‘ರಾಜಕುಮಾರ್ ಕಾಲವಾದ ದಿನ’ ನೆನೆದು ಭಾವುಕರಾದ ನಟ ಜಗ್ಗೇಶ್
Team Udayavani, Apr 12, 2021, 1:49 PM IST
ಬೆಂಗಳೂರು: ಇಂದು ನಟಸಾರ್ವಭೌಮ ರಾಜಕುಮಾರ್ ಅವರ 15ನೇ ವರ್ಷದ ಪುಣ್ಯಸ್ಮರಣೆ. ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ವರನಟ ನಮ್ಮನ್ನು ಅಗಲಿ ಇಂದಿಗೆ 15 ವರ್ಷಗಳು ಗತಿಸಿವೆ.
ಮೊದಲಿನಿಂದಲೂ ದೊಡ್ಮನೆ ಕುಟುಂಬಕ್ಕೆ ಆಪ್ತರಾಗಿರುವ ನಟ ಜಗ್ಗೇಶ್, ರಾಜಕುಮಾರ ಅವರು ಕಾಲವಾದ ದಿನವನ್ನು ಇಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ರಾಜಣ್ಣನ ಸಾವಿನ ಸುದ್ದಿ ಕೇಳಿ ತಮಗಾಗಿದ್ದ ನೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.
ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆಯಲ್ಲಿ ಪಾಂಡವರು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಂಬರೀಶರವರ ಅಭಿಮಾನಿ ಮನೆಯಿಂದ ಬಂದಿದ್ದ ವಿಶೇಷ ಊಟದ ಸವಿದು ಕಾರಿನಲ್ಲಿ ಅರ್ಧಗಂಟೆ ಜಗ್ಗೇಶ್ ವಿಶ್ರಾಂತಿ ಪಡೆಯುತ್ತಿದ್ದರಂತೆ. ಇದ್ದಕ್ಕಿದ್ದಂತೆ ವಾಂತಿಬಾಬು ಎಂಬುವರು ಕಾರಿನ ಕಿಟಕಿ ಜೋರಾಗಿ ತಟ್ಟಿದರಂತೆ ಇದರಿಂದ ಜಗ್ಗೇಶ್ ಅವರ ಸಿಟ್ಟು ನೆತ್ತಿಗೇರಿತಂತೆ. ಕಾರಣ ಕೇಳಲು ಬಾಗಿಲು ತೆರೆದರೆ, ವಾಂತಿಬಾಬು ಹೇಳಿದ ‘ರಾಜಣ್ಣ ಹೋಗಿಬಿಟ್ಟರು’ ಎನ್ನುವ ಮಾತು ಜಗ್ಗೇಶ್ ಅವರಿಗೆ ಬರಸಿಡಿಲಿನಂತೆ ಅಪ್ಪಳಿಸತಂತೆ.
‘ಅಣ್ಣಾವ್ರ ಸಾವಿನ ಸುದ್ದಿ ಕೇಳಿ ಕೆಲ ನಿಮಿಷ ಏನು ಕಾಣಲಿಲ್ಲಾ, ಕೇಳಲಿಲ್ಲಾ. ನನ್ನ ತಂದೆ ಸತ್ತಾಗಲು ಹಾಗೆ ಆಯಿತು. ಯಾರಿಗೂ ಹೇಳದೆ ಹೊರಟವನೆ ಅಣ್ಣನ ಚಿತಾವಾಹನ ತಲುಪಿದೆ. ಕೊನೆವರೆಗು ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗು ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು. ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು. ರಾಜಣ್ಣ ನನ್ನ ಹೃದಯದಲ್ಲೆ ಲೀನವಾದರು.ಮತ್ತೆ ಬನ್ನಿ ಅಣ್ಣ’ ಎಂದು ಜಗ್ಗೇಶ್ ಅವರು ಭಾವುಕತೆಯಿಂದ ಟ್ವಿಟ್ ಮಾಡಿದ್ದಾರೆ.
ಏಪ್ರಿಲ್ 2006 ಮಧ್ಯಾಹ್ನ 1ಘಂಟೆಗೆ ಪಾಂಡವರು ಚಿತ್ರದ ಊಟದ ವಿರಾಮ!ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆ!ಅಂದು ಅಂಬರೀಶ ರವರ ಅಭಿಮಾನಿ ಮನೆಯಿಂದ ವಿಶೇಷ ಊಟದ ವ್ಯೆವಸ್ಥೆ ಇತ್ತು ಅಂದು ಅಂಬರೀಶರವರೆ ಎಲ್ಲರಿಗು ಪ್ರೀತಿಯಿಂದ ಊಟಬಡಿಸಿ ತಾವುತಿಂದರು!ಆಗ ಕ್ಯಾರಾವಾನ್ ವ್ಯೆವಸ್ಥೆ ಇರದ ಕಾರಣ ಎಲ್ಲ ನಟರು ಅವರವರ ಕಾರಿನಲ್ಲಿ a/cಹಾಕಿ pic.twitter.com/GRtdf5pWFq
— ನವರಸನಾಯಕ ಜಗ್ಗೇಶ್ (@Jaggesh2) April 12, 2021
ವಿಶ್ರಾಂತಿ ಪಡಿಯುವ ಅಭ್ಯಾಸ!
ನಾನು ಊಟ ಆದಮೇಲೆ 1/2ಘಂಟೆ ಮಲಗುವೆ!ನನಗೆ ತಂದರೆಕೊಡದಂತೆ ಸಹಾಯಕರು ಕಾವಲು ಇರುತ್ತಾರೆ!ನಾನು ಏಳುವವರೆಗು ಯಾರು ಹತ್ತಿರಬರೋಲ್ಲಾ!ಆ ನಂಬಿಕೆಯಲ್ಲೆ ನಿದ್ರೆಗೆ ಜಾರಿದೆ!
ಇದ್ದಕ್ಕಿದ್ದಂತೆ ವಾಂತಿಬಾಬು ಕಿಟಕಿ ಜೋರಾಗಿ ತಟ್ಟಿದ ಸಿಟ್ಟು ನೆತ್ತಿಗೇರಿತು!ಕಾರಣ ಕೇಳಲು ಬಾಗಿಲು ತೆರೆದೆ!ವಾಂತಿಬಾಬು ರಾಜಣ್ಣ ಹೋಗಿಬಿಟ್ಟರು— ನವರಸನಾಯಕ ಜಗ್ಗೇಶ್ (@Jaggesh2) April 12, 2021
ಎಂದ ಕೆಲನಿಮಿಷ ಏನು ಕಾಣಲಿಲ್ಲಾ ಕೇಳಲಿಲ್ಲಾ!ನನ್ನ ತಂದೆ ಸತ್ತಾಗಲು ಹಾಗೆ ಆಯಿತು!
ಯಾರಿಗು ಹೇಳದೆ ಹೊರಟವನೆ ಅಣ್ಣನ ಚಿತಾವಾಹನ ತಲುಪಿದೆ!ಕೊನೆವರೆಗು ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗು ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು!ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು!
ರಾಜಣ್ಣ ನನ್ನ ಹೃದಯದಲ್ಲೆ ಲೀನವಾದರು!ಮತ್ತೆ ಬನ್ನಿ ಅಣ್ಣ!— ನವರಸನಾಯಕ ಜಗ್ಗೇಶ್ (@Jaggesh2) April 12, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.