“ಯಶ್ ಅವರೊಂದಿಗೆ ಸಿನಿಮಾ ಮಾಡುವ ಪ್ಲ್ಯಾನ್ ಯಿದೆ..” ಖ್ಯಾತ ನಟ ಕೊಟ್ರು ದೊಡ್ಡ ಸುಳಿವು?
Team Udayavani, Sep 25, 2022, 12:48 PM IST
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಮತ್ತು ಯಾರೊಂದಿಗೆ ಎಂಬುದು ಈಗಲೂ ರಿವೀಲ್ ಆಗಿಲ್ಲ. ಈ ಬಗ್ಗೆ ಯಶ್ ಬಗ್ಗೆ ಕೇಳಿದರೆ ಅವಸರ ಏನೂ ಇಲ್ಲ ಎಂದು ಹೇಳಿ ಪಾರಾಗುತ್ತಾರೆ. ಆದರೆ ಅಭಿಮಾನಿಗಳಿಗೆ ಯಶ್ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ದಿನ ಕಳೆದಂತೆ ಹೆಚ್ಚಾಗುತ್ತಿದೆ.
ʼಕೆಜಿಎಫ್ʼ ಸರಣಿ ಬಳಿಕ ಯಶ್ ಗೆ ಅಭಿಮಾನಿಗಳು “ವಿದೇಶ ತುಂಬಾ ಹೇ” ಎನ್ನುವಂತೆ ಇದ್ದಾರೆ. ಅಭಿಮಾನಿಗಳು ರಾಕಿ ಭಾಯ್ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಅಂತೆ – ಕಂತೆಯ ಮಾತುಗಳನ್ನಾಡುತ್ತಿದ್ದಾರೆ. ಈ ಮಾತಿಗೆ ಈಗ ಮತ್ತೊಬ್ಬ ಖ್ಯಾತ ನಟ ಪುಷ್ಟಿ ನೀಡಿದ್ದಾರೆ.
ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಈಗಾಗಲೇ ಹೊಂಬಾಳೆ ಫಿಲ್ಮ್ಸ್ ನೊಂದಿಗೆ ಕೈ ಜೋಡಿಸಿದ್ದಾರೆ. ಅವರು ʼಟೈಸನ್ʼ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಈಗ ಪೃಥ್ವಿರಾಜ್ ಯಶ್ ಬಗ್ಗೆ ಮಾತಾನಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನೊಂದಿಗೆ ಬಹುಭಾಷೆಯ ಸಿನಿಮಾವನ್ನು ಮಾಡುವ ಪ್ಲ್ಯಾನ್ ಇದೆ. ಯಶ್ ಅವರ ಜೊತೆ ಸಿನಿಮಾ ಮಾಡುವ ಅವಕಾಶ ಬಂದಿದೆ. ಎಲ್ಲಾ ಇಂಡಸ್ಟ್ರಿ ಅವರು ಒಟ್ಟಾಗಿ ಕೆಲಸ ಮಾಡುವ ಕಾಲ ಬಂದಿದೆ ಎಂದು ನಟ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಈ ವಿಡಿಯೋ ಸದ್ದು ಮಾಡುತ್ತಿದ್ದು, ರಾಕಿಭಾಯ್ ಅಭಿಮಾನಿಗಳು ಈ ವಿಡಿಯೋ ಹಂಚಿಕೊಂಡು ಇದು ಯಶ್ ಬಾಸ್ ಅವರ 19ನೇ ಚಿತ್ರವಾಗಿರಬಹುದೆನ್ನುವ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ.
ಆದರೆ ಇದುವರೆಗೆ ಪೃಥ್ವಿರಾಜ್ ಇದನ್ನು ಯಾವಾಗ ಮಾತಾನಾಡಿದ್ದಾರೆ ಎನ್ನುವುದು ಮಾತ್ರ ತಿಳಿದಿಲ್ಲ. ಮೇಲ್ನೋಟಕ್ಕೆ ಸಂದರ್ಶನವೊಂದರ ಕ್ಲಿಪ್ ಎನ್ನುವುದು ತಿಳಿಯುತ್ತದೆ.
ನರ್ತನ್ ಅವರೊಂದಿಗೆ ಯಶ್ ತಮ್ಮ 19ನೇ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು. ಆದರೆ ಅದು ತಡವಾಗುತ್ತದೆ ಎನ್ನಲಾಗಿದೆ. ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವುದು ಇನ್ನು ಕೂಡ ಅಧಿಕೃತವಾಗಿ ಘೋಷಣೆ ಆಗಿಲ್ಲ.
Expect The Unexpected#PrithvirajSukumaran and #Yash both are in talks for a bilingual movie?#KGFChapter2 #HombaleFilms @PrithviOfficial @TheNameIsYash pic.twitter.com/yPigIyUKgS
— Box Office Karnataka (@Karnatakaa_BO) September 23, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.