ಜನರನ್ನು ನಿರ್ದಯವಾಗಿ ಹೊಡೆಯಬೇಡಿ : ಪೊಲೀಸರಿಗೆ ನಟ ಜಗ್ಗೇಶ್ ಮನವಿ
Team Udayavani, May 9, 2021, 1:36 PM IST
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ತಮ್ಮ ಅಭಿಮಾನಿಗಳಿಗೆ ಹಾಗೂ ರಾಜ್ಯದ ಜನತೆಗೆ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಕೇವಲ ಜಾಗೃತಿ ಮಾತ್ರವಲ್ಲ ಅಗತ್ಯ ಇರುವವರಿಗೆ ತಮ್ಮ ಕೈಲಾದ ಸಹಾಯವನ್ನೂ ಮಾಡುತ್ತಿದ್ದಾರೆ.
ಸಮಾಜದ ಕುರಿತು ತಮಗಿರುವ ಕಾಳಜಿ ವ್ಯಕ್ತಪಡಿಸುತ್ತಿರುವ ಜಗ್ಗೇಶ್ ಅವರು ಇದೀಗ ರಾಜ್ಯದ ಪೊಲೀಸರಿಗೆ ಒಂದು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಹಾಗು ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ ವಾಹನ ಜಪ್ತಿಮಾಡಿ ತೊಂದರೆ ಇಲ್ಲಾ. ಆದರೆ, ನಿರ್ದಯವಾಗಿ ಲಾಟಿಯಲ್ಲಿ ಹೊಡೆಯಬೇಡಿ. ಯುವಕರಾದರೆ ಪರವಾಗಿಲ್ಲಾ ತಡೆದುಕೊಳ್ಳುತ್ತಾರೆ. ಆದರೆ, ವಯಸ್ಸಾದವರು ಪಾಪ ಯಾವ ಖಾಯಿಲೆ ಇರುತ್ತದೆ ಎಂದು ನಿಮಗೇನು ತಿಳಿದಿರುತ್ತದೆ. ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಲು ಪ್ರಾಣಹೋಗುವಂತೆ ಭಾರಿಸುತ್ತಾರೆ ಎಂದಿದ್ದಾರೆ.
ರಾಜ್ಯದ #ಆರಕ್ಷಕಇಲಾಖೆಯ ಮುಖ್ಯಸ್ತರಿಗೆ ವಿನಂತಿ!!
ಸರ್ಕಾರ ಹಾಗು ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ ವಾಹನ ಜಪ್ತಿಮಾಡಿ ತೊಂದರೆ ಇಲ್ಲಾ!!ಆದರೆ ನಿರ್ದಯವಾಗಿ ಲಾಟಿಯಲ್ಲಿ ಹೊಡೆಯಬೇಡಿ!!
ಯುವಕರಾದರೆ ಪರವಾಗಿಲ್ಲಾ ತಡೆಯುತ್ತಾರೆ!ಆದರೆ ವಯಸ್ಸಾದವರು ಪಾಪ ಯಾವ ಖಾಯಿಲೆ ಇರುತ್ತದೆ ನಿಮಗೇನು ತಿಳಿದಿರುತ್ತದೆ!ಕೆಲ ಅಧಿಕಾರಿಗಳು
ಒಂದು ಏಟುಕೊಟ್ಟು— ನವರಸನಾಯಕ ಜಗ್ಗೇಶ್ (@Jaggesh2) May 9, 2021
ಇನ್ನು ಜನರಿಗೂ ಕಿವಿ ಮಾತು ಹೇಳಿರುವ ಜಗ್ಗೇಶ್, ಈ ಹಾಳಾದ ಕೋವಿಡ್ ಮನುಕುಲದ ಅನ್ನ ದುಡಿಮೆ ನೆಮ್ಮದಿಯ ಕಸಿದಿದೆ. ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ಧರೆಯೇ ಹತ್ತಿ ಉರಿಯುತ್ತಿದೆ ದಯಮಾಡಿ ಸ್ವಲ್ಪ ದಿನ ವೈದ್ಯಲೋಕದ ಮಾತಿನಂತೆ ಕೆಲತಿಂಗಳು ಎಚ್ಚರವಾಗಿ ಇದ್ದುಬಿಡಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಭಯಪಡಿಸುವ ಬದಲು ಪ್ರಾಣಹೋಗುವಂತೆ ಭಾರಿಸುತ್ತಾರೆ!!ಈ ಹಾಳಾದ ಕೊರೋನ ಮನುಕುಲದ ಅನ್ನ ದುಡಿಮೆ ನೆಮ್ಮದಿಯ ಕಸಿದಿದೆ!!
ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ!!ಜನತೆಯಲ್ಲು ಮನವಿ ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ!ದರೆಯೇ ಹತ್ತಿ ಉರಿಯುತ್ತಿದೆ ದಯಮಾಡಿ ಸ್ವಲ್ಪದಿನ ವೈಧ್ಯಲೋಕದ ಮಾತಿನಂತೆ ಕೆಲತಿಂಗಳು ಎಚ್ಚರವಾಗಿ ಇದ್ದುಬಿಡಿpls?????— ನವರಸನಾಯಕ ಜಗ್ಗೇಶ್ (@Jaggesh2) May 9, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.