Actor Kiran Raj: ಅಖಾಡಕ್ಕೆ ರಾನಿ ರೆಡಿ: ಆಗಸ್ಟ್ 30ಕ್ಕೆ ತೆರೆಗೆ
Team Udayavani, Aug 7, 2024, 11:14 AM IST
ಕಿರಣ್ ರಾಜ್ ನಾಯಕರಾಗಿರುವ “ರಾನಿ’ ಚಿತ್ರ ಆಗಸ್ಟ್ 30ರಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರಕ್ಕೆ ಸೆನ್ಸಾರ್ ನಡೆದಿದ್ದು, ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಸ್ಟಾರ್ ಕ್ರಿಯೇಷನ್ ಬ್ಯಾನರ್ ಅಡಿಯಲ್ಲಿ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಗುರುತೇಜ್ ಶೆಟ್ಟಿ ಈ ಸಿನಿಮಾದ ನಿರ್ದೇಶಕರು. “ಇದು ಆ್ಯಕ್ಷನ್ ಚಿತ್ರವಾದರೂ, ಪಕ್ಕಾ ಕೌಟುಂಬಿಕ ಚಿತ್ರ. ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅವರನ್ನು ರಾನಿ ಚಿತ್ರದಲ್ಲಿ ನೋಡಬಹುದು. ಆರು ಆ್ಯಕ್ಷನ್ ಸನ್ನಿವೇಶಗಳಿದೆ. ಸೆಂಟಿಮೆಂಟ್ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ. ಆರು ಫೈಟ್‌ಗಳಿಗೆ ವಿನೋದ್ ಮಾಸ್ಟರ್ ಅವರೇ ಸಾಹಸ ನಿರ್ದೇಶನ ಮಾಡಿದ್ದಾರೆ. ಆರಂಭದಿಂದಲೂ ಸದ್ದು ಮಾಡುತ್ತಿರುವ ರಾನಿ ಆ.30ಕ್ಕೆ ತೆರೆಗೆ ಬರಲಿದೆ’ ಎನ್ನುವುದು ನಿರ್ದೇಶಕ ಗುರುತೇಜ್ ಶೆಟ್ಟಿ ಮಾತು.
ಇನ್ನು “ರಾನಿ’ ಸಿನಿಮಾದಲ್ಲಿ ನಾಯಕ ನಟ ಕಿರಣ್ ರಾಜ್ ಅವರೊಂದಿಗೆ ರವಿಶಂಕರ್, ಮೈಕೋ ನಾಗರಾಜ್ , ಉಗ್ರಂ ರವಿ, ಉಗ್ರಂ ಮಂಜು, ಬಿ. ಸುರೇಶ, ಮಂಡ್ಯ ರಮೇಶ್, ಸುಜಯ್ ಶಾಸ್ತ್ರಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರು, ಗಿರೀಶ್ ಹೆಗ್ಡೆ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.