ಸತ್ಯ ಹೇಳಿ ಮುಗಿಸುವೆ, ಚರ್ಚೆಬೇಡ
ವಿವಾದಕ್ಕೆ ತಿರುಗಿದ ಪ್ಯಾನ್ ಇಂಡಿಯಾ ಮಾತು
Team Udayavani, Nov 30, 2020, 12:09 PM IST
ಚಿತ್ರರಂಗಕ್ಕೆಕಾಲಿಟ್ಟು ನಲವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಇತ್ತೀಚೆಗೆ ಪತ್ರಿಕಾಗೋಷ್ಟಿಯನ್ನುಕರೆದು, ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ತಮ್ಮ ನಾಲ್ಕು ದಶಕದ ಸಿನಿಯಾದ ಏಳು-ಬೀಳುಗಳನ್ನು ಮೆಲುಕು ಹಾಕಿದ್ದರು.
ಇದೇ ವೇಳೆ ಜಗ್ಗೇಶ್, “ಕನ್ನಡ ಚಿತ್ರರಂಗವನ್ನು ಹಾಗೂ ಕನ್ನಡತನವನ್ನು ಉಳಿಸೋದು ಮುಖ್ಯ. ಯಾವುದೋ ಅದು ಪ್ಯಾನ್ ಇಂಡಿಯಾ…? ಪ್ಯಾನ್ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡೋಲ್ಲಾ. ಪ್ಯಾನ್ ಇಂಡಿಯಾದಿಂದ ನಮ್ಮಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಜಗ್ಗೇಶ್ ಅವರ ಈ ಹೇಳಿಕೆ ಬಳಿಕ ವಿವಾದ ಸ್ವರೂಪ ಪಡೆದುಕೊಂಡಿತ್ತು. ಪ್ಯಾನ್ ಇಂಡಿಯಾ ಪರಿಕಲ್ಪನೆ ಬಂದ ಬಳಿಕಕನ್ನಡ ಚಿತ್ರರಂಗ ಬೇರೊಂದು ಹಂತಕ್ಕೆ ಹೋಗುತ್ತಿದೆ, ಅದು ಗೊತ್ತಿಲ್ಲದೇ ಮಾತನಾಡಬೇಡಿ ಎಂದುಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ಹೇಳಿಕೆ ವಿವಾದಕ್ಕೊಳಗಾಗಿ, ಸಾಕಷ್ಟು ಪರ-ವಿರೋಧ ಮಾತುಗಳುಕೇಳಿಬರುತ್ತಿದ್ದಂತೆ, ಟ್ವೀಟ್ ಮಾಡಿರುವ ಜಗ್ಗೇಶ್ ಈ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. “ತುಂಬಾ ಚರ್ಚೆ ಬೇಡ ಒಂದು ಸತ್ಯಹೇಳಿ ಮುಗಿಸುವೆ. ಸ್ನೇಹಿತರೆ ಇಂದಿನಕೆಲ ಸ್ವ ಪ್ರತಿಷ್ಠೆ ನಟರಿಗೆ ನಮ್ಮಂಥ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ! ನಾವು ಹೋದರೆ ಅಥವಾ ಸತ್ತರೆ ಇವರೆ ವಾರಸುದಾರರು ಎಂಬ ಕೆಟ್ಟ ಚಿಂತೆ ಇದೆ! ಕೆಲ ನಟರ ಆಡಿಯೋ ಸಂಭಾಷೆಯನ್ನು ಕೇಳಿಸಿದ್ದಾರೆ. ಹೀಗಿರಬೇಕಾದರೆ ಇಂದಿನ ಚಿಂತನೆ, ರಾಯರಿಗೆ ಒಪ್ಪಿಸಿ ಶಕ್ತಿ ಇರುವಷ್ಟು ದುಡಿಯುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ ಜಗ್ಗೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.