ಸಿಡಿ ಪ್ರಕರಣ : ‘ಮಹಾನಾಯಕ’ ಪದ ಬಳಕೆಗೆ ನಟ ಪ್ರಥಮ್ ಆಕ್ರೋಶ
Team Udayavani, Mar 28, 2021, 5:35 PM IST
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದು ಎನ್ನಲಾಗುತ್ತಿರುವ ಸಿಡಿ ಪ್ರಕರಣದ ಸುತ್ತ ಗಿರಕಿ ಹೊಡೆಯುತ್ತಿರುವ ‘ಮಹಾನಾಯಕ’ ಪದ ಬಳಕೆಗೆ ಸಿನಿಮಾ ನಟ,ನಿರ್ದೇಶಕ ಹಾಗೂ ಬಿಗ್ ಬಾಸ್ ವಿಜೇತ ಪ್ರಥಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಥಮ್, ‘ದೇಶಕ್ಕೆ ಸಂವಿಧಾನ ಕೊಡುಗೆ ನೀಡಿದ ಅಂಬೇಡ್ಕರ್ ಅವರಿಗೆ ಗೌರವದಿಂದ ಮಹಾನಾಯಕ ಎಂದು ಕರೆಯುತ್ತಿದ್ದರು. ಈಗ CD ಮಾಡೋರನ್ನ ಮಹಾನಾಯಕ ಅಂತಿದ್ದಾರೆ. ಯಾವ ಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಟ ಜ್ಞಾನ ಬೇಡ್ವಾ ನಿಮ್ಗೆ? ಎಂದು ಪ್ರಶ್ನಿಸಿದ್ದಾರೆ.
ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಗೆ ಗೌರವದಿಂದ #ಮಹಾನಾಯಕ ಅಂತಿದ್ರು!ಈಗCDಮಾಡೋರನ್ನ #ಮಹಾನಾಯಕ ಅಂತಿದ್ದಾರೆ!ಯಾವಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಟಜ್ಞಾನ ಬೇಡ್ವಾ ನಿಮ್ಗೆ?ಅಂಬೇಡ್ಕರ್ ಫೋಟೋ ವಿರೂಪವಾದಾಗ ಅಗೌರವ ಆಗಲ್ಲ,ಇಂತ ಪದಗಳನ್ನ ಅಶ್ಲೀಲCDಕೇಸ್ ನವರಿಗೆ ಬಳಸಿದ್ರೆ ಅವಮಾನ ಮಾಡಿದಂತೆ!ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆಉಗೀರಿ!
— Olle Hudga Pratham (@OPratham) March 28, 2021
ಅಂಬೇಡ್ಕರ್ ಫೋಟೋ ವಿರೂಪವಾದಾಗ ಅಗೌರವ ಆಗಲ್ಲ, ಇಂತ ಪದಗಳನ್ನ ಅಶ್ಲೀಲ CD ಕೇಸ್ ನವರಿಗೆ ಬಳಸಿದ್ರೆ ನಿಜವಾದ ಅವಮಾನ ಮಾಡಿದಂತೆ. ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆ ಉಗೀರಿ ಎಂದು ಕಿಡಿ ಕಾರಿದ್ದಾರೆ.
ಕಳೆದ 26 ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಅಶ್ಲೀಲ ಸಿಡಿ ಪ್ರಕರಣ ಸಂಚಲನ ಮೂಡಿಸುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ಸಂಘರ್ಷಕ್ಕೆ ಈ ಪ್ರಕರಣ ಎಡೆ ಮಾಡಿಕೊಟ್ಟಿದೆ. ಆರಂಭದಲ್ಲೇ ಸಿಡಿ ಬಹಿರಂಗದ ಹಿಂದೆ ‘ಮಹಾನಾಯಕ’ನ ಕೈವಾಡ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ನಂತರ ದಿನಗಳಲ್ಲಿ ಉಭಯ ಪಕ್ಷಗಳ ಪ್ರಮುಖ ನಾಯಕರು ಸಹ ‘ಮಹಾನಾಯಕ’ ಪದ ಸಾಕಷ್ಟು ಬಾರಿ ಪ್ರಕರಣದಡಿ ಎಳೆದು ತಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.