ಸಂಬಳ ಕೊಡದೆ ಮೋಸ ಮಾಡಿದ್ದ ನಿರ್ಮಾಪಕ : ಸಂಕಷ್ಟದ ಸಮಯ ಮೆಲುಕು ಹಾಕಿದ ಜಗ್ಗಣ್ಣ
Team Udayavani, Apr 21, 2021, 3:43 PM IST
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಚಿತ್ರರಂಗದಲ್ಲಿ ಕಷ್ಟಪಟ್ಟು ಮೇಲೆ ಬಂದವರು. ಸೋಲು-ಗೆಲುವು ಸಮನಾಗಿ ಕಂಡವರು. ಕಷ್ಟ-ಕಾರ್ಪಣ್ಯಗಳನ್ನು ದಾಟಿ ಸಾಧನೆಯ ಶಿಖರ ಏರಿದವರು.
ಕನ್ನಡ ಚಿತ್ರರಂಗದ ನೆಚ್ಚಿನ ನವರಸ ನಾಯಕ ಬಣ್ಣದ ಲೋಕದಲ್ಲಿ ತಾವು ಅನುಭವಿಸಿದ ಬವಣೆಗಳ ಕುರಿತು ಆಗಾಗ ಹೇಳಿಕೊಳ್ಳುತ್ತಿರುತ್ತಾರೆ. ಜನಪ್ರಿಯ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಂತೂ ಜಗ್ಗಣ್ಣ ರಿಯಲ್ ಕಹಾನಿ ಕೇಳಿ ಸಾಕಷ್ಟು ಜನ ಕಣ್ಣೀರು ಸುರಿಸಿದ್ದುಂಟು.
ಇದೀಗ ನಗೆ ನಟ ಜಗ್ಗೇಶ್ ಅವರು ತಮಗೆ ನಿರ್ಮಾಪಕರೋರ್ವರು ಮೋಸ ಮಾಡಿದ್ದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಜಗ್ಗೇಶ್ ಅವರು ನಟಿಸಿದ್ದ 1994 ರಲ್ಲಿ ತೆರೆ ಕಂಡಿದ್ದ ‘ರಾಯರ ಮಗ’ ಸಿನಿಮಾ ಭರ್ಜರಿಯಾಗಿ ಯಶಸ್ಸು ಕಂಡಿತ್ತು. ಅಂದು ರಾಜ್ಯಾದ್ಯಂತ ಹೌಸ್ ಪ್ರದರ್ಶನ ಕಂಡಿದ್ದ ಈ ಸಿನಿಮಾ, ನಿರ್ಮಾಪಕರಿಗೆ ಒಳ್ಳೆಯ ದುಡ್ಡು ತಂದು ಕೊಟ್ಟಿತ್ತು. ಆದರೆ, ಆ ನಿರ್ಮಾಪಕ ಮಾತ್ರ ಈ ಸಿನಿಮಾದ ನಾಯಕ ನಟ ಜಗ್ಗೇಶ್ ಅವರಿಗೆ ಸಂಬಳ ( ಸಂಭಾವನೆ) ಕೊಡದೆ ಮೋಸ ಮಾಡಿದರಂತೆ.
ನಿರ್ಮಾಪಕರಿಂದಾದ ಮೋಸವನ್ನು ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಜಗ್ಗೇಶ್, ಅಂದು ಸ್ವಂತ ಮನೆಯಿರಲಿಲ್ಲ, ತಿಂಗಳಿಗೆ 4000 ರೂ. ಕೊಟ್ಟು ಬಾಡಿಗೆ ಮನೆಯಲ್ಲಿದ್ದೆ. ಸಾಲ ಮಾಡಿ ಸಂಸಾರ ನಿಭಾಯಿಸುತ್ತಿದ್ದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಿಟ್ ಕೊಟ್ಟರು ಕಾಸಿಲ್ಲದೆ ಬರಿ ಹೆಸರಿಗೆ ಬದುಕಿದವರು ನಾವು ಎಂದು ಹೇಳಿಕೊಂಡಿದ್ದಾರೆ.
1994 ರಾಯರಮಗ ಚಿತ್ರ…..
ಇಂದಿನ ಪೊಗರು ನಿರ್ಮಾಪಕ ಗಂಗಾಧರ ಅವರ ತಂದೆ ಈ ಚಿತ್ರದ ವಿತರಕರು!
ಅಂದಿನ ಮೆಗಹಿಟ್ ಚಿತ್ರ!ಆದರು ನನಗೆ ಸ್ವಂತ ಮನೆಯಿರಲಿಲ್ಲಾ 4000 ಬಾಡಿಗೆ ಮನೆಯಲ್ಲಿ ಇದ್ದೆ!ಈ ಚಿತ್ರದ ನಿರ್ಮಾಪಕ ನನಗೆ ಸಂಬಳ ಕೊಡದೆ ಮೋಸ ಮಾಡಿದ!ಸಾಲಮಾಡಿ ಸಂಸಾರ ನಿಭಾಯಿಸುತ್ತಿದ್ದೆ!ಹಿಟ್ ಕೊಟ್ಟರು ಕಾಸಿಲ್ಲದೆ ಬರಿ ಹೆಸರಿಗೆ ಬದುಕಿದವರು ಅಂದು! https://t.co/FjDooENG0y— ನವರಸನಾಯಕ ಜಗ್ಗೇಶ್ (@Jaggesh2) April 20, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.