ್ರದ ನಿರ್ದೇಶಕ ಆಲ್ಫೋನ್ಸ್ ಹೊಸ ಚಿತ್ರದಲ್ಲಿ ಜೊತೆಯಾಗಿರುವುದು ಚಿತ್ರರಸಿಕರ ನಿರೀಕ್ಷೆಯನ್ನು ಗರಿಗೆದರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!
Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.